ನವದೆಹಲಿ: ವಿಶ್ವಾದ್ಯಂತ ಹಲವು ದೇಶಗಳಲ್ಲಿ ಕೊರೊನಾ ವೈರಸ್ ಪಸರಿಸಿರುವ ಹಿನ್ನೆಲೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಒಂದು ಸಂಸ್ಥೆ ಹಣಕಾಸಿನ ವ್ಯವಹಾರಕ್ಕೆ ಕರೆನ್ಸಿ ನೋಟ್ ಬಳಸದೆ ಸಾಧ್ಯವಾದಷ್ಟು ಡಿಜಿಟಲ್ ಪೇಮೆಂಟ್ ಬಳಸಿ ಎಂದು ಸಲಹೆ ನೀಡಿದೆ. ಈ ಸಲಹೆಯನ್ನು ನೀಡಿರುವ ವಾಯ್ಸ್ ಆಫ್ ಬ್ಯಾಂಕಿಂಗ್ ಸಂಘಟನೆ ಈ ಸಲಹೆಯನ್ನು ನೀಡಿ ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಕುರಿತು ಉಲ್ಲೇಖಿಸಿದೆ. ತನ್ನ ವರದಿಯಲ್ಲಿ ಈ ಕುರಿತು ಉಲ್ಲೇಖಿಸಿರುವ ವಿಶ್ವ ಆರೋಗ್ಯ ಸಂಸ್ಥೆ(WHO) ಜನರು ಸಾಧ್ಯವಾದಷ್ಟು ಡಿಜಿಟಲ್ ಪೇಮೆಂಟ್ ತಂತ್ರಜ್ಞಾನದ ಬಳಕೆ ಮಾಡಬೇಕು ಎಂದು ಹೇಳಿತ್ತು.


COMMERCIAL BREAK
SCROLL TO CONTINUE READING

ಸಂಘಟನೆಯ ಪ್ರಕಾರ, ದೇಶದಲ್ಲಿ ನೋಟು ನಿಷೇಧದ ಸಮಯದಲ್ಲಿ, ಸಾವಿರಾರು ಬ್ಯಾಂಕ್ ಉದ್ಯೋಗಿಗಳು ಸೋಂಕಿನಿಂದ ಬಳಲುತ್ತಿದ್ದರು ಎಂಬುದನ್ನು ಉಲ್ಲೇಖಿಸಿದೆ. ನೌಕರರ ಅನುಕೂಲಕ್ಕಾಗಿ ಬ್ಯಾಂಕ್ ಆಡಳಿತಗಳೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ  ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಸಂಸ್ಥೆ ಹೇಳಿದೆ. ಪಿಟಿಐ ಸುದ್ದಿಸಂಸ್ಥೆ ಪ್ರಕಟಿಸಿರುವ ಒಂದು ವರದಿಯ ಪ್ರಕಾರ, ಗ್ರಾಹಕರು ನೋಟುಗಳನ್ನು ಮುಟ್ಟಿದ ನಂತರ ಕೈ ತೊಳೆಯಬೇಕು ಎಂದು ವಾಯ್ಸ್ ಆಫ್ ಬ್ಯಾಂಕಿಂಗ್ ಹೇಳಿದೆ. ರೋಗ ಹರಡುವಿಕೆಯನ್ನು ತಡೆಗಟ್ಟಲು, ಜನರು ಸಂಪರ್ಕವಿಲ್ಲದ ತಂತ್ರಜ್ಞಾನ ಅಂದರೆ ಡಿಜಿಟಲ್ ಪಾವತಿಗಳಂತಹ ವಿಧಾನಗಳನ್ನು ಸಾಧ್ಯವಾದಷ್ಟು ಬಳಸಬೇಕು.


ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಮೈಕ್ರೋಬಯಾಲಜಿ ವಿಭಾಗ ನಡೆಸಿರುವ ಒಂದು ಅಧ್ಯಯನವನ್ನು ಉಲ್ಲೇಖಿಸಿರುವ ಸಂಘಟನೆ, ಕರೆನ್ಸಿ ನೋಟುಗಳು ಮತ್ತು ನಾಣ್ಯಗಳು ಸೋಂಕಿನ ಮೂಲವಾಗಬಹುದು ಎಂದು ಹೇಳಿದೆ. ಆಟೋರಿಕ್ಷಾ ಚಾಲಕರು, ವೈದ್ಯಕೀಯ ಮಳಿಗೆಗಳು, ಮಾರಾಟಗಾರರು ಮುಂತಾದ ವಿವಿಧ ಮೂಲಗಳಿಂದ ಸಂಶೋಧಕರು ಕರೆನ್ಸಿ ನೋಟುಗಳು ಮತ್ತು ನಾಣ್ಯಗಳನ್ನು ಸಂಗ್ರಹಿಸಿದ್ದರು ಹಾಗೂ ಅವುಗಳಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಪತ್ತೆಯಾಗಿವೆ ಎಂದು ಸಂಘಟನೆ ಹೇಳಿದೆ. ಆದರೆ, ರೋಗ ಹರಡುವಿಕೆ ಮತ್ತು ತಡೆಗಟ್ಟುವಿಕೆಯ ಪ್ರೋಟೋಕಾಲ್‌ಗಳಲ್ಲಿ ಈ ಸೋಂಕಿನ ಮೂಲವನ್ನು ಸರಿಯಾಗಿ ವ್ಯಾಖ್ಯಾನಿಸಲಾಗಿಲ್ಲ.


ಈ ಕುರಿತು ಹೇಳಿಕೆ ನೀಡಿರುವ ಕೆಜಿಎಂಯುನ ಮೈಕ್ರೋಬಯಾಲಜಿ ವಿಭಾಗದ ಪ್ರಮುಖ ಲೇಖಕಿ ಡಾ. ಸುನೀತಾ ಸಿಂಗ್, ಚಾಲ್ತಿಯಲ್ಲಿರುವ ನೋಟುಗಳು ಸೂಕ್ಷ್ಮಜೀವಿಗಳಿಂದ ಕಲುಷಿತಗೊಂಡಿದ್ದು,  ಹಾನಿಕಾರಕ ಜೀವಿಗಳ ಹರಡುವಿಕೆಯಲ್ಲಿ ಈ ಮಾಲಿನ್ಯವು ಸಹ ಒಂದು ಮಹತ್ವದ ಪಾತ್ರ ವಹಿಸುತ್ತದೆ ಎಂಬುದು ನಮ್ಮ ಫಲಿತಾಂಶಗಳಲ್ಲಿ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಈ ಸಂಶೋಧನೆಯಲ್ಲಿ ಮೈಕ್ರೋಬಯಾಲಾಜಿ ಹಾಗೂ ಶ್ವಾಶಕೋಶ ಚಿಕಿತ್ಸೆಯ ತಜ್ಞರೂ ಕೂಡ ಶಾಮೀಲಾಗಿದ್ದರು ಎಂದು ಸಂಶೋಧಕರು ತಿಳಿಸಿದ್ದಾರೆ.