ಮುಂಬೈ: ಡ್ರಗ್ಸ್ ಖರೀದಿಸಲು ಹಣ ಹೊಂದಿಸಲು ಹೆತ್ತ ಮಕ್ಕಳನ್ನು ಮಾರಾಟ ಮಾಡಿದ ಆರೋಪದಲ್ಲಿ ದಂಪತಿ ಸೇರಿದಂತೆ ಮೂವರನ್ನು ಮುಂಬೈ ಕ್ರೈಂ ಬ್ರಾಂಚ್ ಬಂಧಿಸಿದೆ. ಆರೋಪಿಗಳಿಂದ ಒಂದು ತಿಂಗಳ ಹೆಣ್ಣು ಮಗುವನ್ನು ರಕ್ಷಿಸಿದ್ದು, ಎರಡನೇ ಎರಡು ವರ್ಷದ ಗಂಡು ಮಗುವಿಗಾಗಿ ಹುಡುಕಾಟ ನಡೆಯುತ್ತಿದೆ.


COMMERCIAL BREAK
SCROLL TO CONTINUE READING

ಪ್ರಕರಣಕ್ಕೆ ಸಂಬಂಧಿಸಿ ಪೋಷಕರಾದ ಶಬ್ಬೀರ್ ಮತ್ತು ಸಾನಿಯಾ ಖಾನ್ ಸೇರಿದಂತೆ ಶಕೀಲ್ ಮಕ್ರಾನಿ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾರಾಟದಿಂದ ಕಮಿಷನ್ ಪಡೆದ ಆರೋಪಿ ಉಷಾ ರಾಥೋಡ್ ಅವರನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.


ಇದನ್ನೂ ಓದಿ: Viral Video: ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡಲು ಹೋದನಿಗೆ ಏನಾಯ್ತು ಗೊತ್ತಾ? ಭಯಾನಕ ವಿಡಿಯೋ


ಮಾದಕ ವ್ಯಸನಿಗಳಾದ ದಂಪತಿ ಅಂಧೇರಿಯಲ್ಲಿ ತಮ್ಮ ಸ್ವಂತ ಇಬ್ಬರು ಮಕ್ಕಳನ್ನು ಮಾರಾಟ ಮಾಡಿ ಹಣ ಪಡೆದಿದ್ದರು. ಈ ಕುರಿತು ದಂಪತಿ ಕುಟುಂಬಕ್ಕೆ ಮಾಹಿತಿ ತಿಳಿದ ತಕ್ಷಣ ಘಟನೆ ಬೆಳಕಿಗೆ ಬಂದಿದೆ. ಆರೋಪಿ ದಂಪತಿಗಳು ಗಂಡು ಮಗುವನ್ನು ಅರವತ್ತು ಸಾವಿರ ರೂಪಾಯಿಗೆ ಮತ್ತು ಒಂದು ತಿಂಗಳ ಹೆಣ್ಣು ಮಗುವನ್ನು ಹದಿನಾಲ್ಕು ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ ಎಂದು ಮುಂಬೈ ಅಪರಾಧ ವಿಭಾಗದ ದಯಾ ನಾಯಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಶಬ್ಬೀರ್ ಖಾನ್ ಮತ್ತು ಈತನ ಪತ್ನಿ ಸಾನಿಯಾ ಮಾದಕ ವ್ಯಸನಿಗಳಾಗಿದ್ದರು. ಡ್ರಗ್ಸ್‌ ತೆಗೆದುಕೊಳ್ಳಲು ಹಣವಿಲ್ಲದಾಗ, ಅದೇ ಸಮಯದಲ್ಲಿ ಈ ದಂಪತಿಗೆ ಉಷಾ ರಾಥೋಡ್ ಸಂಪರ್ಕಕ್ಕೆ ಬಂದರು. ಅದರಂತೆ ತಮ್ಮ ಮಗನನ್ನು 60,000 ರೂ. ಮಾರಾಟ ಮಾಡಿದ್ದಾರೆ. ಮಗುವನ್ನು ಪಡೆದ ವ್ಯಕ್ತಿಯ ಗುರುತು ಸಿಕ್ಕಿಲ್ಲ. ಅಲ್ಲದೆ, ಬಾಲಕಿಯನ್ನು ಆರೋಪಿ ಶಕೀಲ್ ಮಕ್ರಾನಿಗೆ 14,000ಕ್ಕೆ ಮಾರಾಟ ಮಾಡಿದ್ದಾರೆ ಎಂದು ಅಪರಾಧ ವಿಭಾಗದ ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: ಬೃಹತ್ ಹೆಬ್ಬಾವನ್ನೇ ಹಿಡಿದು ಆಟವಾಡಿದ ಮಹಿಳೆ..! ವಿಡಿಯೋ ನೋಡಿ ಜನ ಶಾಕ್‌


ಆರೋಪಿ ಶಬ್ಬೀರ್‌ನ ಸಹೋದರಿ ರುಬಿನಾ ಖಾನ್‌ಗೆ ಈ ವಿಷಯ ತಿಳಿದಾಗ ಆಘಾತಕ್ಕೊಳಗಾಗಿದ್ದಾರೆ. ತಕ್ಷಣ ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಘಟನೆಯನ್ನು ತಿಳಿಸಿದ್ದಾಳೆ. ಸಹೋದರ ಮತ್ತು ಅತ್ತಿಗೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ರುಬಿನಾ ಅವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.