RBI Credit Policy: 6ನೇ ಸಲವೂ ಬಡ್ಡಿದರದಲ್ಲಿ ಬದಲಾವಣೆ ಇಲ್ಲ, 2022ರ ವೇಳೆಗೆ ಶೇ. 9.5ರಷ್ಟು GDP ಬೆಳವಣಿಗೆಯ ಮುನ್ಸೂಚನೆ

ಆರ್ಥಿಕ ಪ್ರಗತಿಯ ಗತಿಯನ್ನು ಮರಳಿ ಹಳಿ ತರುವುದಕ್ಕೆ ಪೂರಕವಾದ ನೀತಿಗಳು ಬಹಳ ಅವಶ್ಯಕ. ದುರ್ಬಲ ಆರ್ಥಿಕ ವ್ಯವಸ್ಥೆಯಿಂದ 'ಬೇಡಿಕೆ' ಕುಸಿದಿದೆ. ಕಚ್ಚಾ ತೈಲಗಳ ಬೆಲೆ ದುಬಾರಿ ಆಗಿರುವುದರಿಂದ ದೇಶದಲ್ಲಿ ಬೆಲೆ ಏರಿಕೆಯ ಒತ್ತಡ ನಿರ್ಮಾಣವಾಗಿದೆ.

Written by - Yashaswini V | Last Updated : Jun 4, 2021, 12:35 PM IST
  • ಗ್ರಾಮಗಳು ಮತ್ತು ಸಣ್ಣ ನಗರಗಳಿಗೆ ದೊಡ್ಡ ಹೊಡೆತ ನೀಡಿರುವ ಕರೋನಾ ಎರಡನೇ ಅಲೆ
  • ದೇಶದ ಜಿಡಿಪಿ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿರುವ ಕರೋನಾ ಪರಿಸ್ಥಿತಿ
  • ರೆಪೊ ದರ, ರಿವರ್ಸ್ ರೆಪೊ ದರ, ನಗದು ಮೀಸಲು ಅನುಪಾತ ದರ ಕಡಿಮೆ ಮಾಡಲು RBI ನಿರ್ಧಾರ
RBI Credit Policy: 6ನೇ ಸಲವೂ ಬಡ್ಡಿದರದಲ್ಲಿ ಬದಲಾವಣೆ ಇಲ್ಲ, 2022ರ ವೇಳೆಗೆ ಶೇ. 9.5ರಷ್ಟು GDP ಬೆಳವಣಿಗೆಯ ಮುನ್ಸೂಚನೆ title=
RBI Credit Policy Today Update

ನವದೆಹಲಿ: RBI Credit Policy Today Update: ಭಾರತೀಯ ರಿಸರ್ವ್ ಬ್ಯಾಂಕ್ (Indian Reserve Bank) ಸತತ ಆರನೇ ಬಾರಿಗೆ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕರೋನಾ ಸಂಕ್ರಮಣದ (Corona Pandemic) ಎರಡನೇ ಅಲೆ ಮತ್ತು ಹಣದುಬ್ಬರದ ಸ್ಥಿತಿಯ ದೃಷ್ಟಿಯಿಂದ ರೆಪೊ ದರ (4%), ರಿವರ್ಸ್ ರೆಪೊ ದರ (3.35%) ಮತ್ತು ನಗದು ಮೀಸಲು ಅನುಪಾತ (CRR-4%) ದರಗಳನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ಶುಕ್ರವಾರ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shakthikanth Das) ಅವರು ತಿಳಿಸಿದ್ದಾರೆ.

ಆರ್‌ಬಿಐ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ:
ವಿತ್ತೀಯ ನೀತಿ ಸಮಿತಿಯ (ಎಂಪಿಸಿ) ಎಲ್ಲಾ 6 ಸದಸ್ಯರು ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡದಿರಲು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ ಕರೋನಾ ಸಾಂಕ್ರಾಮಿಕ ಪರಿಣಾಮವು ಕಡಿಮೆ ಆಗುವವರೆಗೂ ರಿಸರ್ವ್ ಬ್ಯಾಂಕ್ (Reserve Bank) ತನ್ನ ನಿಲುವನ್ನು ಸರಿಹೊಂದಿಸಲು ನಿರ್ಧರಿಸಿದೆ. ಅಂದರೆ ಭವಿಷ್ಯದಲ್ಲಿ ಬಡ್ಡಿದರಗಳಲ್ಲಿ ಯಾವುದೇ ಕಡಿತಕ್ಕೆ ಅವಕಾಶವಿದ್ದರೆ ಅದು ಸಂಭವಿಸಬಹುದು. ಇದಲ್ಲದೆ ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (MSM) ದರ ಮತ್ತು ಬ್ಯಾಂಕ್ ದರವನ್ನು ಸಹ 4.25% ನಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ- RBI Alert:ಬ್ಯಾಂಕ್ ಖಾತೆಯಲ್ಲಿ ವಂಚನೆ ನಡೆದಿದೆಯೇ? 10 ದಿನಗಳಲ್ಲಿ ನಿಮ್ಮ ಹಣ ಹಿಂಪಡೆಯುವುದು ಹೇಗೆ

ಗ್ರಾಮಗಳು, ಸಣ್ಣ ಪಟ್ಟಣಗಳಲ್ಲಿ ಕರೋನಾ ಹಾವಳಿ:
ಕರೋನಾ ಸಾಂಕ್ರಾಮಿಕದ ಎರಡನೇ ಅಲೆಯು (Corona Second Wave) ಸಣ್ಣ ನಗರಗಳ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಹಳ್ಳಿಗಳಿಗೆ ಕೋವಿಡ್ -19 (Covid 19) ಆಗಮನದೊಂದಿಗೆ, ಬೇಡಿಕೆಯಲ್ಲಿ ಕುಸಿತ ಕಂಡು ಬಂದಿದೆ. ಆದರೆ ಎರಡನೇ ಅಲೆಯ ವೇಳೆ ಸಾಯುವವರ ಪ್ರಮಾಣವು ಮೊದಲ ಅಲೆಯ ಸಂದರ್ಭಕ್ಕಿಂತ ಹೆಚ್ಚಾಗಿದೆ. ಆದರೆ ಇದು ಆರ್ಥಿಕ ಚಟುವಟಿಕೆಯ ಮೇಲೆ ಹೆಚ್ಚು ಪರಿಣಾಮ ಬೀರಲಿಲ್ಲ. ಕರೋನಾ ಲಸಿಕೆ ಹಾಕಿಸಿಕೊಳುವ (Vaccination) ಪ್ರಕ್ರಿಯೆಯು ಪುನರುಜ್ಜೀವನವನ್ನು ವೇಗಗೊಳಿಸುತ್ತದೆ ಎಂದು ಆರ್‌ಬಿಐ ಗವರ್ನರ್ ಭರವಸೆ ವ್ಯಕ್ತಪಡಿಸಿದರು.

ಜಿಡಿಪಿ ಬೆಳವಣಿಗೆಯ ಮುನ್ಸೂಚನೆ :
ಕರೋನಾ ಸಾಂಕ್ರಾಮಿಕದ ಈ ಸಂದರ್ಭವು ಜಿಡಿಪಿ ಬೆಳವಣಿಗೆಯ (GDP Growth) ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ರಿಸರ್ವ್ ಬ್ಯಾಂಕ್ 2021-22ರ ಆರ್ಥಿಕ ವರ್ಷದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು 10.5% ರಿಂದ 9.5%  ಎಂದು ಅಂದಾಜಿಸಿದೆ. ವಿತ್ತೀಯ ವರ್ಷ 2022ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ 18.5% (ಮೊದಲ ಅಂದಾಜು 26.2%), ಎರಡನೇ ತ್ರೈಮಾಸಿಕದಲ್ಲಿ 7.9% (ಮೊದಲ ಅಂದಾಜು 8.3%), ಮೂರನೇ ತ್ರೈಮಾಸಿಕದಲ್ಲಿ 7.2% (ಮೊದಲ ಅಂದಾಜು 5.4) ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ 6.6% (ಮೊದಲ ಅಂದಾಜು 6.2%) ಉಳಿಯುವ ನಿರೀಕ್ಷೆಯಿದೆ. ಅಂದರೆ ಮೂರನೇ ತ್ರೈಮಾಸಿಕದಿಂದ ಜಿಡಿಪಿ ಬೆಳವಣಿಗೆಯಲ್ಲಿ ಸುಧಾರಣೆ ಕಂಡುಬರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ-  Big News: ಶೀಘ್ರದಲ್ಲಿಯೇ ರೂ.100ರ ಹೊಸ ನೋಟು ಬಿಡುಗಡೆ, ನೆನೆಯುವುದಿಲ್ಲ-ಹರಿಯುವುದಿಲ್ಲ ಎಂದ RBI

ಆರ್ಥಿಕ ವರ್ಷ 2021-22ರಲ್ಲಿ ಸಿಪಿಐ ಅಂದಾಜು 5.1% :
ಆರ್ಥಿಕ ಪ್ರಗತಿಯ ಗತಿಯನ್ನು ಮರಳಿ ಹಳಿ ತರುವುದಕ್ಕೆ ಪೂರಕವಾದ ನೀತಿಗಳು ಬಹಳ ಅವಶ್ಯಕ. ದುರ್ಬಲ ಆರ್ಥಿಕ ವ್ಯವಸ್ಥೆಯಿಂದ 'ಬೇಡಿಕೆ' ಕುಸಿದಿದೆ. ಕಚ್ಚಾ ತೈಲಗಳ ಬೆಲೆ ದುಬಾರಿ ಆಗಿರುವುದರಿಂದ ದೇಶದಲ್ಲಿ ಬೆಲೆ ಏರಿಕೆಯ ಒತ್ತಡ ನಿರ್ಮಾಣವಾಗಿದೆ. ಚಿಲ್ಲರೆ ಹಣದುಬ್ಬರ ದರದಲ್ಲಿ ಅಂದರೆ ಆರ್‌ಬಿಐ 2022 ರ ಆರ್ಥಿಕ ವರ್ಷದಲ್ಲಿ ಸಿಪಿಐ ಶೇಕಡಾ 5.1 ರಷ್ಟಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಮೊದಲ ತ್ರೈಮಾಸಿಕದಲ್ಲಿ 5.2%, ಎರಡನೇ ತ್ರೈಮಾಸಿಕದಲ್ಲಿ 5.4%, ಮೂರನೇ ತ್ರೈಮಾಸಿಕದಲ್ಲಿ 4.7% ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ 5.3% ಎಂದು ಅಂದಾಜಿಸಲಾಗಿದೆ.‌ ರಫ್ತಿಗೆ ಪೂರಕವಾದ ಆರ್ಥಿಕ ನೀತಿ ಇರಬೇಕಾಗುತ್ತದೆ. ರಫ್ತಿಗೆ ಜಾಗತಿಕ ಬೇಡಿಕೆಯಿಂದ ಬೆಂಬಲ ನೀಡಲಾಗುವುದು ಮತ್ತು ಉತ್ತಮ ಮಳೆಗಾಲದಿಂದಾಗಿ ಗ್ರಾಮೀಣ ಬೇಡಿಕೆಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಶಕ್ತಿಕಾಂತ ದಾಸ್ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News