ಅಹಮದಾಬಾದ್: ಕೊರೊನಾವೈರಸ್ ಸಾಂಕ್ರಾಮಿಕದ ಮಧ್ಯೆ, ಗುಜರಾತ್‌ನಲ್ಲಿ ಚಂಡಮಾರುತದ ಭೀತಿ ಎದುರಾಗಿದ್ದು ಇದು ಭಾರಿ ವಿನಾಶಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಮೇ 17 ಮತ್ತು 18 ರಂದು ಪಶ್ಚಿಮ ಕರಾವಳಿಯಿಂದ ಚಂಡಮಾರುತ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ, ಈ ಚಂಡಮಾರುತವು ಪಾಕಿಸ್ತಾನದ ಕರಾಚಿ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆಯಿದೆ ಆದರೆ ಗುಜರಾತ್‌ನ ಸಮುದ್ರ ತೀರಕ್ಕೂ ಅಪ್ಪಳಿಸಬಹುದು ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ತೌಕ್ಟೇ ಚಂಡಮಾರುತ:
ಇದು 2021 ರ ಮೊದಲ ಚಂಡಮಾರುತವಾಗಲಿದ್ದು ಇದನ್ನು 'ತೌಕ್ಟೇ' ಎಂದು ಹೆಸರಿಸಲಾಗಿದೆ. ಅಂದರೆ, ಜೋರಾಗಿ ಧ್ವನಿಸುವ ಹಲ್ಲಿ. ಈ ಬಾರಿ ಸೈಕ್ಲೋನಿಕ್ ಚಂಡಮಾರುತದ (Cyclone) ಹೆಸರನ್ನು ಮ್ಯಾನ್ಮಾರ್‌ನಿಂದ ನೀಡಲಾಗಿದೆ. ಹಿಂದೂ ಮಹಾಸಾಗರ ಪ್ರದೇಶದ ಎಂಟು ದೇಶಗಳು ಭಾರತದ ಉಪಕ್ರಮದಲ್ಲಿ ಚಂಡಮಾರುತದ ಬಿರುಗಾಳಿಗಳನ್ನು ಹೆಸರಿಸಲು ಔಪಚಾರಿಕ ವ್ಯವಸ್ಥೆಯನ್ನು ಪ್ರಾರಂಭಿಸಿವೆ. ಈ ದೇಶಗಳಲ್ಲಿ ಭಾರತದ ಹೊರತಾಗಿ ಬಾಂಗ್ಲಾದೇಶ, ಪಾಕಿಸ್ತಾನ, ಮ್ಯಾನ್ಮಾರ್, ಮಾಲ್ಡೀವ್ಸ್, ಶ್ರೀಲಂಕಾ, ಓಮನ್ ಮತ್ತು ಥೈಲ್ಯಾಂಡ್ ಸೇರಿವೆ.


ಇದನ್ನೂ ಓದಿ- COVID-19 pandemic: ಪ್ರಧಾನಿ ಮೋದಿಗೆ ಜಂಟಿ ಪತ್ರ ಬರೆದ 12 ಪ್ರತಿಪಕ್ಷದ ನಾಯಕರು


ಮುಖ್ಯಮಂತ್ರಿ ವಿಜಯ್ ರೂಪಾಣಿ ಸೂಚನೆ:
ಗುಜರಾತ್‌ನಲ್ಲಿ ಇಂತಹ ಚಂಡಮಾರುತದ (Cyclone in Gujarat)  ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ರಾಜ್ಯದ ಮುಖ್ಯಮಂತ್ರಿ ವಿಜಯ್ ರೂಪಾಣಿ ಸಭೆ ನಡೆಸಿ ಕರಾವಳಿ ಜಿಲ್ಲೆಗಳ ಅಧಿಕಾರಿಗಳನ್ನು ಜಾಗರೂಕರಾಗಿರಿ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದರು. ಪೂರ್ವ-ಮಧ್ಯ ಅರೇಬಿಯನ್ ಸಮುದ್ರದಲ್ಲಿನ ಚಂಡಮಾರುತದಿಂದಾಗಿ ಸೌರಾಷ್ಟ್ರ ಮತ್ತು ದಕ್ಷಿಣ ಪ್ರದೇಶ ಸೇರಿದಂತೆ ಗುಜರಾತ್‌ನ ಕರಾವಳಿ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಬಹುದು ಎಂದು ಅಧಿಕಾರಿಗಳು ಊಹಿಸಿದ್ದಾರೆ.


ಇದನ್ನೂ ಓದಿ- Covid-19 Variant B.1.617:ಕೊರೊನಾ ವೈರಸ್ ನ B.1.617 ರೂಪಾಂತರಿಗೆ 'Indian Variant' ಹೇಳಬೇಡಿ ಎಂದ ಕೇಂದ್ರ ಸರ್ಕಾರ


ಗುಜರಾತ್ ಸೇರಿದಂತೆ ಈ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ:
ಹವಾಮಾನ ಇಲಾಖೆಯು ಕರಾವಳಿ ಪ್ರದೇಶಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದೆ.  ಗುಜರಾತ್‌ನ ಹೊರತಾಗಿ, ಗೋವಾ, ಕರ್ನಾಟಕ, ಮಹಾರಾಷ್ಟ್ರ, ಕೇರಳ ಮತ್ತು ಲಕ್ಷದ್ವೀಪಗಳಿಗೆ ಜಾಗರೂಕರಾಗಿರಲು ಸೂಚನೆ ನೀಡಲಾಗಿದೆ. ಇದರೊಂದಿಗೆ ಮೀನುಗಾರರಿಗೆ ಸಮುದ್ರಕ್ಕೆ ಹೋಗದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ, ಲಕ್ಷದ್ವೀಪ ಮತ್ತು ಮಾಲ್ಡೀವ್ಸ್ ಪ್ರದೇಶಗಳಲ್ಲಿ ಗಂಟೆಗೆ 40 ರಿಂದ 60 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಇದಲ್ಲದೆ, ಕೇರಳ, ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಕೂಡ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.