ರಾಜಸ್ಥಾನದಲ್ಲಿ 21 ಹೊಸ ಒಮಿಕ್ರಾನ್ ಪ್ರಕರಣಗಳು ವರದಿ

ರಾಜಸ್ಥಾನದಲ್ಲಿ ಶನಿವಾರ (ಡಿಸೆಂಬರ್ 25) ದಂದು 21 ಹೊಸ 'ಓಮಿಕ್ರಾನ್' ಪ್ರಕರಣಗಳು ವರದಿಯಾಗಿದ್ದು, COVID-19 ನ ಹೊಸ ರೂಪಾಂತರದಿಂದ ಸೋಂಕಿತರ ಸಂಖ್ಯೆ 43 ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

Written by - Zee Kannada News Desk | Last Updated : Dec 25, 2021, 07:51 PM IST
  • ರಾಜಸ್ಥಾನದಲ್ಲಿ ಶನಿವಾರ (ಡಿಸೆಂಬರ್ 25) ದಂದು 21 ಹೊಸ 'ಓಮಿಕ್ರಾನ್' ಪ್ರಕರಣಗಳು ವರದಿಯಾಗಿದ್ದು, COVID-19 ನ ಹೊಸ ರೂಪಾಂತರದಿಂದ ಸೋಂಕಿತರ ಸಂಖ್ಯೆ 43 ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ರಾಜಸ್ಥಾನದಲ್ಲಿ 21 ಹೊಸ ಒಮಿಕ್ರಾನ್ ಪ್ರಕರಣಗಳು ವರದಿ title=
file photo

ನವದೆಹಲಿ: ರಾಜಸ್ಥಾನದಲ್ಲಿ ಶನಿವಾರ (ಡಿಸೆಂಬರ್ 25) ದಂದು 21 ಹೊಸ 'ಓಮಿಕ್ರಾನ್' ಪ್ರಕರಣಗಳು ವರದಿಯಾಗಿದ್ದು, COVID-19 ನ ಹೊಸ ರೂಪಾಂತರದಿಂದ ಸೋಂಕಿತರ ಸಂಖ್ಯೆ 43 ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಈ ಕಾರಣಗಳಿಗಾಗಿ ವಿರಾಟ್ ಕೊಹ್ಲಿಯನ್ನು ಹೊಗಳಿದ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್

ಇವರಲ್ಲಿ 11 ಮಂದಿ ಜೈಪುರ, ಆರು ಮಂದಿ ಅಜ್ಮೀರ್ ಮತ್ತು ಮೂವರು ಉದಯಪುರದವರು.ರೋಗಿಗಳಲ್ಲಿ ಒಬ್ಬರು ಮಹಾರಾಷ್ಟ್ರದವರು ಎನ್ನಲಾಗಿದೆ.ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಫಲಿತಾಂಶಗಳು ಒಮಿಕ್ರಾನ್‌ ಎಂದು ತೋರಿಸಿದೆ ಎಂದು ಆರೋಗ್ಯ ಇಲಾಖೆಯ ವಕ್ತಾರರು ಶನಿವಾರ ತಿಳಿಸಿದ್ದಾರೆ.

ಇದನ್ನೂ ಓದಿ: Harbhajan Singh: ಕ್ರಿಕೆಟ್‌ನಿಂದ ನಿವೃತ್ತಿಯ ಬಳಿಕ ಹರ್ಭಜನ್ ಸಿಂಗ್ ರಾಜಕೀಯಕ್ಕೆ ಬರುತ್ತಾರಾ?

ಈ ಸೋಂಕಿತರಲ್ಲಿ ಐವರು ವಿದೇಶದಿಂದ ಮರಳಿದ್ದರೆ, ಮೂವರು ವಿದೇಶಿ ಪ್ರಯಾಣಿಕರೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ.ರಾಜ್ಯದಲ್ಲಿ ಒಮಿಕ್ರಾನ್‌ನ ಒಟ್ಟು 43 ಪ್ರಕರಣಗಳಲ್ಲಿ, 28 ಜೈಪುರದಿಂದ, ಏಳು ಅಜ್ಮೀರ್‌ನಿಂದ, ನಾಲ್ಕು ಸಿಕರ್‌ನಿಂದ, ಮೂರು ಉದಯಪುರದಿಂದ, ಮತ್ತು ಇನ್ನೊಬ್ಬರು ಮಹಾರಾಷ್ಟ್ರದ ರೋಗಿಯಾಗಿದ್ದಾರೆ.ರಾಜಸ್ಥಾನದಲ್ಲಿ ಈಗ ಸಕ್ರಿಯವಾಗಿರುವ COVID-19 ಪ್ರಕರಣಗಳ ಸಂಖ್ಯೆ 244 ಆಗಿದೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News