Mobile ATM Van: ಕರೋನಾ ಯುಗದಲ್ಲಿ ಈ ಬ್ಯಾಂಕಿನ ಗ್ರಾಹಕರಿಗೆ ಮನೆ ಬಾಗಿಲಿಗೆ ತಲುಪಲಿದೆ ಮೊಬೈಲ್ ಎಟಿಎಂ

ಲಾಕ್‌ಡೌನ್ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ಮೊಬೈಲ್ ಎಟಿಎಂ ವ್ಯಾನ್ ಅನ್ನು ಚಲಾಯಿಸಲು ಎಚ್‌ಡಿಎಫ್‌ಸಿ ಬ್ಯಾಂಕ್ ನಿರ್ಧರಿಸಿದೆ. ಇದರಿಂದಾಗಿ ಕಂಟೈನ್‌ಮೆಂಟ್ ವಲಯದಲ್ಲೂ ಜನರಿಗೆ ಹಣಕ್ಕಾಗಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

Written by - Yashaswini V | Last Updated : Apr 26, 2021, 07:35 AM IST
  • ಖಾಸಗಿ ಬ್ಯಾಂಕ್ 19 ನಗರಗಳಲ್ಲಿ ಮೊಬೈಲ್ ಎಟಿಎಂ ಸೌಲಭ್ಯವನ್ನು ಲಭ್ಯಗೊಳಿಸಿದೆ
  • ಮೊಬೈಲ್ ಎಟಿಎಂಗಳ ಸೌಲಭ್ಯದಿಂದಾಗಿ, ಸಾಮಾನ್ಯ ಜನರು ಹಣವನ್ನು ಹಿಂಪಡೆಯಲು ತಮ್ಮ ಪ್ರದೇಶದಿಂದ ಹೊರಗೆ ಹೋಗಬೇಕಾಗಿಲ್ಲ
  • ಮೊಬೈಲ್ ಎಟಿಎಂ ಬಳಸಿ ಗ್ರಾಹಕರು 15 ರೀತಿಯ ವಹಿವಾಟು ನಡೆಸಲು ಸಾಧ್ಯವಾಗುತ್ತದೆ
Mobile ATM Van: ಕರೋನಾ ಯುಗದಲ್ಲಿ ಈ ಬ್ಯಾಂಕಿನ ಗ್ರಾಹಕರಿಗೆ ಮನೆ ಬಾಗಿಲಿಗೆ ತಲುಪಲಿದೆ ಮೊಬೈಲ್ ಎಟಿಎಂ title=
Mobile ATM Van

ಮುಂಬೈ: ದೇಶಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳು ಮತ್ತು ದೇಶದ ವಿವಿಧ ಭಾಗಗಳಲ್ಲಿ ಹೇರಲಾಗಿರುವ ಲಾಕ್‌ಡೌನ್‌ನಂತಹ ನಿರ್ಬಂಧಗಳ ದೃಷ್ಟಿಯಿಂದ ಖಾಸಗಿ ವಲಯದ ಬ್ಯಾಂಕ್ ಎಚ್‌ಡಿಎಫ್‌ಸಿ (HDFC) 19 ನಗರಗಳಲ್ಲಿ ಮೊಬೈಲ್ ಎಟಿಎಂ ಸೌಲಭ್ಯವನ್ನು ಲಭ್ಯಗೊಳಿಸಿದೆ. 

ಮೊಬೈಲ್ ಎಟಿಎಂಗಳ (Mobile ATM) ಸೌಲಭ್ಯದಿಂದಾಗಿ, ಸಾಮಾನ್ಯ ಜನರು ಹಣವನ್ನು ಹಿಂಪಡೆಯಲು ತಮ್ಮ ಪ್ರದೇಶದಿಂದ ಹೊರಗೆ ಹೋಗಬೇಕಾಗಿಲ್ಲ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ. ಮೊಬೈಲ್ ಎಟಿಎಂ ಬಳಸಿ ಗ್ರಾಹಕರು 15 ರೀತಿಯ ವಹಿವಾಟು ನಡೆಸಲು ಸಾಧ್ಯವಾಗುತ್ತದೆ ಎಂದು ಎಚ್‌ಡಿಎಫ್‌ಸಿ (HDFC) ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ - ATMನಿಂದ ಹಣ ವಿತ್ ಡ್ರಾ ಮಾಡಿದಾಗ ಹರಿದ ನೋಟು ಸಿಕ್ಕಿದರೆ ಚಿಂತೆಬಿಟ್ಟು ಈ ಕೆಲಸ ಮಾಡಿ

ಈ ನಗರಗಳಲ್ಲಿ ಮೊಬೈಲ್ ಎಟಿಎಂ ಸೌಲಭ್ಯ ಲಭ್ಯವಿರುತ್ತದೆ:
ವಾಸ್ತವವಾಗಿ ಪ್ರತಿದಿನ ದಾಖಲೆ ಮಟ್ಟದಲ್ಲಿ ಹೆಚ್ಚಾಗುತ್ತಿರುವ ಕರೋನಾವೈರಸ್ (Coronavirus) ಹಿನ್ನಲೆಯಲ್ಲಿ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಾರೆ. ಆದರೆ ನಿತ್ಯದ ಜೀವನಕ್ಕೆ ಹಣ ಬಹಳ ಮುಖ್ಯ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ 19 ಪ್ರಮುಖ ನಗರಗಳಲ್ಲಿ ಎಟಿಎಂ ವ್ಯಾನ್ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಎಚ್‌ಡಿಎಫ್‌ಸಿ (HDFC) ಬ್ಯಾಂಕ್ ಹೇಳಿದೆ. ಇವುಗಳಲ್ಲಿ ಮುಂಬೈ (Mumbai), ಚೆನ್ನೈ (Chennai), ಹೈದರಾಬಾದ್, ಪುಣೆ (Pune), ಲಕ್ನೋ  (Lucknow), ದೆಹಲಿ  (Delhi), ಲುಧಿಯಾನ ಮುಂತಾದ 19 ನಗರಗಳು ಸೇರಿವೆ.

ಇದನ್ನೂ ಓದಿ - Debit-Credit ಕಾರ್ಡ್ ಇಲ್ಲದೆ ಎಟಿಎಂನಿಂದ ಹಣ ಹಿಂಪಡೆಯುವುದು ಹೇಗೆ?

ಕಂಟೈನ್‌ಮೆಂಟ್ ವಲಯದಲ್ಲಿ ಜನರು ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ:
ವಿಶೇಷವಾಗಿ ಬ್ಯಾಂಕಿನ ಈ ಸೌಲಭ್ಯವು ಕೋವಿಡ್‌ನಿಂದ ಹೆಚ್ಚು ಪ್ರಭಾವ ಬೀರಿರುವ ಸ್ಥಳಗಳಲ್ಲಿ ಲಭ್ಯವಿರುತ್ತದೆ. ಮೊಬೈಲ್ ಎಟಿಎಂಗಳ ಸೌಲಭ್ಯದಿಂದಾಗಿ, ಸಾಮಾನ್ಯ ಜನರು ಹಣವನ್ನು ಹಿಂಪಡೆಯಲು ತಮ್ಮ ಪ್ರದೇಶದಿಂದ ಹೊರಗೆ ಹೋಗಬೇಕಾಗಿಲ್ಲ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ತಿಳಿಸಿದೆ. ಕಂಟೈನ್‌ಮೆಂಟ್ ವಲಯದಲ್ಲಿ, ಜನರಿಗೆ ಹಣದ ಅಗತ್ಯವಿರುವಾಗ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಎಚ್‌ಡಿಎಫ್‌ಸಿ ಬ್ಯಾಂಕ್ (ಎಚ್‌ಡಿಎಫ್‌ಸಿ ಬ್ಯಾಂಕ್) ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News