2021ರಲ್ಲಿಯೂ ಕೂಡ ಜಾರಿಯಲ್ಲಿರಲಿದೆ Corornavirus ಪ್ರಕೋಪ: ಡಾ.ರಣದೀಪ್ ಗುಲೇರಿಯಾ
ದೇಶದಲ್ಲಿ ಕರೋನಾ ಪ್ರಕರಣಗಳು ಹೆಚ್ಚಾಗಲು ಎರಡು ಪ್ರಮುಖ ಕಾರಣಗಳಿವೆ ಎಂದು ಡಾ. ಗುಲೇರಿಯಾ ಹೇಳಿದ್ದಾರೆ. ಒಂದೆಡೆ ಕೊರೊನಾ ಪರೀಕ್ಷೆಗಳು ಹೆಚ್ಚಾಗಿದ್ದು, ಇನ್ನೊಂದೆಡೆ ಜನರು ನಿಯಮಗಳನ್ನು ಸರಿಯಾಗಿ ಅನುಸರಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ನವದೆಹಲಿ: ಭಾರತದಲ್ಲಿ ಕರೋನಾ ಸಾಂಕ್ರಾಮಿಕ ರೋಗದ ಪ್ರಕೋಪ ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ದೇಶದಲ್ಲಿ ಒಟ್ಟು ಕರೋನಾ ಪ್ರಕರಣಗಳ ಸಂಖ್ಯೆ 40 ಲಕ್ಷ ದಾಟಿದೆ. ಭಾರತದಲ್ಲಿ ಕರೋನಾ ವೈರಸ್ (Coronavirus) ಸಾಂಕ್ರಾಮಿಕ ರೋಗವು 2021 ರಲ್ಲಿಯೂ ಮುಂದುವರಿಯಲಿದೆ ಎಂದು ದೆಹಲಿ AIIMS ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ. ದೆಹಲಿ ಸೇರಿದಂತೆ ದೇಶದ ಕೆಲ ಭಾಗಗಳಲ್ಲಿ ಸೋಂಕಿನ ಎರಡನೇ ಅಲೆಯ ಸೃಷ್ಟಿಯಾಗುವ ಕುರಿತು ಕೂಡ ಅವರು ಮಾತನಾಡಿದ್ದಾರೆ.
ಡಾ. ರಣದೀಪ್ ಗುಲೇರಿಯಾ ಅವರು ಕೇಂದ್ರ ಸರ್ಕಾರದ ಕೋವಿಡ್ -19 ಕಾರ್ಯಪಡೆಯ ಪ್ರಮುಖ ಸದಸ್ಯರಾಗಿದ್ದಾರೆ. ಇಂಗ್ಲಿಷ್ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, "ಸಾಂಕ್ರಾಮಿಕ ರೋಗವು 2021 ರವರೆಗೆ ಹೋಗುವುದಿಲ್ಲ ಎಂದು ನಾವು ಹೇಳಲಾರೆವು, ಆದರೆ ವೇಗವಾಗಿ ಬೆಳೆಯುವ ಬದಲು ವಕ್ರರೇಖೆ ಅನುಸರಿಸಿ ಸಮತಟ್ಟಾಗುವ ಸಾಧ್ಯತೆ ಇದೆ ಎಂದು ನಾವು ಖಂಡಿತವಾಗಿ ಹೇಳಬಹುದು. ಮುಂದಿನ ವರ್ಷದ ಆರಂಭದಲ್ಲಿ ಸಾಂಕ್ರಾಮಿಕ ರೋಗವು ಕೊನೆಗೊಳ್ಳುತ್ತಿದೆ ಎಂದು ಹೇಳುವ ಸ್ಥಿತಿಯಲ್ಲಿ ನಾವು ಇರಬೇಕು. " ಎಂದು ಅವರು ಹೇಳಿದ್ದಾರೆ.
ಕರೋನಾ ಪ್ರಕರಣಗಳಲ್ಲಿ ಮತ್ತೆ ಏರಿಕೆ ಕಾಣುತ್ತಿದೆ ಎಂದು ಡಾ. ಗುಲೇರಿಯಾ ಹೇಳಿದ್ದಾರೆ. ದೇಶದ ಕೆಲವು ಭಾಗಗಳು ಕರೋನಾ ಪ್ರಕೋಪದ ಎರಡನೇ ಅಲೆಯನ್ನು ನೋಡುತ್ತಿವೆ. ಕರೋನಾ ಪ್ರಕರಣಗಳ ಉಲ್ಬಣಕ್ಕೆ ಎರಡು ಪ್ರಮುಖ ಕಾರಣಗಳಿವೆ. ಒಂದು ಕರೋನಾ ಪರೀಕ್ಷೆ ಹೆಚ್ಚಾಗಿದೆ ಮತ್ತು ಜನರು ನಿಯಮಗಳನ್ನು ಸರಿಯಾಗಿ ಅನುಸರಿಸುತ್ತಿಲ್ಲ ಎಂದು ಗುಲೇರಿಯಾ ಆತಂಕ ವ್ಯಕ್ತಪಡಿಸಿದ್ದಾರೆ.
ಈ ವರ್ಷಾಂತ್ಯಕ್ಕೆ ಲಸಿಕೆ ಬರುವ ನಿರೀಕ್ಷೆ
ಡಾ. ರಣದೀಪ್ ಗುಲೇರಿಯಾ ಈ ವರ್ಷದ ಅಂತ್ಯದ ವೇಳೆಗೆ ಲಸಿಕೆ ಬರುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. "ಭಾರತದಲ್ಲಿ ಮೂರು ಸ್ವದೇಶಿ ಸೇರಿದಂತೆ ಅನೇಕ ಲಸಿಕೆಗಳ ಮೇಲೆ ಕೆಲಸ ನಡೆಯುತ್ತಿದೆ. ಆದರೆ ಯಾವುದೇ ಲಸಿಕೆಯಾಗಿರಲಿ ಅದು ಸುರಕ್ಷಿತವಾಗಿರುವುದು ಬಹಳ ಮುಖ್ಯ. ಲಸಿಕೆ ತಯಾರಿಸಲು ಇನ್ನೂ ಕೆಲವು ತಿಂಗಳುಗಳು ಬೇಕಾಗಳಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ವರ್ಷದ ಅಂತ್ಯದ ವೇಳೆಗೆ ಲಸಿಕೆ ಸಿದ್ಧವಾಗಲಿದೆ" ಎಂದು ಗುಲೇರಿಯಾ ಹೇಳಿದ್ದಾರೆ.