ಬೃಹತ್ ಹೆಬ್ಬಾವನ್ನೇ ಹಿಡಿದು ಆಟವಾಡಿದ ಮಹಿಳೆ..! ವಿಡಿಯೋ ನೋಡಿ ಜನ ಶಾಕ್‌

Python viral video : ಸಾಮಾನ್ಯವಾಗಿ ವೈರಲ್ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸುವುದರ ಜೊತೆಗೆ ಮನರಂಜನೆಯನ್ನು ನೀಡುತ್ತವೆ. ಕೆಲವು ವಿಡಿಯೋಗಳು ಶಿಕ್ಷಣವನ್ನು ನೀಡಿದ್ರೆ ಕೆಲವು ಬದುಕಿನ ಪಾಠ ಕಲಿಸುತ್ತವೆ. ಹಾಗಯೇ ಇನ್ನೂ ಕೆಲವು ಅಡ್ಡದಾರಿಗೆ ಎಳೆಯುತ್ತವೆ. ಸರಿ ತಪ್ಪು ಗ್ರಹಿಸುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು. ಸಧ್ಯ ದೈರ್ಯವಂತೆ ಮಹಿಳೆಯೊಬ್ಬರ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ಹೈಪ್‌ ಕ್ರಿಯೇಟ್‌ ಮಾಡಿದೆ. 

Written by - Krishna N K | Last Updated : Nov 25, 2023, 02:24 PM IST
  • ವೈರಲ್ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸುತ್ತವೆ.
  • ಕೆಲವು ವಿಡಿಯೋಗಳು ಶಿಕ್ಷಣವನ್ನು ನೀಡಿದ್ರೆ ಕೆಲವು ಬದುಕಿನ ಪಾಠ ಕಲಿಸುತ್ತವೆ.
  • ದೈರ್ಯವಂತೆ ಮಹಿಳೆಯೊಬ್ಬರ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ಹೈಪ್‌ ಕ್ರಿಯೇಟ್‌ ಮಾಡಿದೆ.
ಬೃಹತ್ ಹೆಬ್ಬಾವನ್ನೇ ಹಿಡಿದು ಆಟವಾಡಿದ ಮಹಿಳೆ..! ವಿಡಿಯೋ ನೋಡಿ ಜನ ಶಾಕ್‌ title=

Women hold python viral video : ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮನುಷ್ಯರ ವಿಡಿಯೋಗಳಿಗಿಂತ ಪ್ರಾಣಿಗಳ ವಿಡಿಯೋಗಳು ಗಮನಸೆಳೆಯುತ್ತವೆ. ಅವುಗಳ ತುಂಟಾಟ, ಬೇಟೆ, ದಾಳಿ ಹೀಗೆ ಅವುಗಳ ನಡುವಳಿಕೆಯ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಇದೀಗ ಇಂತಹುದೇ ಒಂದು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಗಮನಸೆಳೆಯುತ್ತಿದೆ.

ಹೌದು... ಹೆಬ್ಬಾವು ಕಂಡ್ರೆ ಯಾರಿಗೆ ಭಯವಿಲ್ಲ ಹೇಳಿ. ದೈತ್ಯ ಹೆಬ್ಬಾವು ಒಮ್ಮೆ ದಾಳಿ ಮಾಡಿ ಸುತ್ತಾಕಿಕೊಂಡರೆ ಅದರ ಬಾಹುಬಲದಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವನ್ನು. ಅದು ಸುತ್ತಿಕೊಳ್ಳುವ ಪ್ರಾಣಿ ಅಥವಾ ಮನುಷ್ಯನ ಎಲುಬುಗಳು ಮುರಿದು ಪುಡಿ ಪುಡಿಯಾಗುತ್ತವೆ. ಅಷ್ಟು ಭಯಾನಕ ಈ ಹೆಬ್ಬಾವು.

ಇದನ್ನೂ ಓದಿ: ನಿಮ್ಮ ಬುದ್ದಿ ಶಕ್ತಿಗೆ ನಮ್ಮ ಚಾಲೆಂಜ್: ಈ ಬಾಳೆ ಹಣ್ಣುಗಳ ಮಧ್ಯ ಹಾವು ಅಡಗಿದೆ..! ಅದು ಎಲ್ಲಿದೆ..?

ಆದ್ರೆ ಅಂತಹ ದೈತ್ಯ ಹೆಬ್ಬಾವನ್ನೇ ಮಹಿಳೆಯೊಬ್ಬರು ಬರಿ ಕೈಯಲ್ಲಿ ಹಿಡಿದು ಅಟವಾಡಿರುವು ವಿಡಿಯೋ ಒಂದು ಸೋಷಿಯ್‌ ಮೀಡಿಯಾದಲ್ಲಿ ಗಮನಸೆಳೆಯುತ್ತಿದೆ. @shital_kasar_official_ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊ ಕ್ಲಿಪ್, ಮಹಿಳೆಯ ಧೈರ್ಯಕ್ಕೆ ಸಾಕ್ಷಿಯಾಗಿದೆ. 

ಈ ವಿಡಿಯೋಗೆ 3,000 ಕ್ಕೂ ಹೆಚ್ಚು ಲೈಕ್‌ಗಳನ್ನು ಬಂದಿವೆ. ಜೀವ ಭಯವನ್ನು ಲೆಕ್ಕಿಸದೇ ಹೆಬ್ಬಾವನ್ನು ಸಾಕುಪ್ರಾಣಿಯಂತೆ ಆಟವಾಡಿಸುತ್ತಿರುವ ಧೃಶ್ಯ ವಿಡಿಯೋದಲ್ಲಿದೆ. ವಿಡಿಯೋ ನೋಡಿದ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಧೈರ್ಯಶಾಲಿ ಮಹಿಳೆ ಅಂತ ಕೆಲವೊಂದಿಷ್ಟು ಜನ ಹೇಳಿದ್ರೆ, ಇನ್ನೂ ಕೆಲವರು, ಹುಚ್ಚಾಟ ಸರಿಯಲ್ಲ ಅಂತ ಬುದ್ದಿವಾದ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News