ನವದೆಹಲಿ: ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಆರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಿಸಿದೆ.


COMMERCIAL BREAK
SCROLL TO CONTINUE READING

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮೊದಲ ಬಜೆಟ್ ಮಂಡಿಸುವಾಗ ಆಮದು ಸುಂಕವನ್ನು ಪ್ರಸ್ತುತ ಶೇಕಡಾ 10 ರಿಂದ 12.5 ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದರು. ಚೀನಾ ನಂತರ ಭಾರತ ಎರಡನೇ ಅತಿ ಹೆಚ್ಚು ಚಿನ್ನವನ್ನು ಬಳಸುತ್ತಿದೆ.


ಕೇಂದ್ರ ಬಜೆಟ್ ಘೋಷಣೆಯ ನಂತರ ದೆಹಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 34,800 ರೂ. ಆಗಿದೆ. ಇನ್ನು ಆಭರಣ ತಯಾರಕರಾದ ಟೈಟಾನ್ ಮತ್ತು ಪಿಸಿ ಜ್ಯುವೆಲ್ಲರ್ ಷೇರುಗಳು ಶೇಕಡಾ 5 ರಷ್ಟು ಕುಸಿದಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಈಗ ಸೀಮಾ ಸುಂಕದ ಹೆಚ್ಚಳದ ಕುರಿತಾ ಪಿಟಿಐಗೆ ತಿಳಿಸಿರುವ ಅಖಿಲ ಭಾರತ ಸರಫಾ ಸಂಘದ ಉಪಾಧ್ಯಕ್ಷ ಸುರೇಂದ್ರ ಜೈನ್ 'ಸೀಮಾ  ಸುಂಕದ ಹೆಚ್ಚಳವು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ ಮತ್ತು ಇದು ಚಿನ್ನದ ಬಳಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ" ಎಂದು ಹೇಳಿದ್ದಾರೆ. 


2013 ರಲ್ಲಿ ಚಿನ್ನದ ಮೇಲಿನ ಸೀಮಾ ಸುಂಕವನ್ನು ಮೂರು ಬಾರಿ ಹೆಚ್ಚಿಸಲಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಭಾರತ ತನ್ನ ಬಹುತೇಕ ಚಿನ್ನವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತದೆ, ಈ ಹಿನ್ನಲೆಯಲ್ಲಿ ಈಗ ಸರ್ಕಾರ ಅದರ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸಿದೆ.