ಉತ್ತರ ಪ್ರದೇಶ: ಉತ್ತರ ಪ್ರದೇಶದ ನೋಯ್ಡಾದಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಳೆದ 3 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪತಿ-ಪತ್ನಿ ಇಬ್ಬರೂ ಸಂತೋಷದಿಂದಲೇ ಇದ್ದರು. ಆದರೆ, ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.


COMMERCIAL BREAK
SCROLL TO CONTINUE READING

ಪತಿ ನೋಯ್ಡಾದ ಸೆಕ್ಟರ್ 62ರಲ್ಲಿರುವ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಪತಿ ಮನೆಯಲ್ಲಿಯೇ ಇದ್ದರು. 3 ವರ್ಷಗಳ ದಾಂಪತ್ಯ ಜೀವನ ಸುಖಮಯವಾಗಿತ್ತು. ಇದ್ದಕ್ಕಿದ್ದಂತೆ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ.


ಇದನ್ನೂ ಓದಿ: Weather update:ಬಿಸಿಲಿಗೆ ತತ್ತರಿಸಿದ ದೆಹಲಿ.. 72 ವರ್ಷಗಳಲ್ಲಿ ದಾಖಲಾದ 2ನೇ ಅತಿ ಹೆಚ್ಚು ತಾಪಮಾನ!


ದಂಪತಿ ಆತ್ಮಹತ್ಯೆಗೆ ಕಾರಣವೇನು..?


ಕಳೆದ ೮ ವರ್ಷಗಳಿಂದ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ಅರುಣ್ 3 ವರ್ಷಗಳ ಹಿಂದೆ ಶಶಿಕಲಾ ಎಂಬುವರ ಜೊತೆ ಮದುವೆ ಮಾಡಿಕೊಂಡಿದ್ದರು. ದಂಪತಿಗಳಿಬ್ಬರೂ ಅನೋನ್ಯವಾಗಿಯೇ ಜೀವನ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಅರುಣ್ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಹೀಗಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಈ ವೇಳೆ ಅವರಿಗೆ ಕೊನೆ ಹಂತದ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಇದರಿಂದ ಶಾಕ್‍ಗೊಳಗಾದ ಅರುಣ್-ಶಶಿಕಲಾ ಮಾನಸಿಕ ಒತ್ತಡಕ್ಕೊಳಗಾಗಿದ್ದಾರೆ. ಇದರ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.


ಪೊಲೀಸರಿಗೆ ಡೇತ್‍ನೋಟ್ ಪತ್ತೆ


ಖುಷಿ ಖುಷಿಯಿಂದಲೇ ಜೀವನ ನಡೆಸುತ್ತಿದ್ದ ದಂಪತಿ ಆತ್ಮಹತ್ಯೆಗೆ ಶರಣಾಗಿರುವುದು ಅಕ್ಕಪಕ್ಕದ ಮನೆಯವರಿಗೆ ಆಘಾತವನ್ನುಂಟು ಮಾಡಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರ ಶವಗಳನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮನೆಯಲ್ಲಿ ಶೋಧ ನಡೆಸಿದಾಗ ಡೇತ್‍ನೋಟ್‍ ಪತ್ತೆಯಾಗಿದೆ. ಇದರಲ್ಲಿ ಪತಿಗೆ ಗಂಟಲಿನಲ್ಲಿ ಕೊನೆ ಹಂತದ ಕ್ಯಾನ್ಸರ್‌ ಇದೆ ಎಂದು ಪತ್ನಿ ಬರೆದಿದ್ದಾರೆ. ನಮಗೆ ಬೇರೆ ದಿಕ್ಕು ಕಾಣುತ್ತಿಲ್ಲ, ಹೀಗಾಗಿ ನಾವು ಆತ್ಮಹತ್ಯೆ ನಿರ್ಧಾರ ಮಾಡಿರುವುದಾಗಿ ಡೇತ್‍ನೋಟ್‍ನಲ್ಲಿ ಬರೆಯಲಾಗಿದೆ.


ಇದನ್ನೂ ಓದಿ: Maruti Alto: ಗ್ರಾಹಕರ ನೆಚ್ಚಿನ ಮಾರುತಿ ಆಲ್ಟೊ ಇದೀಗ ಹೊಸ ಶೈಲಿಯಲ್ಲಿ ಬಿಡುಗಡೆ  


ಮಾಹಿತಿ ಪ್ರಕಾರ ಅರುಣ್ ಸಿಂಗ್ ಅವರು ನೋಯ್ಡಾ ಸೆಕ್ಟರ್ 62ರ ಲೆನಾಲಿಸ್ ಗೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದರು. ಪತ್ನಿ ಶಶಿಕಲಾ ಅವರೊಂದಿಗೆ ಸೆಕ್ಟರ್ -22ರಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇಬ್ಬರಿಗೂ ಮಕ್ಕಳು ಇರಲಿಲ್ಲ. ಕೆಲ ದಿನಗಳ ಹಿಂದೆ ಅರುಣ್‌ಗೆ ಗಂಟಲು ನೋವು ಕಾಣಿಸಿಕೊಂಡಿದ್ದು ಪರೀಕ್ಷೆ ವೇಳೆ ಪತ್ತೆಯಾಗಿದೆ ಎಂದು ಎಡಿಸಿಪಿ ರಣವಿಜಯ್ ಹೇಳಿದ್ದಾರೆ. ಹಲವು ದಿನಗಳಿಂದ ಗಂಟಲು ನೋವಿನ ತೊಂದರೆ ಅನುಭವಿಸಿದ ಅವರು ಪರೀಕ್ಷೆಗೆ ಒಳಗಾದರು. ಏಪ್ರಿಲ್ 25ರಂದು ಅರುಣ್ ಸಿಂಗ್ ಅವರ ವರದಿಯಲ್ಲಿ ಕ್ಯಾನ್ಸರ್ ಕೊನೆ ಹಂತದಲ್ಲಿರುವುದು ದೃಢವಾಗಿತ್ತು. ಇದಾದ ನಂತರ ಪತಿ-ಪತ್ನಿ ತುಂಬಾ ದುಃಖಿತರಾಗಿದ್ದರು. ನಂತರ ಇಬ್ಬರೂ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.