ಅಮ್ರೋಹ: ಎರಡು ದಶಕಗಳ ಕಾಲ ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರ ಶಿಷ್ಯ ಡ್ಯಾನಿಶ್‌ ಅಲಿ ಉತ್ತರ ಪ್ರದೇಶದ ಅಮ್ರೋಹಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸೀಟು ಹಂಚಿಕೆ ಪ್ರಕಟವಾದ ಬೆನ್ನಲ್ಲೇ ಬಿಎಸ್​ಪಿ ಸೇರ್ಪಡೆಗೊಂಡಿದ್ದ ಡ್ಯಾನಿಶ್ ಅಲಿ, ಈ ಬಾರಿಯ ಚುನಾವಣೆಯಲ್ಲಿ ಅಮ್ರೋಹಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಗುರು(ದೇವೇಗೌಡ) ಕಲ್ಪತರು ನಾಡಲ್ಲಿ ಸೋತಿದ್ದರೆ, ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ಜೆಡಿಎಸ್ ನಲ್ಲೇ ಇದ್ದ ದೇವೇಗೌಡರ ಶಿಷ್ಯ  ಅಚ್ಚರಿಯ ಗೆಲುವು ಸಾಧಿಸಿದ ಡ್ಯಾನಿಶ್ ಅಲಿ ಕೊನೆ ಘಳಿಗೆಯಲ್ಲಿ ಬಿಎಸ್​ಪಿಗೆ ಸೇರ್ಪಡೆಗೊಂಡು ಉತ್ತರ ಪ್ರದೇಶದಲ್ಲಿ ಗೆಲುವು ಸಾಧಿಸಿರುವುದು ವಿಶೇಷವಾಗಿದೆ.


ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಆಶೀರ್ವಾದ ಹಾಗೂ ಅನುಮತಿ ಪಡೆದೇ ಬಿಎಸ್​ಪಿಗೆ ಸೇರ್ಪಡೆಯಾಗಿರುವುದಾಗಿ ತಿಳಿಸಿದ್ದ ಡ್ಯಾನಿಶ್ ಅಲಿ, ನನ್ನ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ನನ್ನ ಜನ್ಮಭೂಮಿಯಲ್ಲಿ, ಕರ್ಮಭೂಮಿಯಲ್ಲಿ ಜೆಡಿಎಸ್ ಪಕ್ಷವನ್ನು ಬೆಳೆಸಲು ಸಾಧ್ಯವಾಗಲಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಶಕ್ತಿಯನ್ನು ಬಲವಾದ ನಾಯಕತ್ವದಲ್ಲಿ ಬಳಸುವ ಅಗತ್ಯವಿದೆ ಎಂದು ಹೇಳಿದ್ದರು.