Covid-19 Self-Testing Kit CoviSelf : ಮನೆಯಲ್ಲಿ ಮಾಡಿಕೊಳ್ಳಿ ಬರೀ 250 ರೂ.ಗೆ ಕೊರೋನಾ ಟೆಸ್ಟ್!
ಈ ಆರ್ಎಟಿ ಕಿಟ್ಗಳ ಬಳಕೆಯು ಮೊಬೈಲ್ ಆ್ಯಪ್ ಮೂಲಕ ಕೆಲಸ ಮಾಡಲಿದೆ, ಈ ಪರೀಕ್ಷೆಯನ್ನು ಯಾರು ಮತ್ತು ಹೇಗೆ ಮಾಡಬೇಕೆಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ವಿವರವಾದ ನಿಯಮಗಳನ್ನು ಜಾರಿಗೊಳಿಸಿದೆ
ನವದೆಹಲಿ : ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹಿನ್ನೆಲೆಯಲ್ಲಿ ಕೊರೋನಾ ಟೆಸ್ಟ್ ನಡೆಸುವ ಲ್ಯಾಬರೇಟರಿ ಗಳ ಮೇಲೂ ಸಾಕಷ್ಟು ಒತ್ತಡವಿದೆ. ಇದನ್ನು ತಪ್ಪಿಸಲು ಇದೀಗ ಮನೆಯಲ್ಲೇ ಕೊರೋನಾ ಟೆಸ್ಟ್ ನಡೆಸುವ ರಾಪಿಡ್ ಆಯಂಟಿಜನ್ ಟೆಸ್ಟ್ (RAT)ಕಿಟ್ಗಳ ಬಳಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಶೀಘ್ರವಾಗಿ ರಿಸಲ್ಟ್ ನೀಡುವ ಈ ಟೆಸ್ಟ್ನ ಬಳಕೆಯಿಂದ ಕೊರೋನಾ ರೋಗಿಗಳು ಸಕಾಲಿಕ ಚಿಕಿತ್ಸೆ ನೀಡಲು ಸಹಾಯವಾಗಲಿದೆ ಎನ್ನಲಾಗಿದೆ.
ಈ ಆರ್ಎಟಿ ಕಿಟ್ಗಳ ಬಳಕೆಯು ಮೊಬೈಲ್ ಆ್ಯಪ್ ಮೂಲಕ ಕೆಲಸ ಮಾಡಲಿದೆ, ಈ ಪರೀಕ್ಷೆಯನ್ನು ಯಾರು ಮತ್ತು ಹೇಗೆ ಮಾಡಬೇಕೆಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR) ವಿವರವಾದ ನಿಯಮಗಳನ್ನು ಜಾರಿಗೊಳಿಸಿದೆ. ಕೇವಲ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿರುವವರು ಮತ್ತು ಲ್ಯಾಬ್ ಟೆಸ್ಟ್ನಲ್ಲಿ ರಿಪೋರ್ಟ್ ಪಾಸಿಟೀವ್ ಬಂದಿರುವವರ ಸಂಪರ್ಕಕ್ಕೆ ಒಳಗಾಗಿರುವವರು ಈ ಹೋಮ್ ಟೆಸ್ಟ್ ಅನ್ನು ಮಾಡಿಕೊಳ್ಳಬೇಕು. ಯಾರು ಬೇಕಾದರೂ ಈ ಟೆಸ್ಟ್ ಮಾಡಿಕೊಳ್ಳಬಾರದು ಎಂದು ಐಸಿಎಂಆರ್ ತಿಳಿಸಿದೆ.
ಇದನ್ನೂ ಓದಿ : ಈ ಬ್ಯಾಂಕಿನ ಗ್ರಾಹಕರಿಗೆ ಸಿಹಿಸುದ್ದಿ; Doorstep Banking ದರ ಇಳಿಸಿದ ಬ್ಯಾಂಕ್
ಪುಣೆಯ ಮೈಲ್ಯಾಬ್ ಡಿಸ್ಕವರಿ ಸಲ್ಯೂಷನ್ಸ್ ಲಿಮಿಟೆಡ್ ಕಂಪೆನಿ ತಯಾರಿಸಿರುವ ಕೋವಿಸೆಲ್ಫ್(CoviSelf) ಟಿಎಂ (ಪ್ಯಾಥೋಕ್ಯಾಚ್) ಕೋವಿಡ್-19 ಒಟಿಸಿ ಆಯಂಟಿಜನ್ ಎಲ್ಎಫ್ ಡಿವೈಸ್ ಎಂಬ ಉಪಕರಣವನ್ನು ಈ ಹೋಂ ಟೆಸ್ಟ್ಗಾಗಿ ಐಸಿಎಂಆರ್ ಅನುಮೋದಿಸಿದೆ. ಈ ಟೆಸ್ಟ್ ಕಿಟ್ನ ಬೆಲೆ ಕೇವಲ 250 ರೂಪಾಯಿ ಎನ್ನಲಾಗಿದೆ.
ಇದನ್ನೂ ಓದಿ : White Fungus: ಬ್ಲಾಕ್ ಫಂಗಸ್ ಬಳಿಕ ವೈಟ್ ಫಂಗಸ್, ಅದು ದೇಹದ ಮೇಲೆ ಹೇಗೆ ದಾಳಿ ಮಾಡುತ್ತೆ ಗೊತ್ತಾ
ಇದನ್ನು ಬಳಸಿ ಮನೆಯಲ್ಲೇ ಪರೀಕ್ಷೆ ಒಳಪಡಲಿಚ್ಛಿಸುವವರು, ಗೂಗಲ್ ಪ್ಲೇ ಸ್ಟೋರ್(Google Play Store) ಮತ್ತು ಆ್ಯಪಲ್ ಸ್ಟೋರ್ಗಳಲ್ಲಿ ಲಭ್ಯವಿರುವ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿರುವ ನೀಡಿರುವ ಮೂಗಿನ ದ್ರವ ಪಡೆದು ಪರೀಕ್ಷೆ ಮಾಡಿಕೊಳ್ಳಬೇಕು. ಪಾಸಿಟೀವ್ ಅಥವಾ ನೆಗೆಟೀವ್ ರಿಸಲ್ಟ್ ಬಂದ ಮೇಲೆ ಟೆಸ್ಟ್ ಸ್ಟ್ರಿಪ್ನ ಫೋಟೋವನ್ನು ಅದೇ ಮೊಬೈಲ್ ಫೋನಿನಲ್ಲಿ ತೆಗೆಯಬೇಕು. ಇದರಿಂದ ಮುಂದಿನ ಕ್ರಮಕ್ಕಾಗಿ ವ್ಯಕ್ತಿಯ ಡೇಟಾ ಐಸಿಎಂಆರ್ನ ಕೇಂದ್ರೀಯ ಕೋವಿಡ್-19 ಟೆಸ್ಟಿಂಗ್ ಪೋರ್ಟಲ್ನಲ್ಲಿ ಸಂಗ್ರಹವಾಗುತ್ತದೆ.
ಇದನ್ನೂ ಓದಿ : face book ಡಾಟಾ ಲೀಕ್ ಆಗುವುದನ್ನು ತಡೆಯಲು ಈ setting ಇಟ್ಟುಕೊಳ್ಳಿ..
ಈ ಟೆಸ್ಟ್ ನಲ್ಲಿ ರಿಸಲ್ಟ್ ಪಾಸಿಟಿವ್ ಬಂದರೆ ಅವರನ್ನು ಆರ್ಟಿಪಿಸಿಆರ್ ಟೆಸ್ಟ್(RT-PCR Test)ನಲ್ಲಿ ಪಾಸಿಟಿವ್ ಬಂದವರಂತೆಯೇ ಪರಿಗಣಿಸಬೇಕು. ಮತ್ತೆ ಪರೀಕ್ಷೆ ಮಾಡುವ ಅಗತ್ಯವಿಲ್ಲ ಎಂದು ಐಸಿಎಂಆರ್ ತಿಳಿಸಿದೆ.
ಇದನ್ನೂ ಓದಿ : Heavy Rainfall : ರಾಷ್ಟ್ರರಾಜಧಾನಿಗೆ ತಟ್ಟಿದ 'ತೌಕ್ತೆ ಸೈಕ್ಲೋನ್' ಬಿಸಿ : ದೆಹಲಿಯಲ್ಲಿ ಭಾರೀ ಮಳೆ..!
ಒಂದು ವೇಳೆ ಗುಣಲಕ್ಷಣಗಳು ಕಂಡು ಬಂದರೆ ಆರ್ಎಟಿ(RAT)ಯಲ್ಲಿ ನೆಗೆಟೀವ್ ಬಂದರೆ ತಕ್ಷಣ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಬೇಕು. ಏಕೆಂದರೆ ಕೆಲವೊಮ್ಮೆ ವೈರಲ್ ಲೋಡ್ ಕಡಿಮೆ ಇದ್ದಲ್ಲಿ ಆರ್ಎಟಿಯಲ್ಲಿ ಪತ್ತೆಯಾಗುವುದಿಲ್ಲ ಎಂದು ತಿಳಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.