ನವದೆಹಲಿ: ದೇಶದಲ್ಲಿ ಕರೋನಾವೈರಸ್ ಎರಡನೇ ತರಂಗದ ಪ್ರಭಾವ ಕೊಂಚ ತಗ್ಗಿದೆ. ಆದರೆ ಕರೋನಾ ಮೂರನೇ ತರಂಗ (Corona Third Wave) ಮಕ್ಕಳಿಗೆ ಅಪಾಯಕಾರಿ ಎಂಬ ವರದಿಗಳು ಎಲ್ಲರನ್ನೂ ಆತಂಕಕ್ಕೀಡುಮಾಡಿದೆ. ಈ ಮಧ್ಯೆ, ಮಕ್ಕಳಿಗೆ ಕೋವಿಡ್ -19 ರ ಮೂರನೇ ತರಂಗದ ಅಪಾಯವನ್ನು ಕಡಿಮೆ ಮಾಡಲು ಸರ್ಕಾರವು ಸಿದ್ಧತೆಗಳನ್ನು ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ಮಕ್ಕಳ ಮೇಲೆ ಕರೋನಾ ಲಸಿಕೆಯ (Corona Vaccine) ಪ್ರಯೋಗಗಳು ಪ್ರಾರಂಭವಾಗಿವೆ. 


COMMERCIAL BREAK
SCROLL TO CONTINUE READING

ಈಗ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಇಂದಿನಿಂದ 6 ರಿಂದ 12 ವರ್ಷ ವಯಸ್ಸಿನ ಮಕ್ಕಳ ಮೇಲೆ ಸ್ಥಳೀಯ ಕೊವಾಕ್ಸಿನ್ (Covaxin) ಪ್ರಯೋಗವನ್ನು ಪ್ರಾರಂಭಿಸುತ್ತಿದೆ. ಲಸಿಕೆ ಪ್ರಯೋಗಕ್ಕಾಗಿ ಮಕ್ಕಳನ್ನು ಮೊದಲು ಪರೀಕ್ಷಿಸಲಾಗುತ್ತದೆ ಮತ್ತು ನಂತರ ಅದರ ವರದಿಯ ಆಧಾರದ ಮೇಲೆ ಪ್ರಯೋಗವನ್ನು ಪ್ರಾರಂಭಿಸಲಾಗುತ್ತದೆ. ಈ ಮೊದಲು ಏಮ್ಸ್ ಪಾಟ್ನಾದಲ್ಲಿ, 6 ರಿಂದ 12 ವರ್ಷದ ಮಕ್ಕಳಿಗೆ ಕರೋನಾ ಲಸಿಕೆ ಪ್ರಯೋಗ ಪ್ರಾರಂಭವಾಗಿದೆ.


ಇದನ್ನೂ ಓದಿ- Covaxin, Covishield ಇವೆರಡರಲ್ಲಿ ಯಾವ ಲಸಿಕೆ ಹೆಚ್ಚು ಪರಿಣಾಮಕಾರಿ? ಸಂಶೋಧನೆ ಹೇಳಿದ್ದೇನು?


ಸ್ಕ್ರೀನಿಂಗ್ ವರದಿಯ ನಂತರ ಕೋವಾಕ್ಸಿನ್ ಡೋಸ್ ನೀಡಲಾಗುವುದು:
ಮೊದಲು ಮಕ್ಕಳ ಸ್ಕ್ರೀನಿಂಗ್ ವರದಿಯನ್ನು ಕಾಯಲಾಗುವುದು, ಇದರಿಂದ ಭಾರತ್ ಬಯೋಟೆಕ್‌ನ (Bharat Biotech) ಕೋವಾಕ್ಸಿನ್ ಮಕ್ಕಳಿಗೆ ಸೂಕ್ತವಾಗುತ್ತದೆಯೋ ಇಲ್ಲವೋ ಎಂದು ತಿಳಿಯುತ್ತದೆ. ಇದಕ್ಕೂ ಮೊದಲು ದೆಹಲಿ ಏಮ್ಸ್ 12 ರಿಂದ 18 ವರ್ಷ ವಯಸ್ಸಿನ ಮಕ್ಕಳ ಮೇಲೆ ಸಿಂಗಲ್ ಡೋಸ್ ಕೊವಾಕ್ಸಿನ್ ಸ್ಕ್ರೀನಿಂಗ್ ಮತ್ತು ಪ್ರಯೋಗವನ್ನು ಪೂರ್ಣಗೊಳಿಸಿದೆ. 


ಇದನ್ನೂ ಓದಿ-ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಯ ಗರಿಷ್ಠ ಬೆಲೆ ನಿಗದಿಪಡಿಸಿದ ಕೇಂದ್ರ ಸರ್ಕಾರ


ಭಾರತದ ಔಷಧ ನಿಯಂತ್ರಕವು 2 ರಿಂದ 18 ವರ್ಷ ವಯಸ್ಸಿನ ಮಕ್ಕಳ ಮೇಲೆ ಸಿಂಗಲ್-ಡೋಸ್ ಕೊವಾಕ್ಸಿನ್ ಅನ್ನು ಪ್ರಯೋಗಿಸಲು ಅನುಮತಿಸಿದ ನಂತರ, ಜೂನ್ 7 ರಿಂದ ದೆಹಲಿ ಏಮ್ಸ್ನಲ್ಲಿ 12 ರಿಂದ 18 ವರ್ಷ ವಯಸ್ಸಿನ ಮಕ್ಕಳ ಮೇಲೆ ಕೋವಾಕ್ಸಿನ್ ಪ್ರಯೋಗವನ್ನು ಪ್ರಾರಂಭಿಸಲಾಯಿತು. 6 ರಿಂದ 12 ವರ್ಷದ ಮಕ್ಕಳ ನಂತರ, ಏಮ್ಸ್ ದೆಹಲಿಯು 2 ರಿಂದ 6 ವರ್ಷದ ಮಕ್ಕಳ ಮೇಲೆ ಪ್ರಯೋಗಗಳನ್ನು ನಡೆಸಲಿದೆ. ಕರೋನದ ಮೂರನೇ ತರಂಗದಲ್ಲಿ ಮಕ್ಕಳು ಹೆಚ್ಚು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದಾಗಿ ಇಡೀ ಜಗತ್ತು ಮಕ್ಕಳ ಮೇಲೆ ಕರೋನಾ ಲಸಿಕೆಯ ಪ್ರಯೋಗವನ್ನು ಪ್ರಾರಂಭಿಸುತ್ತಿದೆ. ಮಕ್ಕಳಿಗೆ ಕರೋನಾ ಲಸಿಕೆ ಬಂದ ನಂತರ, ಮೂರನೇ ತರಂಗ ಬರದಂತೆ ತಡೆಯಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.