ನವದೆಹಲಿ :CoronaVirus In India:  ಕರೋನವೈರಸ್ ಪ್ರಕರಣಗಳು ಮತ್ತೆ ಹೆಚ್ಚಾಗಲು ಆರಂಭಿಸಿವೆ. ವಿಶೇಷವಾಗಿ ಐದು ರಾಜ್ಯಗಳಲ್ಲಿ, ಮತ್ತೊಮ್ಮೆ ಕೊವಿಡ್ (COVID-19) ಆತಂಕ ಹೆಚ್ಚಾಗತೊಡಗಿದೆ. ಈ ಐದು ರಾಜ್ಯಗಳ ಪೈಕಿ ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಗರಿಷ್ಠ ಸಂಖ್ಯೆಯ ಕರೋನಾ ಪ್ರಕರಣಗಳು ದಾಖಲಾಗಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಎರಡೂ ರಾಜ್ಯಗಳಿಗೆ ರಾತ್ರಿ ಕರ್ಫ್ಯೂ ಹೇರುವ ಬಗ್ಗೆ ವಿಚಾರ ಮಾಡುವಂತೆ ಸೂಚಿಸಿದೆ. ಶುಕ್ರವಾರ ಮತ್ತೊಮ್ಮೆ ದೇಶದಲ್ಲಿ 44 ಸಾವಿರಕ್ಕೂ ಹೆಚ್ಚು ಹೊಸ ಕೊರೊನಾ (Coronavirus) ಪ್ರಕರಣಗಳು ಪತ್ತೆಯಾಗಿವೆ. 


COMMERCIAL BREAK
SCROLL TO CONTINUE READING

ರಾತ್ರಿ ಕರ್ಫ್ಯೂ ವಿಧಿಸಲು ಕೇಂದ್ರ ಗೃಹ ಕಾರ್ಯದರ್ಶಿ ಸಲಹೆ  : 
ಇದೀಗ ಹೆಚ್ಚುತ್ತಿರುವ ಹೊಸ ಕರೋನಾ ಪ್ರಕರಣದ (Coronavirus) ಬಗ್ಗೆ ಆತಂಕವು ಹೆಚ್ಚಿದೆ. ಗುರುವಾರ, ಕೇಂದ್ರ ಗೃಹ ಕಾರ್ಯದರ್ಶಿ ಮಹಾರಾಷ್ಟ್ರ ಮತ್ತು ಕೇರಳದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಕರೋನ ಪ್ರಕರಣಗಳು ಹೆಚ್ಚುತ್ತಿರುವ ಪ್ರದೇಶಗಳಲ್ಲಿ ನಿಯಂತ್ರಣದ ಬಗೆ ಹೇಗೆ ಎಂದು ಸಭೆಯಲ್ಲಿ, ಗೃಹ ಕಾರ್ಯದರ್ಶಿ ರಾಜ್ಯಗಳನ್ನು ಪ್ರಶ್ನಿಸಿದ್ದಾರೆ. ಇದೇ  ವೇಳೆ, ರಾತ್ರಿ ಕರ್ಫ್ಯೂ (Night Curfew) ವಿಧಿಸುವ ಬಗ್ಗೆ ಪರಿಗಣಿಸುವಂತೆ  ಎರಡೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಲಸಿಕೆ ಅಭಿಯಾನವನ್ನು ಚುರುಕುಗೊಳಿಸಲು ಮತ್ತು ಲಸಿಕೆಯ ಕೊರತೆಯಿದ್ದಲ್ಲಿ ಬೇಡಿಕೆ ಇಡುವಂತೆಯೂ, ಗೃಹ ಕಾರ್ಯದರ್ಶಿ ಕೇರಳ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೆ (Maharastra government) ಹೇಳಿದ್ದಾರೆ. 


 ಇದನ್ನೂ ಓದಿ :  IRCTC ಟಿಕೆಟ್ ಬುಕಿಂಗ್ ನಿಯಮದಲ್ಲಿ ಬದಲಾವಣೆ! ಈಗ ಈ ಕೆಲಸ ಮಾಡಿದರಷ್ಟೇ ಸೀಟ್ ರಿಸರ್ವೇಶನ್ ಸಾಧ್ಯ!


ಪ್ರಕರಣಗಳು ಹೆಚ್ಚಾದರೆ, ಮತ್ತೆ ನಿರ್ಬಂಧ : 
ಮುಂಬರುವ ಹಬ್ಬದ ಸಮಯದಲ್ಲಿ ಕಟ್ಟು ನಿಟ್ಟಿನ ನಿಯಮಗಳನ್ನು ಪಾಲಿಸುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ ಎಂದು ಗೃಹ ಕಾರ್ಯದರ್ಶಿ ತಿಳಿಸಿದ್ದಾರೆ. ಸಾಮಾಜಿಕ ಕಾರ್ಯಕ್ರಮಗಳನ್ನು ನಿಷೇಧಿಸುವಂತೆ ಕೇಂದ್ರವು ರಾಜ್ಯಗಳಿಗೆ ಹೇಳಿದೆ. ಹಬ್ಬದ ಸಮಯದಲ್ಲಿಯೂ  ಕೂಡ ಜನಸಂದಣಿಯನ್ನು ಅನುಮತಿಸುವುದಿಲ್ಲ ಎಂದು ಹೇಳಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಕೊರೊನಾ ಪ್ರಕರಣಗಳು ಮತ್ತಷ್ಟು ಹೆಚ್ಚಾದರೆ, ಮತ್ತೊಮ್ಮೆ ಲಾಕ್‌ಡೌನ್ (Lockdown) ಹೇರುವ ಸಾಧ್ಯತೆಗಳು ಕೂಡಾ ದಟ್ಟವಾಗಿವೆ. 


ಈ ಐದು ರಾಜ್ಯಗಳಲ್ಲಿ ಮತ್ತೆ ಆತಂಕ : 
ಕೇರಳದಲ್ಲಿ ಓಣಂ ವೇಳೆ ನೀಡಿದ ಸಡಿಲಿಕೆ ಕಾರಣದಿಂದಾಗಿ, ಕೋವಿಡ್ ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಗುರುವಾರ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 30,000 ದಾಟಿದೆ.  ಇನ್ನು ಮೇ 27 ರ ನಂತರ, ಯಾವುದೇ ರಾಜ್ಯವು ಭಾರತದಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದ್ದರೆ, ಅದು ತಮಿಳುನಾಡು. ಮೇ 27 ರಂದು ಇಲ್ಲಿ ಒಟ್ಟು 33,361ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದ ಐದು ರಾಜ್ಯಗಳಾದ - ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಕೇರಳ (Kerala) ಮತ್ತು ಕರ್ನಾಟಕ (Karnataka)  ಒಟ್ಟಾಗಿ ತೆಗೆದುಕೊಂಡರೆ, ಈ ಪ್ರದೇಶಗಳಲ್ಲಿ ಪ್ರತಿ ಮಿಲಿಯನ್ ನಿವಾಸಿಗಳಿಗೆ ಸರಾಸರಿ ಹೊಸ ಪ್ರಕರಣಗಳು 7 ಪ್ರತಿಶತ ಹೆಚ್ಚಾಗಿದೆ.  


 ಇದನ್ನೂ ಓದಿ :  Arvind kejriwal : ಬಾಲಿವುಡ್ ನಟ ಸೋನು ಸೂದ್ ಭೇಟಿಯಾದ ದೆಹಲಿ ಸಿಎಂ ಕೇಜ್ರಿವಾಲ್ : ಹಾಗಿದ್ರೆ ಭೇಟಿಯ ಗುಟ್ಟೇನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.