ಪುಣೆ : ಹೆಚ್ಚುತ್ತಿರುವ ಕರೋನಾ ವೈರಸ್ (Coronavirus) ಪ್ರಕರಣಗಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ(Pune)  ರಾತ್ರಿ ಕರ್ಫ್ಯೂ ಜೊತೆಗೆ ಹಲವಾರು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಲಾಗಿದೆ. ಸಂಜೆ  4.30 ಕ್ಕೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, (Uddhav Thackeray)  ಮುಖ್ಯ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ  ಸಭೆ ನಡೆಸಲಿದ್ದಾರೆ. ಇದಾದ ನಂತರ ಉದ್ಧವ್ ಠಾಕ್ರೆ ರಾತ್ರಿ 8.30 ಕ್ಕೆ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಘೋಷಿಸುವ ಎಲ್ಲಾ ಸಾಧ್ಯತೆಗಳಿವೆ.  


COMMERCIAL BREAK
SCROLL TO CONTINUE READING

ಪುಣೆಯಲ್ಲಿ 12 ಗಂಟೆಗಳ ರಾತ್ರಿ ಕರ್ಫ್ಯೂ : 
ಕರೋನಾ ಸೋಂಕನ್ನು  (Coronavirus) ತಡೆಗಟ್ಟಲು ಪುಣೆಯಲ್ಲಿ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ರಾತ್ರಿ ಕರ್ಫ್ಯೂ (Night Curfew) ವಿಧಿಸಲಾಗಿದೆ. ಪುಣೆಯ ವಿಭಾಗೀಯ ಆಯುಕ್ತ ಸೌರಭ್ ರಾವ್ ಈ ಬಗ್ಗೆ ಘೋಷಣೆ  ಮಾಡಿದ್ದಾರೆ. ಇನ್ನುಳಿದಂತೆ ನಿರ್ಬಂಧಗಳು ನಾಳೆಯಿಂದ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ. ಇದರ ಅಡಿಯಲ್ಲಿ, ಎಲ್ಲಾ ಹೋಟೆಲ್‌ಗಳು (Hotel), ಬಾರ್‌ಗಳು, ರೆಸ್ಟೋರೆಂಟ್‌ಗಳನ್ನು 7 ದಿನಗಳ ಕಾಲ ಮುಚ್ಚುವಂತೆ ಸೂಚನೆ ನೀಡಲಾಗಿದೆ. ಆದರೆ ಹೋಂ ಡೆಲಿವರಿಗೆ (Home delivery) ಅನುಮತಿ  ನೀಡಲಾಗುವುದು. 


Sachin Tendulkar: ಕ್ರಿಕೆಟ್ ದಿಗಜ್ಜ 'ಸಚಿನ್‌ ತೆಂಡುಲ್ಕರ್' ಆಸ್ಪತ್ರೆಗೆ ದಾಖಲು!


 ಏನೆಲ್ಲಾ ಬಂದ್ ಇರಲಿದೆ ? 
- ಹೋಟೆಲ್‌ಗಳು, ಬಾರ್‌ಗಳು (Bar), ರೆಸ್ಟೋರೆಂಟ್‌ಗಳನ್ನು ಏಳು ದಿನಗಳವರೆಗೆ ಮುಚ್ಚಲಾಗುವುದು. ಹೋಂ ಡೆಲಿವರಿಗೆ ಅನುಮತಿ  ನೀಡಲಾಗುವುದು.  
- ಮದುವೆ (Marraige) ಮತ್ತು ಅಂತ್ಯಕ್ರಿಯೆಯನ್ನು ಹೊರತುಪಡಿಸಿ ಯಾವುದೇ ಸಾರ್ವಜನಿಕ ಕಾರ್ಯ ನಡೆಸುವಂತಿಲ್ಲ 
- ಅಂತ್ಯಕ್ರಿಯೆಯಲ್ಲಿ 20 ಕ್ಕೂ ಹೆಚ್ಚು ಜನರು ಭಾಗವಹಿಸುವಂತಿಲ್ಲ. ವಿವಾಹ ಸಮಾರಂಭದಲ್ಲಿ ಗರಿಷ್ಠ 50 ಜನರಿಗೆ ಅವಕಾಶ ನೀಡಲಾಗುವುದು.
- 7 ದಿನಗಳವರೆಗೆ ಚಿತ್ರಮಂದಿರಗಳು (Theater), ಧಾರ್ಮಿಕ ಸ್ಥಳಗಳು, ಮಹಾನಗರಗಳ ಬಸ್ ಸೇವೆ ಇರುವುದಿಲ್ಲ. ಯ
- ವಾರದ  ಮಾರುಕಟ್ಟೆಗಳು ಸಹ ಒಂದು ವಾರ ಮುಚ್ಚಲ್ಪಡುತ್ತವೆ.
- ಏಪ್ರಿಲ್ 30 ರವರೆಗೆ ಶಾಲಾ-ಕಾಲೇಜುಗಳು (School college)  ಬಂದ್ 
- ST ಬಸ್ ಸೇವೆ ಇರಲಿದೆ  


ಮಹಾರಾಷ್ಟ್ರದಲ್ಲಿ 24 ಗಂಟೆಗಳಲ್ಲಿ 43183 ಹೊಸ ಪ್ರಕರಣಗಳು :
ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 43,183 ಹೊಸ ಪ್ರಕರಣಗಳು ವರದಿಯಾಗಿದೆ.  249 ಜನರು ಸಾವನ್ನಪ್ಪಿದ್ದಾರೆ. ಇದೀಗ ರಾಜ್ಯದಲ್ಲಿ  ಒಟ್ಟು ಕರೋನಾ (COVID-19) ಪ್ರಕರಣಗಳ ಸಂಖ್ಯೆ 28,56,163 ಕ್ಕೆ ಏರಿದೆ.  


ಇದನ್ನೂ ಓದಿ : Corona Second Wave: ರಾಜ್ಯ ರಾಜಧಾನಿಯಲ್ಲಿ 6ರಿಂದ 9ರವರೆಗಿನ ತರಗತಿಗಳು ಸ್ಥಗಿತ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.