7th Pay Commission: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, 7ನೇ ವೇತನ ಆಯೋಗದ ಅಪ್ರೆಸಲ್ ಅವಧಿ ವಿಸ್ತರಣೆ

7th Pay Commission:ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಸಂತಸದ ಸುದ್ದಿಯೊಂದನ್ನು ಪ್ರಕಟಿಸಿದೆ.

Written by - Nitin Tabib | Last Updated : May 19, 2021, 02:17 PM IST
  • ಕೇಂದ್ರ ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ.
  • 7ನೇ ವೇತನ ಆಯೋಗದ ಅಪ್ರೆಸಲ್ ಅವಧಿ ವಿಸ್ತರಣೆ.
  • ಯಾರಿಗೆ ಆ ಅವಧಿ ವಿಸ್ತರಣೆಯ ಲಾಭ ಸಿಗಲಿದೆ ತಿಳಿದುಕೊಳ್ಳೋಣ ಬನ್ನಿ
7th Pay Commission: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, 7ನೇ ವೇತನ ಆಯೋಗದ ಅಪ್ರೆಸಲ್ ಅವಧಿ ವಿಸ್ತರಣೆ title=
7th Pay Commission (File Photo)

ನವದೆಹಲಿ: Central Government Employees APAR time line 2021: ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ದೊಡ್ಡ ಸಂತಸದ ಸುದ್ದಿಯೊಂದನ್ನು ಪ್ರಕಟಿಸಿದೆ. ಕೇಂದ್ರ ಸರ್ಕಾರ ಆರ್ಥಿಕ ವರ್ಷ 2020-21 ಗಾಗಿ SPARROW Portal ಮೂಲಕ CSS(ಕೇಂದ್ರ ಕಾರ್ಯದರ್ಶಿ ಸೇವೆ), CSSS(ಕೇಂದ್ರ ಸಚಿವಾಲಯದ ಸ್ಟೆನೋಗ್ರಾಫರ್ಸ್ ಸೇವೆ) ಮತ್ತು CSCS (ಕೇಂದ್ರ ಕಾರ್ಯದರ್ಶಿ ಕ್ಲೆರಿಕಲ್ ಸೇವೆ) ಕೇಡರ್ನ ಗುಂಪು ಎ, ಬಿ ಮತ್ತು ಸಿ ಅಧಿಕಾರಿಗಳಿಗೆ  ಅನುವಲ್ ಪರ್ಫಾರ್ಮೆನ್ಸ್  ಅಸೆಸ್ಮೆಂಟ್ ರಿಪೋರ್ಟ್ (APAR) ಟೈಮ್ ಲೈನ್ ಅನ್ನು ವಿಸ್ತರಿಸಿದೆ (APAR Timeline Extended).

ಈ ಕುರಿತು ಹೊರಡಿಸಲಾಗಿರುವ ಅಧಿಕೃತ ಹೇಳಿಕೆ ಪ್ರಕಾರ, ಡಿಪಾರ್ಟ್ಮೆಂಟ್ ಆಫ್ ಪರ್ಸನಲ್ ಅಂಡ್ ಟ್ರೇನಿಂಗ (DOPT), ಕೊರೊನಾ ಮಹಾಮಾರಿಯ (Corona Pandemic) ಹಿನ್ನೆಲೆ ಸೃಷ್ಟಿಯಾಗಿರುವ ವಿಪರೀತ ಸನ್ನಿವೇಶಗಳ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. DOPT ಹೊರಡಿಸಿರುವ ಆಫಿಸ್ ಮೆಮೊರೆಂಡಂ ಪ್ರಕಾರ, ವರ್ಷ 2020-21 ಕ್ಕಾಗಿ APAR ಪ್ರೋಸೆಸ್ ಅಡಿ ಸಂಪೂರ್ಣ ಪ್ರಕ್ರಿಯೆ ಅಂದರೆ, ಡಿಸ್ಟ್ರೀಬ್ಯೂಶನ್/ಆನ್ಲೈನ್ ಜನರೇಶನ್, ರೆಕಾರ್ಡಿಂಗ್ ಹಾಗೂ ಕಂಪ್ಲಿಶನ್ ಡೆಡ್ ಲೈನ್ ಅನ್ನು ವಿಸ್ತರಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ- 7th Pay Commission : ಕೇಂದ್ರ ಸರ್ಕಾರಿ ನೌಕರರ DA ಹೆಚ್ಚಳ ಮತ್ತಷ್ಟು ವಿಳಂಬ!

ಡಿಸೆಂಬರ್ 31ರವರೆಗೆ ಪೂರ್ಣಗೊಳ್ಳಲಿದೆ APAR ಪ್ರಕ್ರಿಯೆ  (APAR Process)
DOPT ಮೂಲಕ ಹೊರಡಿಸಲಾಗಿರುವ ಅಧಿಕೃತ ಮೆಮೊರೆಂಡಮ್ ಪ್ರಕಾರ ಸಂಪೂರ್ಣ APAR ಪ್ರೋಸೆಸ್ ಅನ್ನು ಡಿಸೆಂಬರ್ 31ರವರೆಗೆ ಪೂರ್ಣಗೊಳಿಸಲಾಗುವುದು ಹಾಗೂ ಬಳಿಕ ಅದನ್ನು ಫೈನಲ್ ರಿಕಾರ್ಡ್ ಗೆ ಪರಿಗಣಿಸಲಾಗುವುದು. ಒಂದು ವೇಳೆ ರಿಪೋರ್ಟಿಂಗ್ ಹಾಗೂ ರಿವ್ಯೂವಿಂಗ್ ಅಧಿಕಾರಿ, ಈ ಮೊದಲೇ ನಿರ್ಧರಿಸಲಾಗಿರುವ ಟೈಮ್ ಫ್ರೇಮ್ ನಲ್ಲಿ ತನ್ನ ಕಾಮೆಂಟ್ಸ್ ರಿಕಾರ್ಡ್ ಮಾಡದೆ ಹೋದಲ್ಲಿ ಮತ್ತು ಅಧಿಕಾರಿ ಸ್ಟೀಪ್ಯೂಲೆಟೆಡ್ ಟೈಮ್ ನಲ್ಲಿ ತನ್ನ ಸೆಲ್ಫ್ ಅಪ್ರೆಸಲ್ ಸಬ್ಮಿಟ್ ಮಾಡಿದ್ದರೆ, ಅವರ ಸೆಲ್ಫ್ ಅಸೆಸ್ಮೆಂಟ್ ಹಾಗೂ ಓವರ್ಸ್ ಆನ್ ರಿಕಾರ್ಡ್ ಆಧಾರದ ಮೀ ಅವರ ಅಸೆಸ್ಮೆಂಟ್ ನಡೆಸಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ- Salary Hike : ಈ ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿ ಶೇ. 20 ಹೆಚ್ಚಳ..!

ಶೇ.4 ರಷ್ಟು ಹೆಚ್ಚಳದ ಅಂದಾಜು
ಇತ್ತೀಚೆಗಷ್ಟೇ ಸರ್ಕಾರ ಗೂಡ್ಸ್ ಅಂಡ್ ಸರ್ವಿಸೆಸ್ ನ ಸರ್ಕಾರಿ ಖರೀದಿಗಾಗಿ ಇ-ಮಾರ್ಕೆಟ್  (GeM) ಪೋರ್ಟಲ್ ನ ಯುಟಿಲೈಸೆಶನ್ IAS ಹಾಗೂ IPS ಅಧಿಕಾರಿಗಳ ಅನ್ಯುವಲ್ ಪರ್ಫಾರ್ಮೆನ್ಸ್ ಅಪ್ರೆಸಲ್ (APAR)ನಲ್ಲಿ ಕಾಣಿಸಲಿದೆ ಎಂದಿತ್ತು. ಈ ಪೋರ್ಟಲ್ ಮೂಲಕ ಸರ್ಕಾರಿ ಸಚಿವಾಲಯ ಹಾಗೂ ವಿಭಾಗ ವಿಭಿನ್ನ ಗೂಡ್ಸ್ ಅಂಡ್ ಸರ್ವಿಸೆಸ್ ನ ಆನ್ಲೈನ್ ಸರ್ಕಾರಿ ಖರೀದಿ ಪ್ರಕ್ರಿಯೆ ನಡೆಸಲಾಗುತ್ತದೆ. ಕೇಂದ್ರ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ವೇತನ ಸಿಗುತ್ತದೆ ಹಾಗೂ ಪ್ರಸ್ತುತ ನೌಕರರು ತುಟ್ಟಿ ಭತ್ಯೆಗಾಗಿ ಕಾಯುತ್ತಿದ್ದಾರೆ. ಈ ಬಾರಿಯ ಕೇಂದ್ರ ಸರ್ಕಾರಿ ನೌಕರರ ಬೇಸಿಕ್ ವೇತನದಲ್ಲಿ ಶೇ.4 ಹೆಚ್ಚಳದ ಅಂದಾಜು ವ್ಯಕ್ತಪಡಿಸಲಾಗುತ್ತಿದೆ.

ಇದನ್ನೂ ಓದಿ-7th Pay Commission : ಕೇಂದ್ರ ಉದ್ಯೋಗಿಗಳಿಗೆ ಸಿಹಿ ಸುದ್ದಿ! 'Pay Fixation' ಗಡುವನ್ನು 3 ತಿಂಗಳವರೆಗೆ ವಿಸ್ತರಣೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News