ನವದೆಹಲಿ: SC Directions On Scool Fees - ಕರೋನಾ ವೈರಸ್ ನ ಎರಡನೇ ಅಲೆಗೆ ದೇಶಾದ್ಯಂತ ಜನರು ತತ್ತರಿಸಿ ಹೋಗಿದ್ದಾರೆ. ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ಪೋಷಕರು ಅಧ್ಯಯನ ಮತ್ತು ಶುಲ್ಕದ ಬಗ್ಗೆ ಚಿಂತಿತರಾಗಿದ್ದಾರೆ. ಕಳೆದ ವರ್ಷ, ಶಾಲಾ ಶುಲ್ಕ ಪ್ರಕರಣ ಹಲವು ರಾಜ್ಯಗಳಲ್ಲಿ ನ್ಯಾಯಾಲಯದ ಮೆಟ್ಟಿಲೇರಿದೆ. ಶುಲ್ಕಕ್ಕೆ ಸಂಬಂಧಿಸಿದಂತೆ ವಿವಿಧ ರಾಜ್ಯ ಸರ್ಕಾರಗಳು ಆದೇಶ ನೀಡಿದ್ದು, ಅದರ ವಿರುದ್ಧ ಕೆಲವೆಡೆ ಶಾಲಾ ಆಡಳಿತ ಮಂಡಳಿಗಳು ನ್ಯಾಯಾಲಯದ ಕದ ತಟ್ಟಿದರೆ ಇನ್ನೂ ಹಲವೆಡೆ ವಿದ್ಯಾರ್ಥಿಗಳ ಪೋಷಕರು ನ್ಯಾಯಾಲಯದ ಮೊರೆಹೋಗಿದ್ದಾರೆ. ಬಳಿಕ ಈ ಶಾಲಾ ಶುಲ್ಕದ ವಿಷಯವು ಸುಪ್ರೀಂ ಕೋರ್ಟ್‌ಗೆ ತಲುಪಿದ್ದು, ಇದೀಗ ಸರ್ವೋಚ್ಛ ನ್ಯಾಯಾಲಯ ಈ ಕುರಿತು ಹೊಸ ನಿರ್ದೇಶನಗಳನ್ನು ಹೊರಡಿಸಿದೆ.
2020-21ರ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಶೇಕಡಾ 15 ರಷ್ಟು ಕಡಿಮೆ ವಾರ್ಷಿಕ ಶುಲ್ಕ ವಿಧಿಸುವಂತೆ ಸುಪ್ರೀಂ ಕೋರ್ಟ್ ರಾಜಸ್ಥಾನದ 36,000 ಅನುದಾನರಹಿತ ಖಾಸಗಿ ಶಾಲೆಗಳಿಗೆ ಸೋಮವಾರ ನಿರ್ದೇಶನ ನೀಡಿದೆ. ಜೊತೆಗೆ ಒಂದು ವೇಳೆ ವಿದ್ಯಾರ್ಥಿಗಳು ಶುಲ್ಕವನ್ನು ಪಾವತಿಸದಿದ್ದರೆ, ಯಾವುದೇ ವಿದ್ಯಾರ್ಥಿಯನ್ನು ವರ್ಚ್ಯುವಲ್ ಅಥವಾ ಸ್ಥಿತಿ ಸಾಮಾನ್ಯವಾದ ಬಳಿಕ ಕ್ಲಾಸ್ ನಲ್ಲಿಶಾಮೀಲಾಗಳು ತಡೆಯುವಂತಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ ಯಾವುದೇ ವಿದ್ಯಾರ್ಥಿಗಳ ಫಲಿತಾಂಶ ಕೂಡ ತಡೆಹಿಡಿಯಬಾರದು ಎಂದು ನ್ಯಾಯಾಲಯ ಸೂಚಿಸಿದೆ.
ಹೈ ಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ
ಈ ಸಂದರ್ಭದಲ್ಲಿ ರಾಜಸ್ಥಾನ್ ಶಾಲಾ (ಶುಲ್ಕ ನಿಯಂತ್ರಣ) ಕಾಯ್ದೆ 2016 ರ ಅಡಿಯಲ್ಲಿ ಮಾಡಲಾದ ನಿಯಮದ ಸಿಂಧುತ್ವ ಮತ್ತು ಶಾಲೆಗಳಲ್ಲಿ ಶುಲ್ಕ ನಿಗದಿಪಡಿಸುವ ಕಾನೂನಿನ ಅಡಿ ಮಾಡಲಾಗಿರುವ ನಿಯಮಗಳ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿ ರಾಜಸ್ಥಾನ ಹೈಕೋರ್ಟ್ (High Court) ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಇದನ್ನೂ ಓದಿ-Coronavirus : ಇದೆಂಥಾ ಕಲಿಗಾಲ..! ಸ್ಮಶಾನದ ಮುಂದೆಯೂ ಹೌಸ್ ಫುಲ್ ಬೋರ್ಡ್ ..!
6 ಸಮನಾದ ಕಂತುಗಳಲ್ಲಿ ಶುಲ್ಕ ಪಾವತಿ
2020-21ರ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಅಥವಾ ಅವರ ಪೋಷಕರಿಂದ ಶಾಲಾ ಶುಲ್ಕವನ್ನು ಆರು ಸಮನಾದ ಕಂತುಗಳಲ್ಲಿ ಪಡೆಯಬೇಕು ಎಂದು ನ್ಯಾ. ಎ. ಎಂ. ಖಾನ್ವಿಲ್ಕರ್ ಹಾಗೂ ಜಸ್ಟಿಸ್ ದಿನೇಶ್ ಮಾಹೇಶ್ವರಿ ಅವರನ್ನೊಳಗೊಂಡ ಪೀಠ ತನ್ನ 128 ಪುಟಗಳ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ವಿಧಿಸಲಾಗಿದ್ದ ಸಂಪೂರ್ಣ ಲಾಕ್ ಡೌನ್ (Lockdown)ನಿಂದ ಅಭೂತಪೂರ್ವ ಪರಿಸ್ಥಿತಿ ನಿರ್ಮಾಣಗೊಂಡಿರುವುದನ್ನು ಅಲ್ಲಗಳೆಯಲಾಗುವುದಿಲ್ಲ ಮತ್ತು ಇದು ಜನರು, ಉದ್ಯಮ ಜಗತ್ತು ಹಾಗೂ ಇಡೀ ದೇಶದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ- BREAKING: ಕೊರೋನಾ ಹೆಚ್ಚಳ ಹಿನ್ನೆಲೆ IPL 2021 ರದ್ದುಗೊಳಿಸಿದ ಬಿಸಿಸಿಐ!
ಶಾಲೆಗಳು ಮತ್ತಷ್ಟು ಶುಲ್ಕ ವಿನಾಯಿತಿ ನೀಡಬಹುದು
ಈ ರೀತಿಯ ಆರ್ಥಿಕ ಸಂಕಷ್ಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರು ತಮ್ಮ ನೌಕರಿಗಳನ್ನು ಕಳೆದುಕೊಂಡಿದ್ದಾರೆ. ಶಾಲಾ ಶುಲ್ಕಕ್ಕೆ ಸಂಬಂಧಿಸಿದಂತೆ "ಅರ್ಜಿ ಸಲ್ಲಿಸಿರುವ ಶಾಲೆಗಳು 20219-20ರ ಶೈಕ್ಷಣಿಕ ವರ್ಷಕ್ಕೆ 2016 ರ ಕಾನೂನಿಯ ಅಡಿ ನಿರ್ಧರಿಸಲಾಗಿರುವ ವ್ಯವಸ್ಥೆಯ ಅಡಿ ಶುಲ್ಕವನ್ನು ಪಡೆದುಕೊಳ್ಳಬಹುದು. ಆದರೆ, 2020-21ರ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಂದ ಬಳಕೆಯಾಗದ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳು ಶೇ.15 ರಷ್ಟು ಕಡಿಮೆ ಶುಲ್ಕ ಪಡೆಯಬೇಕು. ಇನ್ನೊಂದೆಡೆ ಒಂದು ವೇಳೆ ಶಾಲಾ ಆಡಳಿತಗಳು ಬಯಸಿದಲ್ಲಿ ಅವು ಮತ್ತಷ್ಟು ಶುಲ್ಕ ಕಡಿತಗೊಳಿಸುವ ಸ್ವಾತಂತ್ರ್ಯ ಹೊಂದಿವೆ" ಎಂದು ಜಸ್ಟಿಸ್ ಖಾನ್ವಿಲ್ಕರ್ ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ- ಕೊರೋನಾ ಹೆಚ್ಚಳ ಹಿನ್ನೆಲೆ : ಮೇ 15 ರವರೆಗೆ ಸಂಪೂರ್ಣ ಲಾಕ್ ಡೌನ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.