LPG Cylinder Price: ಪ್ರತಿ ಸಿಲಿಂಡರ್ ಗೆ 10 ರೂಪಾಯಿ ಇಳಿಕೆ, ನಾಳೆಯಿಂದಲೇ ದರ ಜಾರಿ!
ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ಪ್ರಕಟ
ನವದೆಹಲಿ: ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 10 ರೂಪಾಯಿ ಇಳಿಕೆ ಮಾಡಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ಪ್ರಕಟಿಸಿದೆ. ಈ ದರವು ಏಪ್ರಿಲ್ 1 ರಿಂದ ಜಾರಿಯಾಗಲಿದೆ.
ಬೆಲೆ ಇಳಿಕೆಯಿಂದ ಜನತೆಯ ಮುಖದಲ್ಲಿ ಮಂದಹಾಸ ಮೂಡಿದೆ. ಪ್ರಸ್ತುತ ಒಂದು ಸಿಲಿಂಡರ್ ಬೆಲೆ(Cylinder Price) 819 ರೂಪಾಯಿ ಇದೆ.
ಕೊರೊನಾ ಪ್ರಕರಣಗಳ ಹೆಚ್ಚಳ: ಈ ರಾಜ್ಯದಲ್ಲಿ ಏಪ್ರಿಲ್ 4 ರವರೆಗೆ ಶಾಲೆಗಳು ಬಂದ್
ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್(Indian Oil Corporation Limited) ಹೇಳಿಕೆಯ ಪ್ರಕಾರ, "ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ನವೆಂಬರ್ 2020 ರಿಂದ ನಿರಂತರವಾಗಿ ಏರಿಕೆಯಾಗುತ್ತಲೇ ಇತ್ತು. ಭಾರತವು ಹೆಚ್ಚಾಗಿ ಕಚ್ಚಾ ತೈಲವನ್ನು ಅವಲಂಬಿಸಿರುವುದರಿಂದ, ತೈಲಗಳ ಬೆಲೆಯಲ್ಲಿ ಅರಿಕೆ ಇಳಿಕೆ ಆಗುತ್ತಲೇ ಇರುತ್ತದೆ.
ಉತ್ತರ ಪ್ರದೇಶದಲ್ಲಿ 19 ರ ಹರೆಯದ ಯುವತಿ ಮೇಲೆ ಗ್ಯಾಂಗ್ ರೇಪ್
"ಯುರೋಪ್ ಮತ್ತು ಏಷ್ಯಾದಲ್ಲಿ ಕೋವಿಡ್ -19(Covid-19) ಪ್ರಕರಣಗಳು ಹೆಚ್ಚುತ್ತಿರುವದರಿಂದ ಆತಂಕ ಹೆಚ್ಚಾಗುತ್ತಿದೆ. ಅಲ್ಲದೆ ಲಸಿಕೆಗಳ ಅಡ್ಡಪರಿಣಾಮಗಳ ಬಗ್ಗೆ ಕೂಡ ಜನರು ಆತಂಕಗೊಂಡಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನದ ಬೆಲೆಗ 2021 ಮಾರ್ಚ್ ನಲ್ಲಿ ಹದಿನೈದು ದಿನಗಳಲ್ಲಿ ಎರಡು ಬಹರಿ ಇಳಿಕೆಯಾಗಿದೆ.
ದೇಶದೆಲ್ಲೆಡೆ ಕಳೆದ 24 ಗಂಟೆಗಳಲ್ಲಿ 50 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲು
ಪ್ರಸ್ತುತ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1021, 819 ನಿಂದ 809 ಇಳಿಕೆ ಆಗಲಿದೆ. ಈ ದರ ದೆಹಲಿಯಲ್ಲಿ 2021 ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.
Haridwar Kumbh: ಹರಿದ್ವಾರ ಕುಂಭಕ್ಕೆ ತೆರಳುವ ಮುನ್ನ ಈ ಕೆಲಸ ಮಾಡಿ, ಇಲ್ಲದಿದ್ದರೆ ಸಿಗಲ್ಲ ಪ್ರವೇಶ
https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.