CSIR Society Meeting 2021: CSIR ಸಭೆಯಲ್ಲಿ PM Modi ನೀಡಿದ ಮುನ್ಸೂಚನೆಯ ಎಚ್ಚರಿಕೆ ಏನು?
CSIR Society Meeting 2021 - ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಸೊಸೈಟಿಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹವಾಮಾನ ಬದಲಾವಣೆಯು ಮುಂಬರುವ ದಿನಗಳಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂಬ ಮುನ್ನೆಚ್ಚರಿಕೆ ನೀಡಿದ್ದಾರೆ.
ನವದೆಹಲಿ: CSIR Society Meeting 2021 - ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಸೊಸೈಟಿ ಆಯೋಜಿಸಿರುವ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ. ಈ ವೇಳೆ ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿರುವ ಅವರು, ವಿಜ್ಞಾನ (Science) ಎಂದಿಗೂ ಕೂಡ ಬಿಕ್ಕಟ್ಟಿಗೆ ಪರಿಹಾರ ಸೂಚಿಸಿದೆ ಎಂದು ಹೇಳಿದ್ದಾರೆ.
RBI Credit Policy: 6ನೇ ಸಲವೂ ಬಡ್ಡಿದರದಲ್ಲಿ ಬದಲಾವಣೆ ಇಲ್ಲ
ದೇಶಕ್ಕೆ ಪ್ರತಿಭಾನ್ವಿತರನ್ನು ನೀಡಿದೆ CSIR: PM
"ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ದೇಶಕ್ಕೆ ಎಷ್ಟೊಂದು ಪ್ರತಿಭೆಗಳನ್ನು ನೀಡಿದೆ ಮತ್ತು ಎಷ್ಟೋ ವಿಜ್ಞಾನಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಶಾಂತಿ ಸ್ವರೂಪ್ ಭಟ್ನಾಗರ್ ಅವರಂತಹ ಮಹಾನ್ ವಿಜ್ಞಾನಿ ಈ ಸಂಸ್ಥೆಗೆ ನಾಯಕತ್ವ ವಹಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿ ಎಂದು ಪ್ರಧಾನಿ ಮೋದಿ" ಹೇಳಿದ್ದಾರೆ.
ಇದನ್ನೂ ಓದಿ-2021-22 Academic Year : ಜುಲೈ 1ರಿಂದ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭ!
'ಸ್ವಾವಲಂಭಿ ಹಾಗೂ ಸಬಲೀಕರಣಗೊಳ್ಳಲು ಬಯಸುತ್ತದೆ ಭಾರತ' (CSIR Meeting 2021 Latest News In Kannada)
"ಇಂದು ಭಾರತವು ಸುಸ್ಥಿರ ಅಭಿವೃದ್ಧಿ ಮತ್ತು ಶುದ್ಧ ಇಂಧನ ಕ್ಷೇತ್ರದಲ್ಲಿ ಜಗತ್ತಿಗೆ ದಾರಿ ತೋರಿಸುತ್ತಿದೆ. ಸಾಫ್ಟ್‌ವೇರ್‌ನಿಂದ ಹಿಡಿದು ಉಪಗ್ರಹದವರೆಗೆ ಭಾರತ ಇತರ ದೇಶಗಳ ಅಭಿವೃದ್ಧಿಯನ್ನು ಸಹ ವೇಗಗೊಲಿಸುತಿದೆ ಮತ್ತು ವಿಶ್ವದ ಅಭಿವೃದ್ಧಿಯಲ್ಲಿ ಪ್ರಮುಖ ಎಂಜಿನ್‌ನ ಪಾತ್ರವನ್ನು ನಿರ್ವಹಿಸುತಿದೆ. ಇಂದು, ಭಾರತವು ಸ್ವಾವಲಂಬಿಯಾಗಲು ಮತ್ತು ಕೃಷಿಯಿಂದ ಖಗೋಳಶಾಸ್ತ್ರದವರೆಗೆ, ಲಸಿಕೆಗಳಿಂದ ಹಿಡಿದು ವರ್ಚುವಲ್ ರಿಯಾಲಿಟಿವರೆಗೆ, ಜೈವಿಕ ತಂತ್ರಜ್ಞಾನದಿಂದ ಬ್ಯಾಟರಿ ತಂತ್ರಜ್ಞಾನದವರೆಗೆ ಪ್ರತಿಯೊಂದು ದಿಕ್ಕಿನಲ್ಲಿಯೂ ಸ್ವಾವಲಂಭಿಯಾಗಲು (Self Reliant India) ಹಾಗೂ ಸಬಲೀಕರಣಗೊಳ್ಳಲು ಬಯಸುತ್ತಿದೆ. ಕರೋನಾದ ಈ ಬಿಕ್ಕಟ್ಟು ವೇಗವನ್ನು ಸ್ವಲ್ಪ ನಿಧಾನಗೊಳಿಸಿರಬಹುದು, ಆದರೆ ಇಂದಿಗೂ ಕೂಡ 'ಸ್ವಾವಲಂಬಿ ಭಾರತ, ಬಲಶಾಲಿ ಭಾರತ' ನಮ್ಮ ಸಂಕಲ್ಪ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇದನ್ನೂ ಓದಿ-ದ್ವಿತೀಯ ಪಿಯುಸಿ ಪರೀಕ್ಷೆ ರದ್ದು : ಸಚಿವ ಸುರೇಶ್ ಕುಮಾರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ