WATCH: ಮುಸ್ಲಿಂ ಸಹೋದರರಿಗೆ ರಕ್ಷಣಾ ಸಚಿವರ ಮನವಿ!
ನಾವು ಮತ ಚಲಾಯಿಸಬೇಕೇ ಅಥವಾ ಬೇಡವೇ ಎಂಬುದನ್ನು ನೀವು ನಿರ್ಧರಿಸಬೇಕು. ಆದರೆ ನಮ್ಮ ಉದ್ದೇಶಗಳನ್ನು ಅನುಮಾನಿಸಬೇಡಿ ಎಂದು ನನ್ನ ಮುಸ್ಲಿಂ ಸಹೋದರರಿಗೆ ಹೇಳಲು ಬಯಸುತ್ತೇನೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದೇಶದ ಮುಸ್ಲಿಮರಿಗೆ ಮನವಿ ಮಾಡಿದ್ದಾರೆ.
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath singh) ದೇಶದ ಮುಸ್ಲಿಮರಿಗೆ ಮನವಿಯೊಂದನ್ನು ಮಾಡಿದ್ದಾರೆ. 'ನಾವು ಮತ ಚಲಾಯಿಸಬೇಕೇ ಅಥವಾ ಬೇಡವೇ ಎಂಬುದನ್ನು ನೀವು ನಿರ್ಧರಿಸಬೇಕು. ಆದರೆ ನಮ್ಮ ಉದ್ದೇಶಗಳನ್ನು ಅನುಮಾನಿಸಬೇಡಿ ಎಂದು ನನ್ನ ಮುಸ್ಲಿಂ ಸಹೋದರರಿಗೆ ಮನವಿ ಮಾಡಲು ಬಯಸುತ್ತೇನೆ. ಪೌರತ್ವವನ್ನು ಕಸಿದುಕೊಳ್ಳುವುದು ದೂರದ ವಿಷಯ, ಯಾರೂ ನಿಮ್ಮನ್ನು ಮುಟ್ಟಲೂ ಸಾಧ್ಯವಿಲ್ಲ' ಎಂದು ಅವರು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆ(CAA) ತರುವುದಾಗಿ ಭರವಸೆ ನೀಡಿದ್ದೆವು. ಅದರಂತೆ ನಾವು ಈ ಮಸೂದೆಯನ್ನು ಪರಿಚಯಿಸಿದ್ದೇವೆ ಮತ್ತು ಅಂಗೀಕರಿಸಿದ್ದೇವೆ. ನಾವು ಯಾವುದೇ ಅಪರಾಧ ಮಾಡಿಲ್ಲ. ಇದನ್ನು ಹಿಂದೂ-ಮುಸ್ಲಿಂ ಎಂದು ನೋಡಲಾಯಿತು. ನಮ್ಮ ಪ್ರಧಾನ ಮಂತ್ರಿಯ ಘೋಷಣೆ 'ಸಬ್ಕಾ ಸಾಥ್ ಸಬ್ಕಾ ವಿಕಾಸ್'. ಕೆಲವು ಶಕ್ತಿಗಳು ಇದನ್ನು ವಿರೋಧಿಸುತ್ತಿವೆ. ಧರ್ಮದ ಆಧಾರದ ಮೇಲೆ ದೇಶದ ವಿಭಜನೆ ಇರಬಾರದು ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ಯಾರಾದರೂ ಕಿರುಕುಳಕ್ಕೊಳಗಾಗಿದ್ದರೆ ಅವರಿಗೆ ಪೌರತ್ವ ನೀಡಬೇಕು ಮತ್ತು ಮಹಾತ್ಮ ಗಾಂಧಿ ಹೇಳಿದ್ದನ್ನು ನಾವು ಮಾಡಿದ್ದೇವೆ ಎಂದು ಸಿಂಗ್ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಂಡರು.
ಇದೇ ಸಂದರ್ಭದಲ್ಲಿ ನಾವು ಎನ್‌ಪಿಆರ್(NPR) ಮಾಡಿಲ್ಲ, ಅದನ್ನು ಕಾಂಗ್ರೆಸ್ ರಚಿಸಿದೆ ಎಂದ ರಾಜನಾಥ್ ಸಿಂಗ್ ದೇಶದ ಜನರನ್ನು ನೋಂದಾಯಿಸಬಾರದೇ ಎಂದು ಪ್ರಶ್ನಿಸಿದರು.
'ನಾವು ಮಾನವೀಯತೆಯನ್ನು ಹೊರತುಪಡಿಸಿ ರಾಜಕೀಯ ಮಾಡುವುದಿಲ್ಲ ಎಂದು ಹೇಳಿದ ಸಚಿವ ರಾಜನಾಥ್ ಸಿಂಗ್, ನಾವು ಎಲ್ಲರನ್ನೂ ಕರೆದುಕೊಂಡು ಹೋಗುತ್ತೇವೆ. ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ನಾವು ರಾಜಕೀಯ ಮಾಡುತ್ತೇವೆ, ದ್ವೇಷವನ್ನು ಸೃಷ್ಟಿಸಲು ನಾವು ರಾಜಕೀಯ ಮಾಡುವುದಿಲ್ಲ. ಕಾಂಗ್ರೆಸ್ ಜನರು ದೇಶದ ಜನರಲ್ಲಿ ದ್ವೇಷವನ್ನು ಸೃಷ್ಟಿಸುತ್ತಿದ್ದಾರೆ' ಎಂದು ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು.