ಕೊವಿಡ್-19 ವಿರುದ್ಧದ ಹೋರಾಟ ನಡೆಸಲು ಕೊಡುಗೆ ನೀಡುವಂತೆ ಕೇಳಿಕೊಂಡಿರುವ ಪ್ರಧಾನಿ ಮೋದಿ ಅವರ ಮನವಿಗೆ ಆಮ್ ಆದ್ಮಿ ಪಕ್ಷ ಸೇರಿದಂತೆ ಸಮಾಜದ ವಿಭಿನ್ನ ವರ್ಗಗಳ ಜನ ಹಾಗೂ ಉದ್ಯೋಗ ಕ್ಷೇತ್ರದ ಜನರು ಇದೀಗ ಮುಂದೆ ಬರಲಾರಂಭಿಸಿದ್ದಾರೆ. ಎಲ್ಲ ಜನರು ತಮ್ಮ ಯೋಗ್ಯತೆಗೆ ಅನುಗುಣವಾಗಿ PM cares fundಗೆ ಧನಸಹಾಯ ಮಾಡುತ್ತಿದ್ದಾರೆ. ಸದ್ಯ ಈ ಪಟ್ಟಿಗೆ ಭಾರತದ ಪ್ರಮುಖ ಡಿಜಿಟಲ್ ಪೇಮೆಂಟ್ ಕಂಪನಿಗಳಲ್ಲಿ ಒಂದಾದ ಹಾಗೂ ಆರ್ಥಿಕ ಸೇವೆ ಒದಗಿಸುವ ಕಂಪನಿ Paytm ಸೇರ್ಪಡೆಯಾಗಿದ್ದು, PM cares fundಗೆ 500 ಕೋಟಿ ರೂ. ಧನ ಸಹಾಯ ನೀಡುವ ಗುರಿಹೊಂದಿದೆ ಎಂದು ಹೇಳಿಕೊಂಡಿದೆ.


COMMERCIAL BREAK
SCROLL TO CONTINUE READING

ಈ ಕುರಿತು ತನ್ನ ಬಳಕೆದಾರರಿಗೆ ಕೊವಿಡ್-19 ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಕೊಡುಗೆ ನೀಡುವಂತ ಆಗ್ರಹಿಸಿರುವ ಕಂಪನಿ, Paytm ವ್ಯಾಲೆಟ್, UPI ಹಾಗೂ Paytm ಡೆಬಿಟ್ ಕಾರ್ಡ್ ಗಳನ್ನು ಉಪಯೋಗಿಸಿ Paytm ಮಾಧ್ಯಮದಿಂದ ಮಾಡಲಾಗಿರುವ ಪ್ರತಿ ಹಣ ಪಾವತಿ ಮೇಲೆ ಪ್ರಧಾನಿ ನಿಧಿಗೆ ರೂ.10 ಹೆಚ್ಚುವರಿ ಕೊಡುಗೆ ನೀಡುವುದಾಗಿ ಘೋಷಿಸಿದೆ. 


ಈ ಕುರಿತು ತನ್ನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಪ್ರಕಟಿಸಿರುವ Paytm ಕೊರೊನಾ ವೈರಸ್ ಮಹಾಮಾರಿಯ ವಿರುದ್ಧದ ಹೋರಾಟ ಹಾಗು ಪರಿಹಾರ ಉಪಾಯಗಳಲ್ಲಿ ಸರ್ಕಾರದ ಸಹಾಯಕ್ಕೆ ತನ್ನ ಕರ್ತವ್ಯ ನಿಭಾಯಿಸಿ ಗೌರವಾನ್ವಿತ ಭಾವನೆ ಅನುಭವಿಸುತ್ತಿದೆ ಎಂದು ಹೇಳಿದೆ. ದೇಶದ ನಾಗರಿಕರ ಪ್ರಾಣ ಉಳಿಸಲು Paytm ಬಳಕೆದಾರರು ಮನಸು ಬಿಚ್ಚಿ PM ಕೆಯರ್ಸ್ ಫಂಡ್ ಗೆ ತಮ್ಮ ಕೊಡುಗೆ ನೀಡಲಿದ್ದಾರೆ ಎಂದು ಆಶಿಸುತ್ತದೆ ಎಂದು ಹೇಳಿದೆ.


ಅಷ್ಟೇ ಅಲ್ಲ Paytm ಆಪ್ ಹಾಗೂ ಅದರ ಇನ್ಸ್ಟ್ರುಮೆಂಟ್ಸ್ ಮಾಧ್ಯಮದ ಮೂಲಕ ಮಾಡಲಾಗುವ ಪ್ರತಿ ಹಣ ಪಾವತಿಗೆ 10 ರೂ. ಹೆಚ್ಚುವರಿ ಕೊಡುಗೆ ತನ್ನ ಪರವಾಗಿ ನೀಡಲಿದೆ ಎಂದು ಕಂಪನಿ ಪ್ರಕಟಿಸಿದೆ. ಈ ಹಣ ನೇರವಾಗಿ PM Cares Fund ಖಾತೆಗೆ ವರ್ಗಾಯಿಸಲಾಗುವುದು ಎಂದು ಸಂಸ್ಥೆ ಹೇಳಿದೆ. ಈ ಸಂಕಟದ ಪರಿಸ್ಥಿತಿಯಿಂದ ಹೊರಬರಲು ಸರ್ಕಾರ ಕೈಗೊಳ್ಳುತ್ತಿರುವ ಪ್ರತಿಯೊಂದು ಕ್ರಮಗಳನ್ನು Paytm ಸಮರ್ಥಿಸಲಿದ್ದು, ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೊಡುಗೆ ನೀಡಲು ಪ್ರತಿಬದ್ಧವಾಗಿದೆ ಎಂದು Paytm ಪ್ರಕಟಿಸಿದೆ.


ಕಳೆದ ಹಲವು ವಾರಗಳಿಂದ Paytm ನಾವೆಲ್ ಕರೋನಾವೈರಸ್ ಹರಡುವಿಕೆಯನ್ನು ತಡೆಯಲು ಹಾಗೂ ಅದರ ವಿರುದ್ಧ ಹೋರಾಟ ನಡೆಸಲು ಹಲವು ಉಪಕ್ರಮಗಳನ್ನು ಆರಂಭಿಸಿದೆ. ಇವುಗಳ ಜೊತೆಗೆ  ಕಂಪನಿ ಈ ವೈರಸ್ ವಿರುದ್ಧ ಹೋರಾಟ ನಡೆಸಲು ತಯಾರಿಸಲಾಗಿರುವ ಚಿಕಿತ್ಸೆಯ ಉಪಕರಣಗಳು ಹಾಗೂ ಔಷದಿ ತಯಾರಿಸುವಲ್ಲಿ ನಿರತರಾಗಿರುವ ತಜ್ಞರಿಗಾಗಿ 5 ಕೋಟಿ ರೂ. ಗಳ ನಿಧಿ ಸ್ಥಾಪಿಸಿದೆ. PM Cares Fund ಗೆ ನೀಡಲಾಗುವ ಕೊಡುಗೆಗಳಿಗೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 10 ಮತ್ತು 139 ರ ಅಡಿ ಸಂಪೂರ್ಣ ತೆರಿಗೆ ವಿನಾಯ್ತಿ ನೀಡಲಾಗುತ್ತಿದೆ ಎಂಬುದು ಇಲ್ಲಿ ಉಲ್ಲೇಖನೀಯ.