ನವದೆಹಲಿ: ಲಸಿಕೆ ತಯಾರಿಸುವ ಕಂಪನಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ  ಸಂಭಾವ್ಯ ಲಸಿಕೆ ಕೋವಿಡ್ -19 (Corona Vaccine) ವೈದ್ಯಕೀಯ ಪರೀಕ್ಷೆಯಲ್ಲಿ ಭಾಗಿಯಾಗಿರುವ ವ್ಯಕ್ತಿಯ ಆರೋಪವನ್ನು ತಿರಸ್ಕರಿಸಿದೆ. ಸುಳ್ಳು ಆರೋಪಗಳನ್ನು ಮಾಡಿದ್ದಕ್ಕಾಗಿ 100 ಲಕ್ಷ ಕೋಟಿ ರೂ.ಗಳ ಭಾರಿ ದಂಡವನ್ನು ವಸೂಲಿ ಮಾಡುವುದಾಗಿ ಕಂಪನಿಯು ಬೆದರಿಕೆ ಹಾಕಿದೆ (100-Crore case after vaccine trial distress claim).


COMMERCIAL BREAK
SCROLL TO CONTINUE READING

ಇದನ್ನು ಓದಿ- ಭಾರತದಲ್ಲಿನ ಕೊರೊನಾ ಲಸಿಕೆ ತಯಾರಿಕೆಗೆ ಭಾರಿ ಹಿನ್ನಡೆ....!


ಆರೋಪ ತಳ್ಳಿ ಹಾಕಿ 100 ಕೋಟಿ ರೂ.ದಂಡ
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (Serum institute of India) ಪ್ರಕಾರ, ನೋಟಿಸ್‌ನಲ್ಲಿ ಮಾಡಿದ ಆರೋಪಗಳು ದುರುದ್ದೇಶಪೂರಿತ ಮತ್ತು ಸುಳ್ಳಾಗಿವೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ವ್ಯಕ್ತಿಯ ವೈದ್ಯಕೀಯ ಸ್ಥಿತಿಯ ಬಗ್ಗೆ ಸಹಾನುಭೂತಿ ಹೊಂದಿದೆ, ಆದರೆ ಲಸಿಕೆ ಪರೀಕ್ಷೆ ಮತ್ತು ಅವರ ಆರೋಗ್ಯ ಸ್ಥಿತಿಗೆ ಯಾವುದೇ ಸಂಬಂಧವಿಲ್ಲ. ಇದೆ. ಇಂತಹ ಆರೋಪಗಳ ವಿರುದ್ಧ ಕಂಪನಿ ತನ್ನನ್ನು ತಾನು ಸಮರ್ಥಿಸಿಕೊಳ್ಳಲಿದ್ದು. ತಪ್ಪು ಆರೋಪಗಳಿಗೆ 100 ಕೋಟಿ ರೂ. ಮಾನಹಾನಿ ಮೊಕದ್ದಮೆ ದಾಖಲಿಸುವುದಾಗಿ ಕಂಪನಿ ಹೇಳಿದೆ.


ಇದನ್ನು ಓದಿ- ಗುಡ್ ನ್ಯೂಸ್! ಡಿಸೆಂಬರ್ ನಲ್ಲಿ ಕೊರೊನಾ ಲಸಿಕೆ ಸಿದ್ದ..!


ವ್ಯಾಕ್ಸಿನ್ ಅಡ್ಡ ಪರಿಣಾಮಗಳ ಕುರಿತು ಆರೋಪ ಮಾಡಿದ್ದ ವಾಲಂಟೀಯರ್
ಚೆನ್ನೈನಲ್ಲಿ ನಡೆದ ಕೋವಿಶೀಲ್ಡ್ (COVISHIELD) ಲಸಿಕೆಯ ಪ್ರಯೋಗದಲ್ಲಿ ಭಾಗವಹಿಸಿದ್ದ 40 ವರ್ಷದ ವ್ಯಕ್ತಿಯೊಬ್ಬರು ತೀವ್ರ ನ್ಯೋರಾಲಾಜಿಕಲ್ ಸಮಸ್ಯೆ ಮತ್ತು ದುಷ್ಪ್ರಭಾವ  ಸೇರಿದಂತೆ ಗಂಭೀರ ಅಡ್ಡಪರಿಣಾಮಗಳನ್ನು ಅನುಭವಿಸಿರುವುದಾಗಿ ಆರೋಪಿಸಿದ್ದರು. ಇದಕ್ಕಾಗಿ ಅವರು ಸೀರಮ್ ಸಂಸ್ಥೆ ಮತ್ತು ಇತರರಿಂದ ಐದು ಕೋಟಿ ರೂ.ಪರಿಹಾರ ಕೋರಿದ್ದರು ಹಾಗೂ ಪರೀಕ್ಷೆಯನ್ನು ನಿಷೇಧಿಸುವಂತೆ ಒತ್ತಾಯಿಸಿದ್ದರು.


ಇದನ್ನು ಓದಿ-ಭಾರತದಲ್ಲಿ Corona Vaccine ಬೆಲೆ ಎಷ್ಟು ಇರಲಿದೆ, ಯಾವ ದಿನ ಎಲ್ಲರಿಗೂ ಲಭಿಸಲಿದೆ ವ್ಯಾಕ್ಸಿನ್


ಅಂತಿಮ ಹಂತಕ್ಕೆ ತಲುಪಿದ ಟ್ರಯಲ್
ಕೋವಿಡ್ -19 ಲಸಿಕೆ ಕೋವಿಶೀಲ್ಡ್ ತಯಾರಿಸಲು ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತುಔಷಧಿ ತಯಾರಿಕಾ ಕಂಪನಿ ಅಸ್ಟ್ರಾಜೆನೆಕಾ ಜೊತೆ ಕೈಜೋಡಿಸಿದೆ. ಸೀರಮ್ ಸಂಸ್ಥೆ ಭಾರತದಲ್ಲಿ ಈ ಲಸಿಕೆಯನ್ನು ಪರೀಕ್ಷಿಸುತ್ತಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲಸಿಕೆ ತನ್ನ ಪರೀಕ್ಷೆಯ ಅಂತಿಮ ಹಂತದಲ್ಲಿದೆ. ಹಿಂದಿನ ಎಲ್ಲಾ ಪ್ರಯೋಗಗಳು ಸುರಕ್ಷಿತವೆಂದು ಸಾಬೀತಾಗಿವೆ. ಈ ಘಟನೆಯ ನಂತರ ಇದ್ದಕ್ಕಿದ್ದಂತೆ ಪರೀಕ್ಷೆಗಳನ್ನು ನಿಲ್ಲಿಸಲಾಗಿದೆ.