ನವದೆಹಲಿ: ಮುಂದಿನ 24 ಗಂಟೆಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಗಜ ಚಂಡಮಾರುತವು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.


COMMERCIAL BREAK
SCROLL TO CONTINUE READING

ಬಂಗಾಳ ಕೊಲ್ಲಿಯಲ್ಲಿ ಗಜ ಚಂಡಮಾರುತದ ವೇಗವು ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಿಗೆ  ಮುನ್ನಚ್ಚೆರಿಕೆ ನೀಡಲಾಗಿದೆ.ಮುಂದಿನ 36 ಗಂಟೆಗಳಲ್ಲಿ ಗಜ ಚಂಡಮಾರುತವು ಪಶ್ಚಿಮ ಮತ್ತು  ವಾಯುವ್ಯ ಭಾಗಗಳಲ್ಲಿ  ತದನಂತರ ಪಶ್ಚಿಮ-ನೈಋತ್ಯ ದಿಕ್ಕಿನಲ್ಲಿ ಚಲಿಸಿ ಉತ್ತರ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿ ಭಾಗಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.



ಇದೇ ವೇಳೆ ಚಂಡಮಾರುತವು ಪಶ್ಚಿಮ-ನೈಋತ್ಯ ದಿಕ್ಕಿಗೆ ಸಾಗುತ್ತಿರುವಾಗ ಕಡಲೂರು (ತಮಿಳುನಾಡು) ಮತ್ತು ಶ್ರೀಹರಿಕೋಟಾ ನಡುವೆ ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರ ಪ್ರದೇಶದ ಕರಾವಳಿಯಲ್ಲಿ ಇದು ಕ್ರಮೇಣವಾಗಿ ಚಂಡಮಾರುತವು ದುರ್ಬಲಗೊಳ್ಳಬಹುದು  ಎಂದು ಇಲಾಖೆ ತಿಳಿಸಿದೆ.



ಹವಾಮಾನ ಇಲಾಖೆಯ ಪ್ರಕಾರ ತಮಿಳುನಾಡಿದ ಉತ್ತರ ಕರಾವಳಿ ಮತ್ತು  ದಕ್ಷಿಣದ ಆಂಧ್ರ ಕರಾವಳಿ ಭಾಗಗಳಲ್ಲಿ ನವಂಬರ್ 14 ರ ಸಾಯಂಕಾಲ ಭಾರಿ ಮಳೆ ಸುರಿಯಲಿದೆ ಎಂದು ತಿಳಿಸಿದೆ.ಆದ್ದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನಚ್ಚೆರಿಕೆ ನೀಡಿದೆ.