Coronavirus Third Wave: ಮಕ್ಕಳ ಪಾಲಿಗೆ ಅಪಾಯಕಾರಿ ಸಾಬೀತಾಗಲಿದೆ, ಈ ರಾಜ್ಯದಿಂದ ಆರಂಭ!
Coronavirus Third Wave: ಕೊರೊನಾ ವೈರಸ್ (Covid-19) ನ ಮೂರನೆ ಅಲೆ ಮಕ್ಕಳ ಪಾಲಿಗೆ ಅಪಾಯಕಾರಿ ಸಾಬೀತಾಗಲಿದೆ. ಈ ಕುರಿತು ತಜ್ಞರು ಹೇಳುವ ಪ್ರಕಾರ, ಈ ಅವಧಿಯಲ್ಲಿ 12ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಲೊಂಕಿಗೆ ಗುರಿಯಾಗಲಿದ್ದಾರೆ ಹಾಗೂ ಮಹಾರಾಷ್ಟ್ರದಿಂದ ಇದು ಆರಂಭವಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ನವದೆಹಲಿ: Coronavirus Third Wave - ದೇಶಾದ್ಯಂತ ಕೊರೊನಾ ವೈರಸ್ (Coronavirus) ನ ಎರಡನೇ ಅಲೆಯ ಪ್ರಕೋಪ ಮುಂದುವರೆದಿದೆ. ಸರ್ಕಾರಿ ಅಂಕಿ-ಅಂಶಗಳ ಪ್ರಕಾರ ಕೊರೊನಾ ವೈರಸ್ ನ ಎರಡನೇಯ ಅಲೆಯಲ್ಲಿ ಯುವಕರು ಅತಿ ಹೆಚ್ಚು ಸೋಂಕಿಗೆ ಗುರಿಯಾಗಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ಕಳೆದ ವರ್ಷ ಜಾರಿಯಲ್ಲಿದ್ದ ಕೊರೊನಾ ವೈರಸ್ ನ ಮೊದಲ ಅಲೆಯ ವೇಳೆ ಕೊರೊನಾ ಹಿರಿಯ ನಾಗರಿಕರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಸದ್ಯ ಈ ವಿಷಯಕ್ಕೆ ಸಂಬಂಧ ಪಟ್ಟ ತಜ್ಞರು ಹೇಳುವುದನ್ನು ನಂಬುವುದಾದರೆ, ಜುಲೈ ತಿಂಗಳಿನಲ್ಲಿ ಕೊರೊನಾ ವೈರಸ್ ನ ಮೂರನೇ ಅಲೆ (Coronavirus Third Wave) ಬರುವ ಸಾಧ್ಯತೆ ಇದೆ ಹಾಗೂ ಅದು ಚಿಕ್ಕ ಮಕ್ಕಳ ಪಾಲಿಗೆ ಅಪಾಯಕಾರಿ ಸಾಬೀತಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಈ ಅವಧಿಯಲ್ಲಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು (Children) ಕೊರೊನಾ ವೈರಸ್ ನ ಪ್ರಕೋಪಕ್ಕೆ ಅತಿ ಹೆಚ್ಚು ಗುರಿಯಾಗುವ ಸಾಧ್ಯತೆಯನ್ನು ಅವರು ವರ್ತಿಸಿದ್ದಾರೆ.
ಮಹಾರಾಷ್ಟ್ರದಿಂದ ಆರಂಭವಾಗಲಿದೆ ಮೂರನೇ ಅಲೆ
ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳ ಪ್ರಕಾರ ಕೊರೊನಾ ವೈರಸ್ ನ ಮೂರನೇ ಅಲೆಯ ಆರಂಭ ಕೂಡ ಮಹಾರಾಷ್ಟ್ರದಿಂದ ಆರಂಭವಾಗಲಿದೆ ಎನ್ನಲಾಗಿದೆ. ಆದರೆ, ಈ ಮೂರನೆಯ ಅಲೆ ಎಂದಿನಿಂದ ಆರಂಭಗೊಳ್ಳಲಿದೆ ಎಂಬುದರ ಮೇಲೆ ತಜ್ಞರ ಒಮ್ಮತ ಇದುವರೆಗೆ ಮೂಡಿಬಂದಿಲ್ಲ ಎನ್ನಲಾಗಿದ್ದು, ಜುಲೈ ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಈ ಮೂರನೇ ಅಲೆ ಆರಂಭಗೊಳ್ಳಲಿದೆ ಮತ್ತು ಇದು ಮಕ್ಕಳಿಗೆ ಅಪಾಯಕಾರಿ ಸಾಬೀತಾಗಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ-ಕೊರೋನಾ ಹೆಚ್ಚಳ ಹಿನ್ನೆಲೆ IPL 2021 ರದ್ದು ಗೊಳಿಸಿದ ಬಿಸಿಸಿಐ!
ಸಿದ್ಧತೆಯಲ್ಲಿ ತೊಡಗಿದ ಮಹಾರಾಷ್ಟ್ರ ಸರ್ಕಾರ
ಈ ಕುರಿತಾಗಿ ತಜ್ಞರು ಈಗಾಗಲೇ ಮಹಾರಾಷ್ಟ್ರ (Maharashtra) ಸರ್ಕಾರಕ್ಕೆ ಈ ಸಲಹೆಗಳನ್ನು ನೀಡಿದ್ದು, ಜುಲೈ ನಲ್ಲಿ ಮೂರನೇ ಅಲೆಯ ಕಾಲ ಆರಂಭವಾಗುವ ಸಾಧ್ಯತೆ ಇದ್ದು, ಇದು ಮೊದಲೆರಡು ಅಲೆಗಳ ಹೋಲಿಕೆಯಲ್ಲಿ ಮಕ್ಕಳಲ್ಲಿ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಈ ಮೂರನೆಯ ಅಲೆಯ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ, ಸರ್ಕಾರದ ಮಟ್ಟದಲ್ಲಿ ಈಗಾಗಲೇ ತನ್ನ ಸಿದ್ಧತೆಗಳನ್ನು ಆರಂಭಿಸಿದೆ. ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೋರೇಶನ್ (BMC) ಶಿಶು ಕೊವಿಡ್ ಕೆಯರ್ ಫೆಸಿಲಿಟಿ ಸೆಂಟರ್ ಸ್ಥಾಪಿಸಲು ಈಗಾಗಲೇ ಯೋಜನೆ ರೂಪಿಸುತ್ತಿದೆ. ಮೂರನೆಯ ಅಲೆಯ ವೇಳೆ ಸಮಯ ಇರುವಂತೆಯೇ ಮಕ್ಕಳ ಚಿಕಿತ್ಸೆಯಾಗಬೇಕು ಎಂಬುದು ಪಾಲಿಕೆಯ ಉದ್ದೇಶ. ಮಹಾರಾಷ್ಟ್ರದಲ್ಲಿ ಬಾಲ ಚಿಕಿತ್ಸಾ ವಾರ್ಡ್ ಗಳ ಸ್ಥಾಪನೆಯ ನಿರ್ಣಯವನ್ನು ಅಲ್ಲಿನ ಸರ್ಕಾರ ತಜ್ಞರ ಎಚ್ಚರಿಕೆಯ ಹಿನ್ನೆಲೆ ತೆಗೆದುಕೊಂಡಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ- ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಮತ್ತೆ 4 ರೋಗಿಗಳು ಸಾವು!
ಇಲ್ಲಿ ನಿರ್ಮಾಣಗೊಳ್ಳಲಿದೆ ಬಾಲ ಚಿಕಿತ್ಸಾ ವಾರ್ಡ್
ಈ ಕುರಿತು BMC ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಮುಂಬೈ ನ ಗೊರೆಗಾವ್ ನಲ್ಲಿ ಸ್ಥಾಪಿಸಲಾಗಿರುವ ಜಂಬೊ ಕೊವಿಡ್ (Covid-19) ಕೇರ್ ಸೆಂಟರ್ ನಲ್ಲಿ 12 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ 'ಬಾಲ್ ಚಿಕಿತ್ಸಾ ಕೊವಿಡ್ ವಾರ್ಡ್' ಮುಂದಿನ ಎರಡು ತಿಂಗಳಲ್ಲಿ ಸಿದ್ಧಗೊಳ್ಳಲಿದೆ. ಇದರಲ್ಲಿ ಸುಮಾರು 700 ಬೆಡ್ ಗಳು ಇರಲಿವೆ, ಇದರಲ್ಲಿ 300 ಮಕ್ಕಳ ಚಿಕಿತ್ಸೆ ನಡೆಯಲಿದೆ. ಇದಲ್ಲದೆ ಈ ಸೆಂಟರ್ ನಲ್ಲಿ ನವಜಾತ ಶಿಶುಗಳಿಗಾಗಿ 25 ಬೆಡ್ ಕ್ಷಮತೆಯುಳ್ಳ NICU ಯುನಿಟಿ ಹಾಗೂ PICU ಯುನಿಟ್ ಸಹ ಸ್ಥಾಪಿಸಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ- ಸಮೀಪದ ವಾಕ್ಸಿನೇಶನ್ ಸೆಂಟರ್ ಯಾವುದು ಎಂದು ತಿಳಿಯಲು ವಾಟ್ಸಾಪ್ ನಲ್ಲಿ ಹೀಗೆ ಟೈಪ್ ಮಾಡಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.