Coronavirus Updates: Delta+ ರೂಪಾಂತರಿಯಿಂದ ಮಹಾರಾಷ್ಟ್ರದಲ್ಲಿ ಮೊದಲ ಸಾವು, ದೃಢಪಡಿಸಿದ ರಾಜ್ಯ ಆರೋಗ್ಯ ಸಚಿವ
Coronavirus Updates - ಕೊರೊನಾ ವೈರಸ್ ನ ಡೆಲ್ಟಾ ಪ್ಲಸ್ (Delta Plus Variant) ರೂಪಾಂತರಿಗೆ ಗುರಿಯಾದ ಓರ್ವ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೊಪೆ ಶುಕ್ರವಾರ ದೃಢಪಡಿಸಿದ್ದಾರೆ.
ಮುಂಬೈ: Coronavirus Updates - ಕೊರೊನಾ ವೈರಸ್ (Coronavirus) ನ ಡೆಲ್ಟಾ ಪ್ಲಸ್ ಸೋಂಕಿಗೆ ಗುರಿಯಾದ ಮೊದಲ ವ್ಯಕ್ತಿ ಶುಕ್ರವಾರ ಸಾವನ್ನಪ್ಪಿದ್ದಾನೆ. ರಾಜ್ಯದ ಆರೋಗ್ಯ ಸಚಿವರಾಗಿರುವ ರಾಜೇಶ್ ಟೊಪೆ (Rajesh Tope) ದೃಢಪಡಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿರುವ ರಾಜೆಸ್ ಟೊಪೆ, ರಾಜ್ಯದಲ್ಲಿ ಕಂಡು ಬಂದಿರುವ ಒಟ್ಟು 21 ಡೆಲ್ಟಾ ಪ್ಲಸ್ ಪ್ರಕರಣಗಳ ಪೈಕಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಸೊಂಕಿನಿಂದ ಮೃತಪಟ್ಟ ವ್ಯಕ್ತಿಗೆ 80 ವರ್ಷಗಳಾಗಿದ್ದು, ಆತ ಇತರೆ ಕಾಯಿಲೆಗಳಿಂದ ಕೂಡ ಬಳಲುತ್ತಿದ್ದ ಎಂದು ಅವರು ತಿಳಿಸಿದ್ದಾರೆ. ರಾಜ್ಯದ ರತ್ನಾಗಿರಿ ಜಿಲ್ಲೆಯಲ್ಲಿ 9, ಜಲಗಾವ್ ನಲ್ಲಿ 7, ಮುಂಬೈನಲ್ಲಿ ಎರಡು ಹಾಗೂ ಪಾಲ್ ಘರ್, ಠಾಣೆ, ಸಿಂಧದುರ್ಗ ಜಿಲ್ಲೆಯಲ್ಲಿ ತಲಾ ಒಂದೊಂದು ಡೆಲ್ಟಾ ಪ್ಲಸ್ ಪ್ರಕರಣಗಳು ಬೆಳಕಿಗೆ ಬಂದಿವೆ.
ಇಲ್ಲಿ ವಿಶೇಷತೆ ಎಂದರೆ, ಕಳೆದ ವಾರವಷ್ಟೇ ಈ ಕುರಿತು ಪ್ರಸ್ತುತಿಕರಣ ನಡೆಸಿದ್ದ ಮಹಾರಾಷ್ಟ್ರ ರಾಜ್ಯದ ಆರೋಗ್ಯ ವಿಭಾಗ, ಸೋಂಕಿನ ಹೊಸ ರೂಪಾಂತರಿ 'ಡೆಲ್ಟಾ+' ರಾಜ್ಯದಲ್ಲಿ (Maharashtra) ಮೂರನೇ ಕೊವಿಡ್-19 (Covid-19 Third Wave) ಅಲೆಗೆ ಕಾರಣವಾಗಬಹುದು ಎಂದು ಹೇಳಿತ್ತು. ರಾಜ್ಯದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ರಾಜ್ಯ ಕೊವಿಡ್-19 ಕಾರ್ಯಪಡೆಯ ಸದಸ್ಯರು ಹಾಗೂ ಆರೋಗ್ಯ ವಿಭಾಗದ ಸದಸ್ಯರೂ ಕೂಡ ಈ ಸಂಭೆಯಲ್ಲಿ ಶಾಮೀಲಾಗಿದ್ದರು.
ಇದನ್ನೂ ಓದಿ-Ravi Shankar Prasad : ಐಟಿ ಸಚಿವ ರವಿ ಶಂಕರ್ ಪ್ರಸಾದ್ ಟ್ವಿಟರ್ ಅಕೌಂಟ್ ಲಾಕ್..!
ಈ ಹೊಸ ರೂಪ 'ಡೆಲ್ಟಾ ಪ್ಲಸ್' ಭಾರತದಲ್ಲಿ ಮೊದಲು ಕಾಣಿಸಿಕೊಂಡ 'ಡೆಲ್ಟಾ' ಅಥವಾ 'ಬಿ .1.617.2'ರೂಪಾಂತರಿಯ ಮ್ಯೂಟೆಶನ್ ನಿಂದ ಸಿದ್ಧಗೊಂಡಿದೆ. ಭಾರತದಲ್ಲಿ ಎರಡನೇ ಅಲೆ ಬರಲು 'ಡೆಲ್ಟಾ' ಕೂಡ ಒಂದು ಕಾರಣವಾಗಿತ್ತು.
ಇದನ್ನೂ ಓದಿ- EPFO: ನಿಮ್ಮ ಖಾತೆ ಈ ಬ್ಯಾಂಕುಗಳಲ್ಲಿದ್ದರೆ ಈಗಲೇ ಈ ಕೆಲಸ ಮಾಡಿ
5 ಹಂತದ ಅನ್ಲಾಕ್ ಪ್ರಕ್ರಿಯೆಯನ್ನು 3 ಹಂತಗಳಿಗೆ ಸೀಮಿತಗೊಳಿಸಿದ ಸರ್ಕಾರ
ಆದರೆ ಇದೀಗ ಡೆಲ್ಟಾ ಪ್ಲಸ್ ರೂಪಾಂತರದ ಅಪಾಯವನ್ನು ಪರಿಗಣಿಸಿ, ಮಹಾರಾಷ್ಟ್ರ ಸರ್ಕಾರವು ಐದು ಹಂತದ ಅನ್ಲಾಕ್ ಪ್ರಕ್ರಿಯೆಯನ್ನು ಕೇವಲ ಮೂರು ಹಂತಗಳಿಗೆ ಮಾತ್ರ ಸೀಮಿತಗೊಳಿಸಿದೆ. ಈ ಬಗ್ಗೆ ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಅಧಿಸೂಚನೆ ಹೊರಡಿಸಿದ್ದಾರೆ. ರಾಜ್ಯದಲ್ಲಿ ನೀಡಲಾದ ಗರಿಷ್ಠ ವಿನಾಯಿತಿಯನ್ನು ಈಗ ಹಿಂಪಡೆಯಲಾಗಿದೆ ಎಂದು ಅಧಿಸೂಚನೆಯಲ್ಲಿ ಸರ್ಕಾರ ಹೇಳಿದೆ. ಡೆಲ್ಟ್ ಪ್ಲಸ್ ರೂಪಾಂತರವನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ರಾಜ್ಯ ಮತ್ತು ಆರೋಗ್ಯ ಇಲಾಖೆಯಲ್ಲಿ ಕರೋನದ ಮೇಲೆ ರಚಿಸಲಾದ ಕಾರ್ಯಪಡೆ ನಿರ್ದೇಶಿಸಿದೆ. ಆದ್ದರಿಂದ, ನಿರ್ಬಂಧಗಳನ್ನು ವಿಧಿಸಲು ನೀಡಲಾದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ-ಜುಲೈ ಅಲ್ಲ ಅಕ್ಟೋಬರನಿಂದ ಜಾರಿಯಾಗಲಿದೆ New Wage Code! ವೇತನ, PFಗೆ ಸಂಬಂಧಿಸಿದ Big Update
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.