Lockdown In India: ಕರೋನಾ ಸೋಂಕಿನ ಸರಪಳಿ ಮುರಿಯಲು ಕಟ್ಟುನಿಟ್ಟಾದ ಲಾಕ್‌ಡೌನ್ ಅಗತ್ಯ- ಕೇಂದ್ರಕ್ಕೆ ಕೋವಿಡ್ ಟಾಸ್ಕ್ ಫೋರ್ಸ್ ಪತ್ರ
Lockdown In India: ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯರು ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದಲ್ಲಿ ದೇಶದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.
Lockdown In India: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಕರೋನಾವೈರಸ್ ಸೋಂಕು ಹರಡುವುದನ್ನು ತಡೆಯಲು ದೇಶದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೆ ತರುವಂತೆ ಒತ್ತಾಯಿಸಿ ಕೋವಿಡ್ 19 ಕಾರ್ಯಪಡೆಯ ಸದಸ್ಯರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ದೇಶದಲ್ಲಿ ದಿನದಿಂದ ದಿನಕ್ಕೆ ಕರೋನಾ ಪರಿಸ್ಥಿತಿ ಹದಗೆಡುತ್ತಿದೆ. ನಿರಂತರವಾಗಿ ಸೋಂಕು ಹೆಚ್ಚಾಗುತ್ತಿರುವುದರ ಜೊತೆಗೆ ಸಾವಿನ ಸಂಖ್ಯೆಯೂ ದಾಖಲೆಯ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕರೋನಾ ಸೋಂಕಿನ ಸರಪಳಿಯನ್ನು ಮುರಿಯಲು ಹಾಗೂ ಎಲ್ಲದರ ಮೇಲೆ ನಿಯಂತ್ರಣ ಪಡೆಯಲು ಕಟ್ಟುನಿಟ್ಟಾದ ಲಾಕ್‌ಡೌನ್ ಅತ್ಯಗತ್ಯವಾಗಿದೆ ಎಂದು ಕೋವಿಡ್ ಟಾಸ್ಕ್ ಫೋರ್ಸ್ (Covid Task Force) ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದೆ. ಗಮನಾರ್ಹವಾಗಿ ಈ ಕಾರ್ಯಪಡೆಯಲ್ಲಿ ಏಮ್ಸ್ ಮತ್ತು ಐಸಿಎಂಆರ್ ನಂತಹ ಅನೇಕ ಪ್ರಮುಖ ಸಂಸ್ಥೆಗಳನ್ನು ಸೇರಿಸಲಾಗಿದೆ.
ಇದನ್ನೂ ಓದಿ - Lockdown: ಲಾಕ್‌ಡೌನ್ ನಿಂದ ಗಾಭರಿಗೊಂಡ ರಾಜ್ಯ ಜನತೆ : ದಿನಸಿ-ತರಕಾರಿ ಖರೀದಿಗೆ ಮುಗಿ ಬಿದ್ದ ಜನರು!
ತಜ್ಞರ ಪ್ರಕಾರ, ಕರೋನವೈರಸ್ ಮೇಲೆ ನಿಯಂತ್ರಣ ಪಡೆಯಲು ಸಂಪೂರ್ಣ ಲಾಕ್‌ಡೌನ್ ಅಗತ್ಯ. ಏಕೆಂದರೆ ಮನುಷ್ಯರಿಗೆ ವೈರಸ್ ಹರಡುವುದನ್ನು ತಡೆಯಬೇಕಾದರೆ, ರಾಜ್ಯಗಳಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಅನ್ನು ವಿಧಿಸಬೇಕು. ಕರೋನ ಪ್ರಕರಣಗಳನ್ನು ನಿಯಂತ್ರಿಸಲು ಇದು ಅನಿವಾರ್ಯ ಎಂದು
ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಡೀ ದೇಶಾದ್ಯಂತ ಎರಡು ವಾರಗಳವರೆಗೆ ಕಟ್ಟುನಿಟ್ಟಾದ ಲಾಕ್‌ಡೌನ್ (Lockdown) ಜಾರಿಗೆ ತಂದರೆ ಕರೋನಾ ಸೋಂಕಿತರ ಪ್ರಮಾಣವು ಕಡಿಮೆಯಾಗುವುದರ ಜೊತೆಗೆ ಮರಣ ಪ್ರಮಾಣವು ಕಡಿಮೆಯಾಗಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ - ಕೊರೊನಾ ಎರಡನೇ ಅಲೆ ತಡೆಯಲು ಆಕ್ರಮಣಕಾರಿ ಲಾಕ್ ಡೌನ್ ಅಗತ್ಯ -ಏಮ್ಸ್ ಮುಖ್ಯಸ್ಥ
ಗಮನಾರ್ಹವಾಗಿ ಲಸಿಕೆ ಕಾರ್ಯಕ್ರಮದ ಪರಿಚಯದೊಂದಿಗೆ ಜನರು ನಿರಾಳರಾದರು ಮತ್ತು ಕರೋನಾದ ನಿಯಮಗಳನ್ನು ನಿರ್ಲಕ್ಷಿಸಲು ಪ್ರಾರಂಭಿಸಿದರು, ನಂತರ ವೈರಸ್ ಹೆಚ್ಚು ವೇಗವಾಗಿ ಹರಡಲು ಪ್ರಾರಂಭಿಸಿತು ಎಂದು ಬೇಸರ ವ್ಯಕ್ತಪಡಿಸಿದ ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಮೊದಲಿಗೆ ದೇಶಾದ್ಯಂತ ಲಾಕ್‌ಡೌನ್ ಅನ್ನು ಶಿಫಾರಸು ಮಾಡಿದ್ದಾರೆ. ಕರೋನಾದ ಹೊಸ ಪ್ರಕರಣಗಳು ಪ್ರತಿದಿನ ಹೆಚ್ಚಾಗುತ್ತಲೇ ಇದೆ. ಇದು ಆರೋಗ್ಯ ಇಲಾಖೆಗೆ ಹೊರೆಯಾಗುತ್ತಿದೆ. ಕರೋನಾದ ಸರಪಳಿಯನ್ನು ಮುರಿಯಲು, ಆಕ್ರಮಣಕಾರಿ ನಿಲುವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.