ಫೆಬ್ರವರಿ 2021 ರ ಸುಮಾರಿಗೆ ಆರೋಗ್ಯ ಕಾರ್ಯಕರ್ತರು ಮತ್ತು ವೃದ್ಧರಿಗೆ ಕರೋನಾ ಲಸಿಕೆ ಲಭ್ಯವಾಗಲಿದೆ. ಏಪ್ರಿಲ್‌ನಿಂದ ಇದು ಉಳಿದ ಸಾರ್ವಜನಿಕರನ್ನು ತಲುಪಲಿದೆ. ಇದರ ಎರಡು ಅಗತ್ಯ ಡೋಸ್ ಗಳನ್ನು ಪ್ರತಿಯೊಬ್ಬರಿಗೂ ನೀಡಲಾಗುವುದು.
ನವದೆಹಲಿ: ಪ್ರಸ್ತುತ ಕರೋನಾ ಲಸಿಕೆ (COVID-19 Vaccine) ಗಾಗಿ ಇಡೀ ಜಗತ್ತೇ ಕಾಯುತ್ತಿದೆ. ಫೈಜರ್ ಮತ್ತು ಮಾಡರ್ನಾ ಕೂಡ ತಮ್ಮ ಲಸಿಕೆ ಬಗ್ಗೆ ಹೇಳಿಕೆ ನೀಡಿವೆ. ಭಾರತವ ಬಯೋಟೆಕ್ ಲಸಿಕೆಯೂ ಕೂಡ ಪ್ರಯೋಗದ ಮೂರನೇ ಹಂತಕ್ಕೆ ತಲುಪಿದೆ.
ಇದನ್ನು ಓದಿ- ಅಮೆರಿಕನ್ನರಿಗೆ ಕರೋನಾ ಲಸಿಕೆ ಯಾವಾಗ ಸಿಗುತ್ತೆ? ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
Hindustan Times Leadership ಶೃಂಗಸಭೆಯಲ್ಲಿ ಈ ಕುರಿತು ಮಾತನಾಡಿರುವ Serum Institute of India ಸಿಇಒ ಆದರ್ ಪೂನವಾಲ್ಲಾ, ಭಾರತದಲ್ಲಿ Covishield ಲಸಿಕೆಯ ಬೆಲೆ ಪ್ರತಿ ಡೋಸ್‌ಗೆ 500-600 ರೂ. ಇರಲಿದ್ದು, ಭಾರತ ಸರ್ಕಾರವು ಈ ಕರೋನಾ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತದೆ, ಅದು 3-4 ಡಾಲರ್‌ಗಳ ನಡುವೆ ಇರಬಹುದು. ಇದನ್ನು ಜನಸಾಮಾನ್ಯರಿಗೆ 5 ರಿಂದ 6 ಡಾಲರ್ ಗೆ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅದರ್ ಪೂನಾವಾಲಾ, ಆಕ್ಸ್ ಫರ್ಡ್ಕೊವಿಡ್ 19 ವ್ಯಾಕ್ಸಿನ್ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ವೃದ್ಧರಿಗಾಗಿ ಫೆಬ್ರುವರಿ 2021ರ ಸುಮಾರಿಗೆ ಸಿಗುವ ಸಾಧ್ಯತೆ ಇದೆ. ಏಪ್ರಿಲ್ ತಿಂಗಳಿನಿಂದ ಇತರೆ ಜನಸಾಮಾನ್ಯರಿಗೆ ತಲುಪಲಿದೆ. ಇದರ ಎರಡು ಆವಶ್ಯಕ ಡೋಸ್ ಗಳನ್ನು ಪ್ರತಿಯೊಬ್ಬರಿಗೆ ನೀಡಲಾಗುವುದು. ಇದಕ್ಕಾಗಿ 1000 ರೂ. ಖರ್ಚು ಮಾಡಬೇಕಾಗಬಹುದು. 2024ರವರೆಗೆ ದೇಶದ ಪ್ರತಿಯೊಬ್ಬ ನಾಗರಿಕರು ಈ ಲಸಿಕೆಯನ್ನು ಹಾಕಿಸಿಕೊಂಡಿರುತ್ತಾರೆ.
ಇದಕ್ಕಾಗಿ ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಬ್ರಿಟಿಷ್ ಕಂಪನಿ ಅಸ್ಟ್ರಾಜೆನೆಕಾ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಅಡಿಯಲ್ಲಿ 100 ಕೋಟಿ ಡೋಸ್ ಗಳನ್ನು ಭಾರತ ಮತ್ತು ಇತರ ಬಡ ದೇಶಗಳಿಗೆ ಮಾರಾಟ ಮಾಡಲಾಗುವುದು. ಮುಂದಿನ ತಿಂಗಳು ತಮ್ಮ ಕಂಪನಿಯು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ವಿ.ಜಿ.ಸೋಮಾನಿ ಅವರಿಂದ ತುರ್ತು ಬಳಕೆಗೆ ಅನುಮೋದನೆ ಪಡೆಯಲಿದೆ ಎಂದು ಪೂನವಾಲ್ಲಾ ಹೇಳಿದ್ದಾರೆ.
ಈ ಕುರಿತು ಕಿರುತೆರೆಯಲ್ಲಿ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮೈಕ್ರೋಸಾಫ್ಟ್ ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್, ವೇಳೆಗೆ ವ್ಯಾಕ್ಸಿನ್ ಮಾರುಕಟ್ಟೆಗೆ ಬಂದರೆ 2021 ಬೇಸಿಗೆ ಕಾಲದ ಹೊತ್ತಿಗೆ ಸ್ಥಿತಿ ಸಾಮಾನ್ಯಕ್ಕೆ ಮರಳಲಿದೆ ಎಂದಿದ್ದಾರೆ.