ಬಿಹಾರ ವಿಧಾನಸಭಾ ಚುನಾವಣೆ: ಖಗೇರಿಯಾದಲ್ಲಿ ಮತ ಚಲಾಯಿಸಿದ LJP ಅಧ್ಯಕ್ಷ ಚಿರಾಗ್ ಪಾಸ್ವಾನ್

94 ವಿಧಾನಸಭಾ ಕ್ಷೇತ್ರಗಳಲ್ಲಿ 1,463 ಅಭ್ಯರ್ಥಿಗಳಲ್ಲಿ ಸುಮಾರು 10 ಶೇಕಡಾ (146) ಮಹಿಳಾ ಅಭ್ಯರ್ಥಿಗಳಿದ್ದಾರೆ.  2.85 ಕೋಟಿ ಮತದಾರರಲ್ಲಿ, ಮಹಿಳೆಯರ ಪಾಲು 1.35 ಕೋಟಿ. ಮಹಾರಾಜ್ ಗಂಜ್ ಕ್ಷೇತ್ರದಲ್ಲಿ ಗರಿಷ್ಠ 27 ಅಭ್ಯರ್ಥಿಗಳು ಕಣದಲ್ಲಿದ್ದರೆ, ದಾರೌಲಿ (04) ಅತಿ ಕಡಿಮೆ ಅಭ್ಯರ್ಥಿಗಳನ್ನು ಹೊಂದಿದೆ.

Last Updated : Nov 3, 2020, 08:55 AM IST
  • 94 ವಿಧಾನಸಭಾ ಕ್ಷೇತ್ರಗಳಲ್ಲಿ 1,463 ಅಭ್ಯರ್ಥಿಗಳಲ್ಲಿ ಸುಮಾರು 10 ಶೇಕಡಾ (146) ಮಹಿಳಾ ಅಭ್ಯರ್ಥಿಗಳಿದ್ದಾರೆ.
  • 2.85 ಕೋಟಿ ಮತದಾರರಲ್ಲಿ, ಮಹಿಳೆಯರ ಪಾಲು 1.35 ಕೋಟಿ.
  • ಮಹಾರಾಜ್ ಗಂಜ್ ಕ್ಷೇತ್ರದಲ್ಲಿ ಗರಿಷ್ಠ 27 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆ: ಖಗೇರಿಯಾದಲ್ಲಿ ಮತ ಚಲಾಯಿಸಿದ LJP ಅಧ್ಯಕ್ಷ ಚಿರಾಗ್ ಪಾಸ್ವಾನ್

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ (Bihar assembly election) ಇಂದು ಎರಡನೇ ಹಂತದ ಮತದಾನ ಆರಂಭವಾಗಿದ್ದು 94 ವಿಧಾನಸಭಾ ಕ್ಷೇತ್ರಗಳಲ್ಲಿ 2.85 ಕೋಟಿ ಮತದಾರರು ಸುಮಾರು 1,500 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. 

2ನೇ ಹಂತದ ಬಿಹಾರ ಚುನಾವಣೆಗೆ ಬೆಳಿಗ್ಗೆ 7 ಗಂಟೆಯಿಂದ ಬಿರುಸಿನ ಮತದಾನ ಆರಂಭವಾಗಿದ್ದು ಎಲ್‌ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ (Chirag Paswan) ಖಗೇರಿಯಾದ ಮತದಾನ ಕೇಂದ್ರದಲ್ಲಿ ತಮ್ಮ ಮತ ಚಲಾಯಿಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಹಂತದಲ್ಲಿ ಜನರು ಹೊರಬಂದು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಟ್ವೀಟ್ ಮಾಡುವ ಮೂಲಕ ಕೋರಿದ್ದಾರೆ. ಮತದಾನದ ಸಮಯದಲ್ಲಿ ಜನರು Covid 19 ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಎರಡನೇ ಹಂತದ ಚುನಾವಣೆ ಎದುರಿಸುತ್ತಿರುವ 94 ವಿಧಾನಸಭಾ ಕ್ಷೇತ್ರಗಳಲ್ಲಿ 1,463 ಅಭ್ಯರ್ಥಿಗಳಲ್ಲಿ ಸುಮಾರು 10 ಶೇಕಡಾ (146) ಮಹಿಳಾ ಅಭ್ಯರ್ಥಿಗಳಿದ್ದಾರೆ. 2.85 ಕೋಟಿ ಮತದಾರರಲ್ಲಿ, ಮಹಿಳೆಯರ ಪಾಲು 1.35 ಕೋಟಿ. ಮಹಾರಾಜ್ ಗಂಜ್ ಕ್ಷೇತ್ರದಲ್ಲಿ ಗರಿಷ್ಠ 27 ಅಭ್ಯರ್ಥಿಗಳು ಕಣದಲ್ಲಿದ್ದರೆ, ದಾರೌಲಿ (04) ಅತಿ ಕಡಿಮೆ ಅಭ್ಯರ್ಥಿಗಳನ್ನು ಹೊಂದಿದೆ.

65 ವರ್ಷಕ್ಕೂ ಅಧಿಕ ವಯಸ್ಸಿನ ಕೊರೊನಾ ರೋಗಿಗಳಿಗೆ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ

17 ಜಿಲ್ಲೆಗಳಲ್ಲಿ ಹರಡಿರುವ ಈ 94 ವಿಧಾನಸಭಾ ಕ್ಷೇತ್ರಗಳಲ್ಲಿ ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ಆರ್‌ಜೆಡಿಯ ತೇಜಶ್ವಿ ಯಾದವ್ ಮತ್ತು ಅವರ ಹಿರಿಯ ಸಹೋದರ ತೇಜ್ ಪ್ರತಾಪ್ ಯಾದವ್ ಅವರ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಪ್ರತಿಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್  ರಘೋಪುರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.  ಇದು ಪಾರಂಪರಿಕವಾಗಿ ಆರ್‌ಜೆಡಿ ಭದ್ರಕೋಟೆಯೂ ಹೌದು. ತೇಜಸ್ವಿ ಯಾದವ್ ಅಣ್ಣ ತೇಜ್ ಪ್ರತಾಪ್ ಯಾದವ್ ಸಮಸ್ತಿಪುರದ ಹಸನ್ ಪುರ ವಿಧಾನಸಭಾ ಕ್ಷೇತ್ರದಿಂದ ಕಣದಲ್ಲಿದ್ದಾರೆ.

ಎರಡನೇ ಹಂತದಲ್ಲಿ ಆರ್‌ಜೆಡಿ (RJD) 94 ಸ್ಥಾನಗಳಲ್ಲಿ 56 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಅದರ ಮಿತ್ರಪಕ್ಷ ಕಾಂಗ್ರೆಸ್ 24 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇತ್ತೀಚೆಗೆ ಗ್ರ್ಯಾಂಡ್ ಅಲೈಯನ್ಸ್‌ಗೆ ಸೇರ್ಪಡೆಗೊಂಡ ಸಿಪಿಐ ಮತ್ತು ಸಿಪಿಐ (ಎಂ) ತಲಾ ನಾಲ್ಕು ಸ್ಥಾನಗಳ ವಿರುದ್ಧಲ್ಲಿ ಹೋರಾಡುತ್ತಿವೆ.

ಬಿಹಾರದಲ್ಲಿ ಸೀತಾ ಮಂದಿರ ನಿರ್ಮಿಸುತ್ತೇನೆ ಎಂದ ಚಿರಾಗ್ ಪಾಸ್ವಾನ್

ಎನ್‌ಡಿಎ ಮೈತ್ರಿಕೂಟದಲ್ಲಿ 46 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ,  43 ಸ್ಥಾನಗಳಲ್ಲಿ ಜೆಡಿಯು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದರೆ, ಎನ್‌ಡಿಎಯಲ್ಲಿ ಇತ್ತೀಚಿಗೆ ಪ್ರವೇಶ ಪಡೆದಿರುವ ಮುಖೇಶ್ ಸಾಹ್ನಿಯ ವಿಐಪಿ ಉಳಿದ ಐದು ಸ್ಥಾನಗಳಿಗೆ ಸ್ಪರ್ಧಿಸುತ್ತಿದೆ.

ಎಲ್‌ಜೆಪಿ 52 ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದು ಹಂತದಲ್ಲಿ ಪಕ್ಷವು ಒಬ್ಬ ತೃತೀಯ ಲಿಂಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

More Stories

Trending News