World's First Hotel In Space - ಬಾಹ್ಯಾಕಾಶದಲ್ಲೊಂದು ಹೋಟಲ್ ನಿರ್ಮಾಣ, 400 ಜನರ ವಾಸಕ್ಕೆ ವಸತಿ ವ್ಯವಸ್ಥೆ

World's First Hotel In Space - Orbital Assembly ಹೆಸರಿನ ಕಂಪನಿ ಬಾಹ್ಯಾಕಾಶದಲ್ಲಿ ಹೋಟೆಲ್ ನಿರ್ಮಿಸುವುದಾಗಿ ಘೋಷಿಸಿದೆ. ಈ ಹೋಟೆಲ್‌ನಲ್ಲಿ 400 ಜನರಿಗೆ ವಸತಿ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ, ಸಿನೆಮಾ ಹಾಲ್ ಹಿಡಿದು ಜಿಮ್ ಮತ್ತು ಲೈಬ್ರರಿಯವರೆಗೆ ಎಲ್ಲಾ ರೀತಿಯ ಸೌಲಭ್ಯಗಳು ಇದರಲ್ಲಿರಲಿವೆ. ಇದರ ಕಾರ್ಯಾಚರಣೆ 2027 ರ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ.

Written by - Nitin Tabib | Last Updated : Mar 2, 2021, 06:20 PM IST
  • ನಿಮಗೂ ಭೂಮಿಯ ಹೊರಗಿನ ಒಂದು ಹೋಟೆಲ್ ನಲ್ಲಿ ತಂಗಲು ಅವಕಾಶ ದೊರೆತರೆ?
  • ಆಶ್ಚರ್ಯ ಬೇಡ , ಕೆಲವೇ ವರ್ಷಗಳಲ್ಲಿ ಇದು ಅಸ್ತಿತ್ವಕ್ಕೆ ಬರಲಿದೆ.
  • ಇದಕ್ಕಾಗಿ Orbital Assembly ಯೋಜನೆ ರೂಪಿಸುತ್ತಿದೆ.
World's First Hotel In Space - ಬಾಹ್ಯಾಕಾಶದಲ್ಲೊಂದು ಹೋಟಲ್ ನಿರ್ಮಾಣ, 400 ಜನರ ವಾಸಕ್ಕೆ ವಸತಿ ವ್ಯವಸ್ಥೆ title=
World's First Space Hotel (Corutesy:Wion)

ನವದೆಹಲಿ: World's First Hotel In Space - ಭೂಮಿಯನ್ನು ಬಿಟ್ಟು ಬಾಹ್ಯಾಕಾಶದಲ್ಲಿ ಯಾರಾದರು ನಿಮಗೆ ಹೋಟೆಲ್ (Hotel)ನಲ್ಲಿ ಉಳಿದುಕೊಳ್ಳುವ ಅವಕಾಶ ಕಲ್ಪಿಸಿದರೆ ಹೇಗಿರುತ್ತದೆ? ಆಶರ್ಯಪಡಬೇಡಿ, ಕೆಲವೇ ವರ್ಷಗಳಲ್ಲಿ ಇದು ನಿಜ ಎಂದು ಸಾಬೀತಾಗಲಿದೆ. ಹೌದು, ಇದೀಗ ಭೂಮಿಯನ್ನು ಬಿಟ್ಟು ಬಾಹ್ಯಾಕಾಶದಲ್ಲಿ ಹೋಟೆಲ್ (Hotel In Space) ನಿರ್ಮಾಣವಾಗುತ್ತಿದೆ. Orbital Assembly ಹೆಸರಿನ ಕಂಪನಿಯೊಂದು ಈ ಪ್ರಾಜೆಕ್ಟ್ ಮೇಲೆ ಕಾರ್ಯನಿರ್ವಹಿಸುತ್ತಿದೆ. ಮೂರು ವರ್ಷ ಹಳೆಯದಾಗಿರುವ ಈ ಕಂಪನಿ ಭೂಮಿಯ ಕೆಳಗಿನ ಕಕ್ಷೆಯಲ್ಲಿ 2025ರವರೆಗೆ ಈ ಯೋಜನೆಯ ಮೇಲೆ ಕಾರ್ಯಾರಂಭ ಮಾಡುವುದಾಗಿ ಹೇಳಿದೆ. ಡೈಲಿ ಮೇಲ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ 2027 ರಲ್ಲಿ ಈ ಹೋಟೆಲ್ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.

ಈ ಹೋಟೆಲ್ ನಲ್ಲಿ ವೈಯಕ್ತಿಕ ಪ್ಯಾಡ್ಸ್ ಗಳನ್ನೂ ಒಂದು ತಿರುಗುವ ಚಕ್ರಕ್ಕೆ ಜೋಡಿಸಲಾಗುತ್ತಿದೆ. ವಿವಿಧ ಭಾಗಗಳಿಂದ ಟ್ಯೂಬ್ ಗಳನ್ನು X ಆಕಾರದಲ್ಲಿ ಕನೆಕ್ಟ್ ಮಾಡಲಾಗುವುದು. ಇದೆಲ್ಲಾ ಯಾವ ರೀತಿ ಜೋಡಣೆಯಾಗುತ್ತಿದೆ ಎಂದರೆ ಚಕ್ರದ ಅಕ್ಷವು ಆಕ್ಸಲ್ ನ ರೀತಿ ಇರಲಿದೆ. ಈ ಹೋಟೆಲ್ (Luxury Hotel In Space) ನಲ್ಲಿ ಥೀಮ್ ಆಧಾರಿತ ರೆಸ್ಟೋರೆಂಟ್, ಹೆಲ್ತ್ ಸ್ಪಾ, ಸಿನೆಮಾ ಹಾಲ್, ಜಿಮ್, ಲೈಬ್ರೆರಿ, ಕಾನ್ಸರ್ಟ್ ವೆನ್ಯೂ, ಭೂಮಿ ವಿಕ್ಷನೆಗಾಗಿ ಲಾಂಜ್ ವ್ಯವಸ್ಥೆ ಬಾರ್ ಹಾಗೂ ಕೊಠಡಿಗಳು ಇರಲಿವೆ. ಒಟ್ಟು 400 ಜನರಿಗಾಗಿ ವಸತಿಯ ವ್ಯವಸ್ಥೆ ಇದರಲ್ಲಿ ಇರಲಿದೆ. ಈ ಹೋಟೆಲ್ ನಲ್ಲಿ ಕ್ರೂ ಸದಸ್ಯರಿಗಾಗಿ ಪ್ರತ್ಯೇಕ ಕ್ವಾರ್ಟರ್ಸ್ ನಿಂದ ಹಿಡಿದು, ಗಾಳಿ , ನೀರು ಹಾಗೂ ವಿದ್ಯುತ್ ಲಭ್ಯವಿರಲಿದೆ.

ವೈಯಕ್ತಿಕ ಮಾಡ್ಯೂಲ್ ಖರೀದಿಗೂ ಅವಕಾಶ
Orbital Assembly ಕಂಪನಿ ಇದಕ್ಕಾಗಿ ಸರ್ಕಾರಿ ಏಜೆನ್ಸಿಗಳನ್ನು ಸ್ಥಾಯಿ ಸ್ಟೆಕ್ ಹೋಲ್ಡರ್ ರೂಪದಲ್ಲಿ ಹುಡುಕಾಟ ನಡೆಸುತ್ತಿದೆ. ಏಕೆಂದರೆ ಕಂಪನಿ ಅಲ್ಲಿ ತನ್ನ ಟ್ರೇನಿಂಗ್ ಸೆಂಟರ್ ತೆರೆಯಲು ಬಯಸುತ್ತಿದೆ. ಈ ಹೋಟೆಲ್ 90 ನಿಮಿಷಗಳಲ್ಲಿ ಪೃಥ್ವಿಯ ಒಂದು ಸುತ್ತು ಸುತ್ತುವರೆಯಲಿದೆ. ಯಾವುದೇ ಓರ್ವ ವ್ಯಕ್ತಿ ಬಯಸಿದರೆ ಇದರಲ್ಲಿ 20x12 ಮೀಟರ್ ಗಾತ್ರದ ಪ್ರತ್ಯೇಕ ವೈಯಕ್ತಿಕ ಮಾಡ್ಯೂಲ್ ಕೂಡ ಖರೀದಿಸಬಹುದು. ಇದು ಅವರ ಪಾಲಿಗೆ ಪ್ರೈವೇಟ್ ವಿಲ್ಲಾ ರೂಪದಲ್ಲಿ ಇರಲಿದೆ.

ವೆಚ್ಚದ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಇಲ್ಲ
ಸ್ಪೇಸ್ ಸ್ಟೇಷನ್ ಒಂದು ದೊಡ್ಡ ಸರ್ಕಲ್ ಗಾತ್ರದಲ್ಲಿರಲಿದೆ ಹಾಗೂ ಕೃತ್ರಿಮ ಗುರುತ್ವಾಕರ್ಷಣ ಶಕ್ತಿ ನಿರ್ಮಿಸಲು ಇದು ತಿರುಗಲಿದೆ. ಇದರ ಗುರುತ್ವಾಕರ್ಷಣ ಶಕ್ತಿ ಚಂದ್ರನ ಗುರುತ್ವಾಕರ್ಶನದಷ್ಟೇ ಇರಲಿದೆ. ಆದರೆ, ಈ ಹೋಟೆಲ್ ಮೇಲೆ ಮಾಡಲಾಗುತ್ತಿರುವ ವೆಚ್ಚಗಳ ಬಗ್ಗೆ ಡೇಲಿ ಮೇಲ್ ಯಾವುದೇ ಮಾಹಿತಿ ಪ್ರಕಟಿಸಿಲ್ಲ. 

ಇದನ್ನೂ ಓದಿ-Antarctica ಶ್ವೇತ ಹಿಮಚಾದರದ ಮೇಲೆ ದಿಗ್ಭ್ರಮೆಗೊಳಿಸುವ ವಿಚಿತ್ರ ಆಕೃತಿ.! NASA ಪಂಡಿತರಿಗೂ ಸಿಗುತ್ತಿಲ್ಲ ಉತ್ತರ..!

ಗೇಟ್ ವೆ ಫೌಂಡೇಶನ್ ಸಂಸ್ಥಾಪಕ ಜಾನ್ ಬಿಲಿನ್ಕೊವ್ ಈ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದ್ದು, 'ಇದೇ ಮುಂದಿನ ತಲೆಮಾರಿನ ಇಂಡಸ್ಟ್ರಿಯಲ್ ರೆವಲ್ಯೂಶನ್ ಆಗಿರಲಿದೆ' ಎಂದಿದ್ದಾರೆ. ಈ ವೈಸರ್ ನ ಕೆಲ ಭಾಗವನ್ನು ಗೇಟ್ ವೆ ಫೌಂಡೇಶನ್ ಮುನ್ನಡೆಸಲಿದೆ. 

ಇದನ್ನೂ ಓದಿ-ಕಣ್ಮರೆಯಾದ Supermassive Black Hole, ಭೂಮಿಗೇನು ಅಪಾಯ?

ಹೋಟೆಲ್ ತಯಾರಿಕೆ ಕಾರ್ಯ ರೋಬೋಟ್ ಗಳು ನಡೆಸಲಿವೆ
STAR (Structure Trust Assembly Robot) ಹೆಸರಿನ ಒಂದು ರೋಬೋಟ್ ಕಂಪನಿ ಈ ಹೋಟೆಲ್ ನ ಆರಂಭಿಕ ಸಂರಚನೆ ಸಿದ್ಧಪಡಿಸಲಿದೆ. ಆದರೆ, ಇದಕ್ಕೂ ಮೊದಲು ಕಂಪನಿ ಗುರುತ್ವಾಕರ್ಷಣಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಬೇಕಿದೆ. 

ಇದನ್ನೂ ಓದಿ- Viral Video: ಬ್ರಹ್ಮಾಂಡದ ಧ್ವನಿ ಎಂದಾದರು ಕೇಳಿದ್ದೀರಾ? ಈ ವಿಡಿಯೋ ವೀಕ್ಷಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News