Lockdown: ಲಾಕ್‌ಡೌನ್ ನಿಂದ ಗಾಭರಿಗೊಂಡ ರಾಜ್ಯ ಜನತೆ : ದಿನಸಿ-ತರಕಾರಿ ಖರೀದಿಗೆ ಮುಗಿ ಬಿದ್ದ ಜನರು! 

ಜನರು ತಮ್ಮ  ಮನೆ, ಊರಿಗೆ ಹೋಗಲು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಸಾಲು ಸಾಲು

Last Updated : Apr 27, 2021, 04:05 PM IST
  • ರಾಜ್ಯದಲ್ಲಿ ಕೋವಿಡ್ -19 ನಿಯಂತ್ರಿಸಲು ಕಠಿಣ ಲಾಕ್‌ಡೌನ್ ಜಾರಿಯಾಗಲು ಇನ್ನು ಕೆಲವೇ ಗಂಟೆಗಳು ಬಾಕಿ ಇದೆ.
  • ಜನರು ತಮ್ಮ ಮನೆ, ಊರಿಗೆ ಹೋಗಲು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಸಾಲು ಸಾಲು
  • ನಾಡಿನ ಜನತೆ ಇದರಿಂದ ಗಾಬರಿಗೊಂಡಿದ್ದಾರೆ.
Lockdown: ಲಾಕ್‌ಡೌನ್ ನಿಂದ ಗಾಭರಿಗೊಂಡ ರಾಜ್ಯ ಜನತೆ : ದಿನಸಿ-ತರಕಾರಿ ಖರೀದಿಗೆ ಮುಗಿ ಬಿದ್ದ ಜನರು!  title=

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ -19 ನಿಯಂತ್ರಿಸಲು ಕಠಿಣ ಲಾಕ್‌ಡೌನ್ ಜಾರಿಯಾಗಲು ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ಹಾಗಾಗಿ ಜನರು ತಮ್ಮ  ಮನೆ, ಊರಿಗೆ ಹೋಗಲು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಸಾಲು ಸಾಲು ನಿಂತಿದ್ದಾರೆ.  

ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನ ಹಿನ್ನೆಲೆಯಲ್ಲಿ ಸರ್ಕಾರ 14 ದಿನಗಳ ಲಾಕ್‌ಡೌನ್(Lockdown) ಘೋಷಿಸಿದೆ. ನಾಡಿನ ಜನತೆ ಇದರಿಂದ ಗಾಬರಿಗೊಂಡಿದ್ದಾರೆ. ರಾಜ್ಯದ ಎಲ್ಲಾ ಪ್ರಮುಖ ನಗರಗಳಲ್ಲಿನ ತರಕಾರಿ ಮಾರುಕಟ್ಟೆ ಮತ್ತು ಕಿರಾಣಿ ಅಂಗಡಿಗಳಲ್ಲಿ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಜನರು ಕೊರೋನಾ ಲೆಕ್ಕಿಸದೆ ಮುಗಿಬಿದ್ದಿದ್ದಾರೆ.

ಇದನ್ನೂ ಓದಿ : Total Lockdown: ರಾಜ್ಯದಲ್ಲಿ ಇಂದು ರಾತ್ರಿ 9 ರಿಂದ 'ಸಂಪೂರ್ಣ ಲಾಕ್‌ಡೌನ್' : ಯಾವುದುಕ್ಕೆಲ್ಲ ನಿರ್ಬಂಧವಿದೆ?

ಅಲ್ಲದೆ, ಗಂಟು ಮೂಟೆ ಹಿಡಿದುಕೊಂಡು ವಿದ್ಯಾರ್ಥಿಗಳು, ಕುಟುಂಬಸ್ಥರು ನಗರದ ಹೃದಯಭಾಗದಲ್ಲಿರುವ ಮೆಜೆಸ್ಟಿಕ್‌ ಕೆಎಸ್‌ಆರ್‌ಟಿಸಿ(KSRTC) ಬಸ್ ನಿಲ್ದಾಣದಲ್ಲಿ ಜಮಾಹಿಸಿದ್ದಾರೆ. ಈ ದೃಶ್ಯ ನೋಡಿದರೆ ಕಳೆದ ವರ್ಷ ಕೇಂದ್ರ ಸರ್ಕಾರ  ಘೋಷಿಸಿದ್ದ ಲಾಕ್‌ಡೌನ್ ಸಮಯದಲ್ಲಿ ಆದ ದೃಶ್ಯ ನೆನಪಾಗುತ್ತದೆ.

ಇದನ್ನೂ ಓದಿ : ಸಾಕಪ್ಪ ಸಾಕು ಬೆಂಗಳೂರು.! ಲಾಕ್ ಡೌನ್ ಗೆ ಹೆದರಿ ಊರಿಗೆ ದೌಡಾಯಿಸುತ್ತಿರುವ ಜನ

ಉತ್ಪಾದನೆ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ತೊಡಗಿರುವ ಕೆಲವು ಕಂಪನಿಗಳ ನೌಕರರನ್ನು ಕರೆದೊಯ್ಯಲು ಗುತ್ತಿಗೆ ಸೇವೆಗಳ ನಗರ ಬಸ್ಸು(Bus)ಗಳನ್ನು ಹೊರತುಪಡಿಸಿ ಯಾವುದೇ ಸಾರ್ವಜನಿಕ ಸಾರಿಗೆ ಸೇವೆಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಸರ್ಕಾರ ಹೇಳಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ : Karnataka Lockdown: ರಾಜ್ಯದಲ್ಲಿ ಲಾಕ್‌ಡೌನ್ : ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News