ನವದೆಹಲಿ : Delhi Coronavirus Update : ಕರೋನಾ ವೈರಸ್ 'ಎಕ್ಸ್‌ಇ'  ಹೊಸ ರೂಪಾಂತರದ ಆತಂಕ ಹೆಚ್ಚುತ್ತಿದೆ. ಈ ಆತಂಕದ ನಡುವೆ, ದೆಹಲಿಯಲ್ಲಿ ಇತ್ತೀಚೆಗೆ ಕರೋನಾ ಸೋಂಕಿಗೆ ಒಳಗಾದ ಜನರ ಸುಮಾರು 300 ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಸರ್ಕಾರದ ಅಧಿಕೃತ ಮೂಲಗಳು ಈ ಮಾಹಿತಿ ನೀಡಿವೆ.


COMMERCIAL BREAK
SCROLL TO CONTINUE READING

300 ಮಾದರಿ ಪರೀಕ್ಷೆಗೆ ರವಾನೆ : 
'XE' ನಂತಹ ಯಾವುದೇ ಹೊಸ ರೂಪಾಂತರವು ನಗರದಲ್ಲಿ ಹರಡಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಜೀನೋಮ್ ಸೀಕ್ವೆನ್ಸಿಂಗ್ ಮಾಡಲಾಗುತ್ತಿದೆ. ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಕೋವಿಡ್ -19 ಸೋಂಕಿಗೆ ಒಳಗಾದ ಜನರ ಸುಮಾರು 300 ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಗೆ  ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರ ವರದಿ ಬರಲು  7 ರಿಂದ 10 ದಿನಗಳು ಬೇಕಾಗುತ್ತದೆ.  


ಇದನ್ನೂ ಓದಿ : iPhone 14: ಸಿಗ್ನಲ್ ಇಲ್ಲದೆಯೂ ಕಾರ್ಯನಿರ್ವಹಿಸುತ್ತದೆ ಹೊಸ ಆ್ಯಪಲ್ ಐಫೋನ್!


ಫೆಬ್ರವರಿ 27 ರ ನಂತರ ಅತಿ ಹೆಚ್ಚು ಪ್ರಕರಣ : 
ಶುಕ್ರವಾರ ದೆಹಲಿಯಲ್ಲಿ ದಾಖಲಾದ 366 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಫೆಬ್ರವರಿ 27 ರಿಂದ ಇಲ್ಲಿವರೆಗೆ ದಾಖಲಾದ ಅತಿ ಹೆಚ್ಚು ಪ್ರಕರಣವಾಗಿದೆ. ಇದರೊಂದಿಗೆ ಈಗ ಸೋಂಕಿನ ಪ್ರಮಾಣ ಶೇ.3.95ಕ್ಕೆ ಏರಿಕೆಯಾಗಿದೆ.  ದೆಹಲಿಯಲ್ಲಿ ಸಕ್ರಿಯ ಕರೋನಾ ರೋಗಿಗಳ ಸಂಖ್ಯೆ ಈಗ 1000 ದಾಟಿದೆ.  


ಉಚಿತ ಬೂಸ್ಟರ್ ಡೋಸ್‌ಗೆ ದೆಹಲಿ ಸರ್ಕಾರ ಸಿದ್ಧತೆ  :
ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ,  ದೆಹಲಿ ಸರ್ಕಾರ ಮತ್ತೆ ಕರೋನಾ ಲಸಿಕೆಯ ಬೂಸ್ಟರ್ ಡೋಸ್‌ಗಳನ್ನು ಉಚಿತವಾಗಿ ನೀಡಲು ಸಿದ್ಧತೆಗಳನ್ನು ಮಾಡಿದೆ. ಭಾರತದಲ್ಲಿ, ಖಾಸಗಿ ಕೇಂದ್ರಗಳಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರಿಗೆ ಬೂಸ್ಟರ್ ಡೋಸ್ ಅನ್ನು ಭಾನುವಾರ ಪ್ರಾರಂಭಿಸಲಾಯಿತು. ಎರಡನೇ ಡೋಸ್ ತೆಗೆದುಕೊಂಡು ಒಂಭತ್ತು ತಿಂಗಳು  ಪೂರ್ಣಗೊಂಡಿದ್ದರೆ, ಬೂಸ್ಟರ್ ಡೋಸ್ ತೆಗೆದುಕೊಳ್ಳಬಹುದು. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಡೋಸ್‌ಗಳ ಬೆಲೆ 225 ರೂ ಆಗಿದೆ.  ಖಾಸಗಿ ಲಸಿಕೆ ಕೇಂದ್ರಗಳಲ್ಲಿ 150   ರೂ ರೆ. ಹೆಚ್ಚಿಗೆ ನೀಡಬೇಕಾಗುತ್ತದೆ. 


ಇದನ್ನೂ ಓದಿ : ಗುಜರಾತ್ ನ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಗೆ ಆಹ್ವಾನವಿತ್ತ ಆಪ್


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.