Viral Video: ಬೃಹತ್ ಬಂಡೆಕಲ್ಲು ಅಪ್ಪಳಿಸಿ ಬೈಕ್ ಸವಾರ ಸಾವು, ಭಯಾನಕ ವಿಡಿಯೋ ಮೊಬೈಲ್‍ನಲ್ಲಿ ಸೆರೆ

ಸೋಷಿಯಲ್ ಮೀಡಿಯಾದಲ್ಲಿ ಅಪಘಾತದ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಪ್ರತಿದಿನವೂ ಇಂತಹ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಸದ್ಯ ಇಂತಹದ್ದೇ ಅಪಘಾತದ ದೃಶ್ಯವೊಂದು ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿನ ದೃಶ್ಯ ಭಯಾನಕವಾಗಿದ್ದು, ಮನುಷ್ಯನಿಗೆ ಸಾವು ಯಾವುದೇ ರೂಪದಲ್ಲಿ ಬರಬಹುದು ಅನ್ನೋದಕ್ಕೆ ಸ್ಪಷ್ಟ ನಿರ್ದಶನವಾಗಿದೆ.

Written by - Puttaraj K Alur | Last Updated : May 1, 2022, 09:55 AM IST
  • ಬೈಕ್ ಸವಾರಿ ವೇಳೆಯೇ ಬೆಟ್ಟದಿಂದ ಉರುಳಿಬಂದ ಬೃಹತ್ ಬಂಡೆ ಕಲ್ಲು
  • ಬೃಹತ್ ಬಂಡೆ ಕಲ್ಲು ಅಪ್ಪಳಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವು
  • ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಭಯಾನಕ ವಿಡಿಯೋ
Viral Video: ಬೃಹತ್ ಬಂಡೆಕಲ್ಲು ಅಪ್ಪಳಿಸಿ ಬೈಕ್ ಸವಾರ ಸಾವು, ಭಯಾನಕ ವಿಡಿಯೋ ಮೊಬೈಲ್‍ನಲ್ಲಿ ಸೆರೆ title=
ಬಂಡೆ ಕಲ್ಲು ಅಪ್ಪಳಿಸಿ ಬೈಕ್ ಸವಾರ ಸಾವು

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಅಪಘಾತದ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಪ್ರತಿದಿನವೂ ಇಂತಹ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಸದ್ಯ ಇಂತಹದ್ದೇ ಅಪಘಾತದ ದೃಶ್ಯವೊಂದು ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿನ ದೃಶ್ಯ ಭಯಾನಕವಾಗಿದ್ದು, ಮನುಷ್ಯನಿಗೆ ಸಾವು ಯಾವುದೇ ರೂಪದಲ್ಲಿ ಬರಬಹುದು ಅನ್ನೋದಕ್ಕೆ ಸ್ಪಷ್ಟ ನಿರ್ದಶನವಾಗಿದೆ.

ಬೈಕ್ ಸವಾರಿ ವೇಳೆಯೇ ಅಪ್ಪಳಿಸಿದ ಬಂಡೆಕಲ್ಲು!

ಈ ಭಯಾನಕ ಅಪಘಾತ ಸಂಭವಿಸಿದ್ದು, ಕೇರಳದ ತಾಮರಸ್ಸೆರಿಯಲ್ಲಿ. ಏಪ್ರಿಲ್ 16 ರಂದು ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸದ್ಯ ವೈರಲ್ ಆಗಿರುವ ಈ ವಿಡಿಯೋದಲ್ಲಿ ಬೆಟ್ಟದಿಂದ ಆವೃತ್ತವಾದ ಪ್ರದೇಶದ ಸುಂದರ ರಸ್ತೆಯಲ್ಲಿ ಬೈಕ್ ಸವಾರರು ಸಾಗುತ್ತಿರುತ್ತಾರೆ. ಬೆಟ್ಟದ ಮಧ್ಯೆದ ರಸ್ತೆಯಲ್ಲಿ ಎರಡೂ ಕಡೆ ವಾಹನಗಳು ಹೋಗುತ್ತಿರುವುದನ್ನು ಕಾಣಬಹುದು. ಈ ಸುಂದರ ತಾಣವನ್ನು ಬೈಕರ್ ಒಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.  ಒಂದು ಬೈಕ್‍ನಲ್ಲಿ ಇಬ್ಬರು ಸವಾರರು ತೆರಳುತ್ತಿರುತ್ತಾರೆ.

ಇದನ್ನೂ ಓದಿ: Adenovirus: ಮಕ್ಕಳಲ್ಲಿ ಹರಡುವ ಈ ಅಪಾಯಕಾರಿ ವೈರಸ್ ಬಗ್ಗೆ ಇರಲಿ ಎಚ್ಚರ

ಬೈಕ್ ಸವಾರ ಸಾವು, ಹಿಂಬದಿ ಸವಾರನಿಗೆ ಗಾಯ

ಬೈಕ್ ಹೀಗೆ ಹೋಗುತ್ತಿದ್ದಾಗಲೇ ಬೃಹತ್ ಬಂಡೆಕಲ್ಲೊಂದು ಬೆಟ್ಟದಿಂದ ಉರುಳಿಬಂದು ಆ ಬೈಕ್ ಸವಾರರಿಗೆ ಅಪ್ಪಳಿಸಿದೆ. ಅರೆಕ್ಷಣದಲ್ಲಿ ಬೈಕ್ ಸವಾರರಿಗೆ ಅಪ್ಪಳಿಸಿದ ಬಂಡೆಕಲ್ಲಿನ ದೃಶ್ಯ ನೋಡಿ ಇನ್ನೊಂದು ಬೈಕ್‍ನಲ್ಲಿ ಸವಾರರು ಶಾಕ್ ಆಗಿದ್ದಾರೆ. ಅತ್ಯಂತ ವೇಗವಾಗಿ ಕೆಳಗುರುಳಿ ಬಂದ ಬಂಡೆಕಲ್ಲು ಬೈಕ್‍ ಜೊತೆಗೆ ಸವಾರರನ್ನು ಬೆಟ್ಟದ ಕೆಳಗೆ ಎಳೆದೊಯ್ದಿದೆ. ಬಂಡೆ ಕಲ್ಲು ಅಪ್ಪಳಿಸಿದ ಪರಿಣಾಮ 20 ವರ್ಷದ ಅಭಿನವ್ ಎಂಬ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಹಿಂಬದಿಯ ಸವಾರ ಅನಿಶ್ ಎಂಬಾತ ಗಂಭೀರ ಗಾಯಗೊಂಡು ಬದುಕುಳಿದಿದ್ದಾನೆ.

ಈ ವಿಡಿಯೋ ನೋಡಿದ ಪ್ರತಿಯೊಬ್ಬರಿಗೂ ಶಾಕ್ ಆಗಿದೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಈ ದೃಶ್ಯವನ್ನು ಕಂಡು ನೆಟ್ಟಿಜನ್‍ಗಳು ಮರುಕ ವ್ಯಕ್ತಪಡಿಸಿದ್ದಾರೆ. ಮನಷ್ಯಗೆ ಸಾವು ಯಾರ ರೂಪದಲ್ಲಿ ಬರುತ್ತದೆ ಅನ್ನೋದಕ್ಕೆ ಇದು ತಾಜಾ ಉದಾಹರಣೆ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ವಿಶ್ವದ ಅತ್ಯಂತ ಹಿರಿಯ ಮಹಿಳೆ ನಿಧನ!: ಎಷ್ಟು ವಯಸ್ಸಾಗಿತ್ತು ಗೊತ್ತಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News