ನವದೆಹಲಿ : ಕಳೆದ 24 ಗಂಟೆಗಳಲ್ಲಿ 3.5 ಲಕ್ಷಕ್ಕೂ ಹೆಚ್ಚು ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗುವ ಮೂಲಕ ಭಾರತ 'ವಿಶ್ವ ದಾಖಲೆ' ಬರೆದಿದೆ. 


COMMERCIAL BREAK
SCROLL TO CONTINUE READING

ಜಗತ್ತಿನಲ್ಲಿ ಒಂದೇ ದಿನ 3.5 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾದ ಮೊದಲ ದೇಶ ಭಾರತ(India) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವರ್ಲ್ಡ್ ಒಮೇಟರ್ಸ್ ಇಂದು ಪ್ರಕಟಿಸಿದೆ.


ಇದನ್ನೂ ಓದಿ : ಹೀಗೆ ಮಾಡಿ ನೋಡಿ, ಮೊಬೈಲಿನಲ್ಲಿ ನೆಟ್ ಸ್ಪೀಡ್ ಹೆಚ್ಚಾಗುತ್ತದೆ


ವರ್ಲ್ಡ್ ಒಮೇಟರ್ಸ್ ವೆಬ್‌ಸೈಟ್‌ನ(Worldometers) ಪ್ರಕಾರ, ಸಧ್ಯ ದೇಶದಲ್ಲಿ ಕೊರೊನಾವೈರಸ್ ಎರಡನೇ ಅಲೆ ರುದ್ರ ನರ್ತನವಾಡುತ್ತಿದೆ. ಭಾನುವಾರ 3,54,531 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ. ಅಲ್ಲದೆ, ನಿನ್ನೆ 2,806 ಜನ ಕೋವಿಡ್-19 ನಿಂದ ಪ್ರಾಣ ಕಳೆದುಕೊಂಡಿದ್ದಾರೆ.


ಇದನ್ನೂ ಓದಿ : ವ್ಯಾಕ್ಸಿನ್ ಗಾಗಿ ಕೊವಿನ್ ಪೋರ್ಟಲಿನಲ್ಲಿ ಹೆಸರು ನೊಂದಾಯಿಸುವುದು ಹೇಗೆ..?


ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲ(Ministry of Health and Family Welfare)ಯವು ಇಂದು ಬೆಳಗ್ಗೆ 9: 30 ರ ಸುಮಾರಿಗೆ ಕೋವಿಡ್-19 ವರದಿಯ ಅಧಿಕೃತ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಈ ಮಾಹಿತಿ ಹೊರಬಿದ್ದಿದೆ.


ಇದನ್ನೂ ಓದಿ : Mobile ATM Van: ಕರೋನಾ ಯುಗದಲ್ಲಿ ಈ ಬ್ಯಾಂಕಿನ ಗ್ರಾಹಕರಿಗೆ ಮನೆ ಬಾಗಿಲಿಗೆ ತಲುಪಲಿದೆ ಮೊಬೈಲ್ ಎಟಿಎಂ


ದೇಶದಲ್ಲಿ ಒಟ್ಟು 1,73,06,300 ಕರೋನವೈರಸ್(Coronavirus) ಪ್ರಕರಣಗಳು ಏರಿಕೆ ಆಗಿವೆ. ಸಧ್ಯ 3.2 ಕೋಟಿಗೂ ಹೆಚ್ಚು ಸೋಂಕಿತರು ಭಾರತದಲ್ಲಿದ್ದಾರೆ. ಅಮೇರಿಕ ದ್ವಿತೀಯ ಸ್ಥಾನದಲ್ಲಿದೆ.


ಇದನ್ನೂ ಓದಿ : Oximeter Test : 'ಆಕ್ಸಿಮೀಟರ್' ಹೇಗೆ ಬಳಸುವುದರ ಕುರಿತು ಕೇಂದ್ರ ಸರ್ಕಾರದಿಂದ 8 ಗೈಡ್ ಲೈನ್ಸ್..! 


ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿ(Report)ಯಾಗುತ್ತಿವೆ. ಅಲ್ಲದೆ, 28,14,544 ಆಕ್ಟಿವ್ ಪ್ರಕರಣಗಳಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.