ಮನೆಯ ಕಿಟಕಿ ಬಾಗಿಲು ತೆರೆದಿಡಿ, ಸ್ವಚ್ಛ ಗಾಳಿ ಬರುತ್ತಿದ್ದರೆ ಕರೋನಾ ಅಪಾಯ ಇಲ್ಲ
ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ, ಸರ್ಕಾರವು ಸರಳ ಎಡ್ವೈಸರಿ ಜಾರಿ ಮಾಡಿದೆ. ಇದರಲ್ಲಿ, ಕರೋನಾ ವೈರಸ್ ನ ಏರೋಸೆಲ್ ಗಳು ಗಾಳಿಯಲ್ಲಿ 10 ಮೀಟರ್ ವರೆಗೆ ತೇಲುತ್ತವೆ ಎಂದು ಹೇಳಿದೆ.
ನವದೆಹಲಿ : ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ, ಸರ್ಕಾರವು ಸರಳ ಎಡ್ವೈಸರಿ ಜಾರಿ ಮಾಡಿದೆ. ಇದರಲ್ಲಿ, ಕರೋನಾ ವೈರಸ್ ನ ಏರೋಸೆಲ್ ಗಳು ಗಾಳಿಯಲ್ಲಿ 10 ಮೀಟರ್ ವರೆಗೆ ತೇಲುತ್ತವೆ ಎಂದು ಹೇಳಿದೆ. ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ವಿಜಯ್ ರಾಘವನ್ (Vijay Raghavan) ಕಚೇರಿ ಗುರುವಾರ ಅಡ್ವೈಸರಿ ಜಾರಿ ಮಾಡಿದೆ. ಕೋವಿಡ್ -19 (Covid-19) ನಿಂದ ಬಳಲುತ್ತಿರುವ ವ್ಯಕ್ತಿಯ ಸೀನಿದಾಗ ಬಹೊರಹೊಮ್ಮುವಾಗ ಡ್ರಾಪ್ ಲೆಟ್ ಗಳು, ಎರಡು ಮೀಟರ್ ವ್ಯಾಪ್ಯಿಯೊಳಗೆ ಬೀಳುತ್ತವೆ. ಆದರೆ ಅದರಿಂದ ಹೊರಹೊಮ್ಮುವ ಏರೋಸಾಸೆಲ್ ಗಳು 10 ಮೀಟರ್‌ಗಳಷ್ಟು ದೂರದಲ್ಲಿ ಇರಬಹುದು ಎಂದು ಅಡ್ವೈಸರಿಯಲ್ಲಿ ಹೇಳಲಾಗಿದೆ.
ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ತನ್ನ 'ಈಜಿ ಟು ಫಾಲೋ " ಅಡ್ವೈಸರಿಯಲ್ಲಿ ಸೋಂಕು ಹರಡುವುದನ್ನು ನಿಲ್ಲಿಸಿ, ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಿ, SARS-CoV-2 ವೈರಸ್ ಹರಡುವುದನ್ನು ತಡೆಯಲು ಮಾಸ್ಕ್ (Mask) ಧರಿಸಿ, ಸಾಮಾಜಿಕ ಅಂತರ (Social distancing) ಕಾಪಾಡಿ ಮತ್ತು ನೈರ್ಮಲ್ಯದತ್ತ ಗಮನಹರಿಸುವಂತೆ ಹೇಳಿದೆ. ಅಲ್ಲದೆ, ಮುಕ್ತ ವಾತಾವರಣವನ್ನು ಬಳಸುವಂತೆ ಹೇಳಿದೆ.
ಇದನ್ನೂ ಓದಿ : ವಾರಣಾಸಿಯ ವೈದ್ಯರೊಂದಿಗೆ ಇಂದು ಪ್ರಧಾನಿ ಮೋದಿ ಸಂವಾದ
ಅಡ್ವೈಸರಿಯ ಮುಖ್ಯಾಂಶಗಳು :
- ಕೋವಿಡ್ -19 (COVID-19) ವೈರಸ್ ಹರಡುವುದನ್ನು ಕಡಿಮೆ ಮಾಡುವಲ್ಲಿ ಸ್ವಚ್ಛ ಗಾಳಿ ಮತ್ತು ತೆರೆದ ವಾತಾವರಣ ಪ್ರಮುಖ ಪಾತ್ರ ವಹಿಸುತ್ತದೆ. ಮುಕ್ತ ವಾತಾವರಣದಲ್ಲಿ ಸೋಂಕಿತ ವ್ಯಕ್ತಿಯಿಂದ ಇನ್ನೊಬ್ಬರಿಗೆ ಸೋಂಕು ಹರಡುವ ಅಪಾಯವೂ ಕಡಿಮೆ.
- ಸೀನುವ ಸಂದರ್ಭದಲ್ಲಿ ವೈರಸ್ (Virus) ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಸೀನುವಾಗ ಹೊರಬರುವ ಡ್ರಾಪ್ ಲೆಟ್ ನೆಲದ ಮೇಲೆ ಬೀಳುತ್ತವೆ. ಆದರೆ ಅದರ ಸಣ್ಣ ಕಣಗಳು ಗಾಳಿಯಲ್ಲಿ ಬಹಳ ದೂರದವರೆಗೆ ಹೋಗುತ್ತದೆ.
ಇದನ್ನೂ ಓದಿ : ಎರಡನೇ ಕೊರೊನಾ ಅಲೆಯಲ್ಲಿ 300ಕ್ಕೂ ಅಧಿಕ ವೈದ್ಯರ ಸಾವು
- ಗಾಳಿಯ ಪ್ರಸರಣವಿಲ್ಲದ ಸ್ಥಳಗಳಲ್ಲಿ, ಸೋಂಕಿತ ಹನಿಗಳು ಕೇಂದ್ರೀಕೃತವಾಗಿರುತ್ತವೆ ಮತ್ತು ಇದು ಆ ಪ್ರದೇಶದ ಜನರಲ್ಲಿ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.
- ಸೋಂಕಿತ ವ್ಯಕ್ತಿಯ ಮೂಗಿನಿಂದ ಹೊರಬರುವ ಹನಿಗಳು (Droplets) ಎರಡು ಮೀಟರ್ ಪ್ರದೇಶದಲ್ಲಿ ಬೀಳಬಹುದು ಮತ್ತು ಹೆಚ್ಚು ಸಣ್ಣ ಹನಿಗಳು ಗಾಳಿಯ ಮೂಲಕ ಹತ್ತು ಮೀಟರ್ ವರೆಗೆ ಹೋಗಬಹುದು.
- ಹಿಂದಿನ ಪ್ರೋಟೋಕಾಲ್ ಪ್ರಕಾರ, ಸೋಂಕನ್ನು ತಡೆಗಟ್ಟಲು ಆರು ಅಡಿಗಳಷ್ಟು ಅಂತರವನ್ನು ಕಾಪಾಡುವುದು ಅಗತ್ಯ ಎಂದು ಹೇಳಲಾಗಿತ್ತು. ಆದರೆ ಯಾರ ಸಂಪರ್ಕಕ್ಕೂ ಬಾರದೇ ಹೋದರೂ ಸೋಂಕಿಗೆ ಒಳಗಾಗಿರುವ ಬಗ್ಗೆ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ (Social media) ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇವರುಗಳು ಇದ್ದ ಸ್ಥಳಗಳಲ್ಲಿ ಸ್ವಚ್ಛ ಗಾಳಿ ಬರುತ್ತಿದ್ದರೆ ಸೋಂಕಿನಿಂದ ರಕ್ಷಣೆಯಾಗಿರುತ್ತಿತ್ತು ಎನ್ನಲಾಗಿದೆ.
- ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ತೆರೆದರೆ ಮತ್ತು ಎಕ್ಸಾಸ್ಟಿಂಗ್ ಫ್ಯಾನ್ ಹಾಕಿದರೆ ಯಾವ ರೀತಿ ಕೆಟ್ಟ ವಾಸನೆಗಳು ಕಡಿಮೆಯಾಗುತ್ತದೆಯೋ ಅದೇ ರೀತಿ, ಹೊರಗಿನ ಸ್ವಚ್ಛ ಗಾಳಿ ಬರುತ್ತಿದ್ದರೆ ವೈರಸ್ ಗಳ ಸಂಖ್ಯೆ ಕಡಿಮೆಯಾಗುತ್ತದೆ.
ಇದನ್ನೂ ಓದಿ : 'Black Fungus' ನ್ನು ಸಾಂಕ್ರಾಮಿಕ ಕಾಯ್ದೆ ಅಡಿ ತರಲು ರಾಜ್ಯಗಳಿಗೆ ಕೇಂದ್ರ ಸೂಚನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.