ಈ ಬ್ಯಾಂಕಿನ ಗ್ರಾಹಕರಿಗೆ ಸಿಹಿಸುದ್ದಿ; Doorstep Banking ದರ ಇಳಿಸಿದ ಬ್ಯಾಂಕ್

ಈಗ ಪಿಎನ್‌ಬಿ ಗ್ರಾಹಕರು ಡೋರ್‌ಸ್ಟೆಪ್ ಬ್ಯಾಂಕಿಂಗ್  ಮೂಲಕ ನಗದು ತರಿಸಿಕೊಳ್ಳಲು ಬ್ಯಾಂಕಿಗೆ ಕೇವಲ 50 ರೂಪಾಯಿಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ.   

Written by - Ranjitha R K | Last Updated : May 20, 2021, 01:31 PM IST
  • ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸುತ್ತಿರುವ ಬ್ಯಾಂಕ್
  • ಡೋರ್ ಸ್ಟೆಪ್ಪಿಂಗ್ ಬ್ಯಾಂಕ್ ಶುಲ್ಕ ಕಡಿಮೆಗೊಳಿಸಿದ ಪಿಎನ್‌ಬಿ
  • ಡೋರ್‌ಸ್ಟೆಪ್ ಬ್ಯಾಂಕಿಂಗ್ ಸೇವೆಗೆ ನೋಂದಾಯಿಸುವುದು ಹೇಗೆ ತಿಳಿಯಿರಿ
ಈ ಬ್ಯಾಂಕಿನ ಗ್ರಾಹಕರಿಗೆ ಸಿಹಿಸುದ್ದಿ; Doorstep Banking ದರ ಇಳಿಸಿದ ಬ್ಯಾಂಕ್ title=
ಡೋರ್ ಸ್ಟೆಪ್ಪಿಂಗ್ ಬ್ಯಾಂಕ್ ಶುಲ್ಕ ಕಡಿಮೆಗೊಳಿಸಿದ ಪಿಎನ್‌ಬಿ (file photo)

ನವದೆಹಲಿ : PNB Doorstep Banking : ಕರೋನಾ ಕಾಲದಲ್ಲಿ ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ  ಬ್ಯಾಂಕುಗಳು ಕುಳಿತಲ್ಲಿಗೇ (Door step banking) ಅನೇಕ ಸೇವೆಗಳನ್ನು ಒದಗಿಸುತ್ತಿದೆ. ಆದರೆ ಈ ಸೇವೆಗೆ ಸಣ್ಣ ಶುಲ್ಕವನ್ನು ಬ್ಯಾಂಕ್ (Bank) ವಿಧಿಸುತ್ತದೆ. ಈ ಮಧ್ಯೆ,  ಪಂಜಾಬ್ ನ್ಯಾಷನಲ್ ಬ್ಯಾಂಕಿನ ಗ್ರಾಹಕರಿಗೊಂದು ಸಿಹಿ ಸುದ್ದಿ ನೀಡಿದೆ. ಪಿಎನ್‌ಬಿ ತನ್ನ ಲಕ್ಷಾಂತರ ಗ್ರಾಹಕರಿಗೆ ಡೋರ್‌ಸ್ಟೆಪ್ ಬ್ಯಾಂಕಿಂಗ್ ಶುಲ್ಕವನ್ನು ಕಡಿಮೆ ಮಾಡಿದೆ.

ಡೋರ್ ಸ್ಟೆಪ್ಪಿಂಗ್ ಬ್ಯಾಂಕ್ ಶುಲ್ಕ ಕಡಿಮೆಗೊಳಿಸಿದ ಪಿಎನ್‌ಬಿ :
ಈಗ ಪಿಎನ್‌ಬಿ ಗ್ರಾಹಕರು ಡೋರ್‌ಸ್ಟೆಪ್ ಬ್ಯಾಂಕಿಂಗ್ (Doorstep Banking) ಮೂಲಕ ನಗದು ತರಿಸಿಕೊಳ್ಳಲು ಬ್ಯಾಂಕಿಗೆ ಕೇವಲ 50 ರೂಪಾಯಿಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ. ಶುಲ್ಕ ಕಡಿತದ ಬಗ್ಗೆ ಬ್ಯಾಂಕ್ ಟ್ವೀಟ್ (Tweet) ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ : Gold -Silver Rate : ಇಂದಿನ ಚಿನ್ನ ಬೆಳ್ಳಿ ಬೆಲೆ : ದೆಹಲಿ, ಚೆನ್ನೈ, ಬೆಂಗಳೂರು, ಮುಂಬೈನಲ್ಲಿ ಚಿನ್ನದ ದರ!

ಮನೆಗೇ ಕ್ಯಾಶ್ ತರಿಸಿಕೊಳ್ಳಬಹುದು : 
ನೀವು ಮನೆಯಿಂದ ಹೊರ ಬರುವುದು ಸಾಧ್ಯವಾಗದೇ ಹೋಗಿ, ನಿಮಗೆ ಹಣದ ಅವಶ್ಯಕತೆಯಿದ್ದಲ್ಲಿ ನಿಮ್ಮ ಮನೆಗೇ ನಗದನ್ನು ತರಿಸಿಕೊಳ್ಳಬಹುದು. ಬ್ಯಾಂಕ್ ಈ ಸೌಲಭ್ಯವನ್ನು ಗ್ರಾಹಕರಿಗೆ (Customers) ನೀಡುತ್ತಿದೆ. ಬ್ಯಾಂಕ್ ಉದ್ಯೋಗಿ ಗ್ರಾಹಕರ ಮನೆಗೆ ಬಂದು ನಗದನ್ನು ತಲುಪಿಸುತ್ತಾರೆ. ಆದರೆ ಇಲ್ಲಿ ನಗದಿನ ಕನಿಷ್ಟ ಮಿತಿ ಒಂದು ಸಾವಿರ ಮತ್ತು ಗರಿಷ್ಟ ಮಿತಿ 10 ಸಾವಿರ ರೂಪಾಯಿಗಳಾಗಿರಬೇಕು. ಈ ಹಣವನ್ನು AePS  (Aadhaar Enabled Payment System)  ಅಥವಾ ಡೆಬಿಟ್ ಕಾರ್ಡ್ ಮೂಲಕ ಪಡೆಯಬಹುದು.

ಡೋರ್‌ಸ್ಟೆಪ್ ಬ್ಯಾಂಕಿಂಗ್ ಸೇವೆಗೆ ನೋಂದಾಯಿಸುವುದು ಹೇಗೆ ?:
ನೀವು ಸಹ ಪಿಎನ್‌ಬಿಯ (PNB) ಡೋರ್-ಸ್ಟೆಪ್ ಬ್ಯಾಂಕಿಂಗ್ ನ ಲಾಭ ಪಡೆಯಲು ಬಯಸುವುದಾದರೆ, ಮೊದಲು ನೋಂದಾಯಿಸಿಕೊಳ್ಳಬೇಕಾಗುತ್ತದೆ.  ಆದರೆ ನೆನಪಿಡಿ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕಾದರೆ ನಿಮ್ಮ ಖಾತೆ ಸಂಖ್ಯೆಯೊಂದಿಗೆ ನಿಮ್ಮ ಮೊಬೈಲ್ ನಂಬರ್ ಅನ್ನು ಲಿಂಕ್ ಮಾಡಬೇಕಾಗುತ್ತದೆ. 

1. ನೋಂದಾಯಿಸಿಕೊಳ್ಳಲು ಟೋಲ್-ಫ್ರೀ ಸಂಖ್ಯೆ 1800-10-37-188 ಅಥವಾ 1800-12-13-721 ಗೆ ಕರೆ ಮಾಡಿ. 
2. ಲ್ಯಾಪ್‌ಟಾಪ್‌ನಲ್ಲಿ www.psbdsb.in ಗೆ ಭೇಟಿ ನೀಡಿ ಕೂಡಾ ನೋಂದಾಯಿಸಿಕೊಳ್ಳಬಹುದು
3. ಮೊಬೈಲ್‌ನಲ್ಲಿ DSB ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೂಲಕ ಕೂಡಾ ನೋಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ : PM-Kisan ಯೋಜನೆಯ 'ಬ್ಯಾಲೆನ್ಸ್ ಚೆಕ್' ಮಾಡೋದು ಹೇಗೆ? ಇಲ್ಲಿದೆ ನೋಡಿ

ಮೊಬೈಲ್ ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ ಮತ್ತು ಬ್ಯಾಂಕ್ ಡಿಟೇಲ್ಸ್ ಅನ್ನು ಆಯ್ಕೆ ಮಾಡಿ. ಈಗ ಪರಿಶೀಲನೆಗಾಗಿ ಓಟಿಪಿ (OTP) ಬರುತ್ತದೆ. ಅದನ್ನು ಹಾಕಿ. ಪರಿಶೀಲನೆ ಪ್ರಕ್ರಿಯೆ ಪೂರ್ತಿಯಾದ ನಂತರ,  ಬ್ಯಾಂಕ್ ಹೆಸರು, ಖಾತೆ ಸಂಖ್ಯೆ, ಖಾತೆದಾರರ ಹೆಸರು, ಅಕೌಂಟ್ ಟೈಪ್, ಶಾಖೆಯ ಹೆಸರು ಕಾಣಿಸುತ್ತದೆ.

ಡೋರ್‌ಸ್ಟೆಪ್ ಬ್ಯಾಂಕಿಂಗ್‌ನಲ್ಲಿ ಈ ಸೇವೆಗಳು  ಕೂಡಾ ಲಭ್ಯವಿರುತ್ತವೆ :
ನೀವು ಬ್ಯಾಂಕಿನಿಂದ ಹಣವನ್ನು ತರಿಸಬಹುದು, ಹಣವನ್ನು ಠೇವಣಿ ಮಾಡಬಹುದು. ನಾವು ಚೆಕ್ ಪಿಕ್ ಅಪ್ ಮಾಡಿಸಬಹುದು.  ಫಾರ್ಮ್ 15 ಹೆಚ್ ಸಲ್ಲಿಸಬಹುದು. ಡ್ರಾಫ್ಟ್ ಕೂಡಾ ಸಲ್ಲಿಸಬಹುದು. ಇನ್ನು ಜೀವನ ಪ್ರಮಾಣಪತ್ರಕ್ಕಾಗಿಯೂ ಎಲ್ಲಿಯೂ ಹೋಗಬೇಕಾಗಿಲ್ಲ. ನೀವು ಮನೆಯಲ್ಲಿಯೇ ಕೆವೈಸಿ (KYC) ದಾಖಲೆಗಳನ್ನು ಸಹ ಪಡೆಯಬಹುದು.

ಇದನ್ನೂ ಓದಿ :  SBI Debit Card PIN: ಕುಳಿತಲ್ಲೇ ಜನರೇಟ್ ಮಾಡಬಹುದು ಎಸ್ ಬಿಐ ಡೆಬಿಟ್ ಕಾರ್ಡ್ ಪಿನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News