ಕರ್ನಾಟಕ ಸೇರಿದಂತೆ ದೇಶದ 10 ರಾಜ್ಯಗಳಲ್ಲಿ 54 ಕ್ಷೇತ್ರಗಳಿಗೆ ಇಂದು ಉಪಚುನಾವಣೆ (By polls) ನಡೆಯುತ್ತಿದೆ.  ಎಲ್ಲಾ ಕ್ಷೇತ್ರಗಳಲ್ಲೂ ಬೆಳಿಗ್ಗೆ 7 ಗಂಟೆಗೆ ಮತದಾನ (polling) ಆರಂಭವಾಗಿದೆ. ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಲಿದೆ. 


COMMERCIAL BREAK
SCROLL TO CONTINUE READING

ಮಧ್ಯಪ್ರದೇಶದ 28 ಕ್ಷೇತ್ರಗಳಿಗೆ, ಗುಜರಾತ್ ನ 8, ಉತ್ತರಪ್ರದೇಶದ 7, ಕರ್ನಾಟಕ (Karnataka) , ಒಡಿಶಾ, ನಾಗಾಲ್ಯಾಂಡ್, ಜಾರ್ಖಾಂಡ್ ನಲ್ಲಿ ತಲಾ 2 ಕ್ಷೇತ್ರಗಳಿಗೆ, ಛತ್ತೀಸ್ ಗಡ, ತೆಲಂಗಾಣ ಮತ್ತು ಹರಿಯಾಣದ ತಲಾ ಒಂದು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. 


ಬಿಹಾರ ವಿಧಾನಸಭಾ ಚುನಾವಣೆ: ಖಗೇರಿಯಾದಲ್ಲಿ ಮತ ಚಲಾಯಿಸಿದ LJP ಅಧ್ಯಕ್ಷ ಚಿರಾಗ್ ಪಾಸ್ವಾನ್


ಈ ಪೈಕಿ ನಾಲ್ಕು ರಾಜ್ಯಗಳಲ್ಲಿ ಕರೋನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ, ಛತ್ತೀಸ್ ಗಡ, ನಾಗಾಲ್ಯಾಂಡ್, ಜಾರ್ಖಾಂಡ್ ನಲ್ಲಿ ಕರೋನಾ ಸೋಂಕಿತರಿಗೆ ಸಂಜೆ 5 ಗಂಟೆಯಿಂದ 6 ಗಂಟೆವರೆಗೆ ಮತದಾನ ನಡೆಸಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ವಿಶೇಷ ವ್ಯವಸ್ಥೆಗಳನ್ನ  ಏರ್ಪಡಿಸಲಾಗಿದೆ. 


ಶಿರಾ, ಆರ್ ಆರ್ ನಗರ ಉಪಚುನಾವಣೆ –ಎರಡೂ ಕ್ಷೇತ್ರಗಳಲ್ಲೂ ಬಿರುಸುನ ಮತದಾನ


ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಪ್ರಧಾನಿ ಮನವಿ: 
ಈ ಮಧ್ಯೆ ಉಪಚುನಾವಣೆಯ ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ (Narendra modi) ಜನತೆಯಲ್ಲಿ ಮನವಿ ಮಾಡಿದ್ದಾರೆ. ಹೆಚ್ಚು ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗಿಯಾಗಿ ಪ್ರಜಾಪ್ರಭುತ್ವವನ್ನು ಬಲಗೊಳಿಸುವಂತೆ ಮತದಾರರನ್ನು ಮೋದಿ ಕೋರಿದ್ದಾರೆ.