Covid-19 Vaccination To Corona Recovered Patients: Corona ಸೋಂಕಿನಿಂದ ಚೇತರಿಸಿಕೊಂಡವರಿಗೆ ಎಷ್ಟು ದಿನಗಳ ಬಳಿಕ ವ್ಯಾಕ್ಸಿನ್ ಸಿಗಲಿದೆ ಗೊತ್ತಾ?
Covid-19 Vaccination To Corona Recovered Patients - ಕೊರೊನಾ ಸೋಂಕಿಗೆ (Coronavirus) ಗುರಿಯಾಗಿ ಅದರಿಂದ ಚೇತರಿಸಿಕೊಂಡ ಜನರಿಗೆ 3 ತಿಂಗಳ ಬಳಿಕ ಲಸಿಕೆಯನ್ನು ಹಾಕಲಾಗುವುದು. ಇದಕ್ಕೂ ಮೊದಲು 6 ತಿಂಗಳುಗಳ ಬಳಿಕ ವ್ಯಾಕ್ಸಿನ್ ಹಾಕಲು ಶಿಫಾರಸು ಮಾಡಲಾಗಿತ್ತು.
ನವದೆಹಲಿ: Covid-19 Vaccination To Corona Recovered Patients - ಕೊರೊನಾ ಸೋಂಕಿಗೆ (Coronavirus) ಗುರಿಯಾಗಿ ಅದರಿಂದ ಚೇತರಿಸಿಕೊಂಡ ಜನರಿಗೆ 3 ತಿಂಗಳ ಬಳಿಕ ಲಸಿಕೆಯನ್ನು ಹಾಕಲಾಗುವುದು. ಇದಕ್ಕೂ ಮೊದಲು 6 ತಿಂಗಳುಗಳ ಬಳಿಕ ವ್ಯಾಕ್ಸಿನ್ ಹಾಕಲು ಶಿಫಾರಸು ಮಾಡಲಾಗಿತ್ತು. ಕೇಂದ್ರ ಆರೋಗ್ಯ ಸಚಿವಾಲಯ (Ministry Of Health And Family Welfare) ಕೊವಿಡ್-19 ಲಸಿಕಾಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ನ್ಯಾಷನಲ್ ಎಕ್ಸ್ಪರ್ಟ್ ಗ್ರೂಪ್ (NEGVAC) ನ ಶಿಫಾರಸುಗಳಿಗೆ ಅನುಮತಿ ನೀಡಿದೆ.
Corona ಬಳಿಕ ಮಹಾಮಾರಿ ಎಂದು ಘೋಷಿಸಲ್ಪಟ್ಟ Black Fungus, ಅಧಿಸೂಚನೆ ಜಾರಿಗೊಳಿಸಿದ ಸರ್ಕಾರ
ಇದರೊಂದಿಗೆ ತಜ್ಞರ ತಂಡ ಹಾಲುಣಿಸುವ ಮಹಿಳೆಯರಿಗೂ ಕೂಡ ಕೊವಿಡ್-19 (Covid-19) ಲಸಿಕೆಯನ್ನು ಹಾಕುವ ಶಿಫಾರಸು ಮಾಡಿದೆ . ಜೊತೆಗೆ ಲಸಿಕಾಕರಣ ನಡೆಸುವ ಮುನ್ನ ವ್ಯಾಕ್ಸಿನ್ ಪಡೆದುಕೊಳ್ಳುವವರಿಗೆ ರಾಪಿಡ್ ಆಂಟಿಜನ್ ಟೆಸ್ಟ್ ಮಾಡಿಸುವುದಕ್ಕೆ ಅನುಮತಿ ನೀಡಿಲ್ಲ.
ಇದನ್ನೂ ಓದಿ-Spain ನಲ್ಲಿ ಅಸ್ಟ್ರಾಜೆನಿಕಾ ಲಸಿಕೆಯ ಮೊದಲ ಡೋಸ್ ಪಡೆದವರಿಗೆ ಫೈಸರ್ ಲಸಿಕೆಯ ಎರಡನೇ ಪ್ರಮಾಣ!
ಸರ್ಕಾರದ ವತಿಯಿಂದ ಕೋವಿಶೀಲ್ಡ್ ಲಸಿಕೆಯ (Covishield) ಎರಡು ಪ್ರಮಾಣಗಳ ನಡುವಿನ ಅಂತರ ಹೆಚ್ಚಿಸಲಾದ ಒಂದು ವಾರದ ಒಳಗೆ ಈ ಹೊಸ ಬದಲಾವಣೆಗಳಾಗಿವೆ. ಮೂರುತಿಂಗಳಲ್ಲಿ ಎರಡನೇ ಬಾರಿಗೆ ಕೊವಿಶಿಲ್ದ್ ನ ಎರಡು ಪ್ರಮಾಣಗಳ ಅಂತರವನ್ನು ಹೆಚ್ಚಿಸಿದೆ. ಇದಕ್ಕೂ ಮೊದಲು ಮಾರ್ಚ್ ನಲ್ಲಿ ಕೊವಿಶೀಲ್ಡ್ ವ್ಯಾಕ್ಸಿನ್ ನ ಎರಡು ಡೋಸ್ ಗಳ ನಡುವಿನ 28 ದಿನಗಳ ಗ್ಯಾಪ್ ಅನ್ನು ಸರ್ಕಾರ 6 ವಾರಗಳವರೆಗೆ ಹೆಚ್ಚಿಸಿತ್ತು.
ಇದನ್ನೂ ಓದಿ-ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, 7ನೇ ವೇತನ ಆಯೋಗದ ಅಪ್ರೆಸಲ್ ಅವಧಿ ವಿಸ್ತರಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.