Covaxin, Covishield ಇವೆರಡರಲ್ಲಿ ಯಾವ ಲಸಿಕೆ ಹೆಚ್ಚು ಪರಿಣಾಮಕಾರಿ? ಸಂಶೋಧನೆ ಹೇಳಿದ್ದೇನು?

ಸಂಶೋಧನೆಯ ಪ್ರಕಾರ, ಕೋವ್‌ಶೀಲ್ಡ್  (Covishield) ಮತ್ತು ಕೊವಾಕ್ಸಿನ್ ಎರಡೂ ಉತ್ತಮ ರೋಗನಿರೋಧಕ ಪ್ರತಿಕ್ರಿಯೆಯನ್ನು  (Good Immune Response)  ಉತ್ತೇಜಿಸಿದವು, ಆದರೆ ಸೇರೋಪೊಸಿಟಿವಿಟಿ ದರ ಮತ್ತು ಸರಾಸರಿ ಆಂಟಿ-ಸ್ಪೈಕ್ ಪ್ರತಿಕಾಯಗಳು ಕೋವಿಶೀಲ್ಡ್ನಲ್ಲಿ ಹೆಚ್ಚಾಗಿದ್ದವು. ಅಂದರೆ, ಕೋವಿಶೀಲ್ಡ್ ಕೋವಾಕ್ಸಿನ್‌   (Covaxin) ಗಿಂತ ಹೆಚ್ಚಿನ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗಿದೆ.

Written by - Yashaswini V | Last Updated : Jun 7, 2021, 07:25 AM IST
  • ಆರೋಗ್ಯ ಕಾರ್ಯಕರ್ತರ ಮೇಲೆ ನಡೆದಿರುವ ಸಂಶೋಧನೆ
  • ಸಂಶೋಧನೆಯಲ್ಲಿ ಕೋವಿಶೀಲ್ಡ್ ಕೋವಾಕ್ಸಿನ್‌ನಲ್ಲಿ ಯಾವುದು ಹೆಚ್ಚು ಪರಿಣಾಮಕಾರಿ ಎಂಬ ಮಾಹಿತಿ ಬಹಿರಂಗ
  • ಕರೋನಾ ವಿರುದ್ಧ ಹೋರಾಟದಲ್ಲಿ ಕೋವಿಶೀಲ್ಡ್ ಕೋವಾಕ್ಸಿನ್‌ನಲ್ಲಿ ಯಾವುದು ಉತ್ತಮ ತಿಳಿಯಿರಿ...
Covaxin, Covishield ಇವೆರಡರಲ್ಲಿ ಯಾವ ಲಸಿಕೆ ಹೆಚ್ಚು ಪರಿಣಾಮಕಾರಿ? ಸಂಶೋಧನೆ ಹೇಳಿದ್ದೇನು? title=
ಕರೋನಾ ವಿರುದ್ಧ ಹೋರಾಟದಲ್ಲಿ ಕೋವಿಶೀಲ್ಡ್ ಕೋವಾಕ್ಸಿನ್‌ನಲ್ಲಿ ಯಾವುದು ಉತ್ತಮ

ನವದೆಹಲಿ: ಇಡೀ ವಿಶ್ವವನ್ನೇ ತನ್ನ ಕಪಿಮುಷ್ಟಿಯಲ್ಲಿ ಬಂಧಿಸಿರುವ ಕರೋನಾವೈರಸ್ (Coronavirus) ಸಾಂಕ್ರಾಮಿಕದಿಂದ ಹೊರಬರಲು ಎಲ್ಲೆಡೆ ಲಸಿಕೆ ಅಭಿಯಾನ ಆರಂಭವಾಗಿದೆ. ಈ ಮಧ್ಯೆ ದೇಶದಲ್ಲಿ ನೀಡುತ್ತಿರುವ ಕರೋನಾ ಲಸಿಕೆಗಳಾದ (Corona Vaccine) ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ನಲ್ಲಿ ಯಾವುದು ಉತ್ತಮ, ಯಾವುದು ಹೆಚ್ಚು ಪರಿಣಾಮಕಾರಿ ಎಂಬ ಪ್ರಶ್ನೆಗಳು ಕೇಳಿ ಬಂದಿದ್ದವು. ಇದೀಗ ಕರೋನಾ ಲಸಿಕೆ ಕುರಿತು ನಡೆಸಿದ ಸಂಶೋಧನೆಯಲ್ಲಿ, ಕೋವಿಶೀಲ್ಡ್ ಕೋವಾಕ್ಸಿನ್‌  (Covaxin) ಗಿಂತ ಹೆಚ್ಚಿನ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂಬ ಅಂಶ  ಬೆಳಕಿಗೆ ಬಂದಿದೆ. 

ವಾಸ್ತವವಾಗಿ ವೈದ್ಯರು ಮತ್ತು ದಾದಿಯರನ್ನು ಒಳಗೊಂಡ ಈ ಸಂಶೋಧನೆಯಲ್ಲಿ ಅವರಿಗೆ ಕೋವಿಶೀಲ್ಡ್  (Covishield) ಮತ್ತು ಕೊವಾಕ್ಸಿನ್   (Covaxin) ಎರಡೂ ಪ್ರಮಾಣಗಳನ್ನು ನೀಡಲಾಯಿತು. ಇದರ ನಂತರ ಯಾವ ಲಸಿಕೆ ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಲಾಯಿತು. ಸಂಶೋಧನಾ ಫಲಿತಾಂಶಗಳ ಪ್ರಕಾರ, ಸೀರಮ್ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ (Serum Institute's Covishield) ಭಾರತ್ ಬಯೋಟೆಕ್‌ನ ಕೊವಾಕ್ಸಿನ್‌ಗಿಂತ (Bharat Biotech's Covaxin) ಹೆಚ್ಚಿನ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ- K Sudhakar : 'ಕಣ್ಣಿಗೆ ಬ್ಲಾಕ್ ಫಂಗಸ್ ಬಂದ್ರೆ ಕಣ್ಣು ತೆಗೆಯಲೇ ಬೇಕಾಗುತ್ತದೆ'

ಸಂಶೋಧನೆಯಲ್ಲಿ ಭಾಗಿಯಾಗಿದ್ದ ಆರೋಗ್ಯ ಕಾರ್ಯಕರ್ತರು :
ಈ ಅಧ್ಯಯನದಲ್ಲಿ ಒಟ್ಟು 515 ಆರೋಗ್ಯ ಕಾರ್ಯಕರ್ತರು (Health Care Workers) (305 ಪುರುಷರು, 210 ಮಹಿಳೆಯರು) ಭಾಗಿಯಾಗಿದ್ದರು. ಅವರಲ್ಲಿ 456 ಮಂದಿಗೆ ಕೋವಿಶೀಲ್ಡ್ ಲಸಿಕೆಯನ್ನೂ (Covishield Vaccine) ಮತ್ತು 96 ಜನರಿಗೆ ಕೋವಾಕ್ಸಿನ್‌ನ್ನು ಅನ್ವಯಿಸಲಾಗಿದೆ. ಒಟ್ಟಾರೆಯಾಗಿ, ಶೇಕಡಾ 79.3 ರಷ್ಟು ಜನರು ಮೊದಲ ಡೋಸ್ ನಂತರ ಸೆರೊಪೊಸಿಟಿವಿಟಿಯನ್ನು ತೋರಿಸಿದ್ದಾರೆ. ಕೋವಿಶೀಲ್ಡ್ ತೆಗೆದುಕೊಳ್ಳುವವರಲ್ಲಿ ಆಂಟಿ-ಸ್ಪೈಕ್ ಪ್ರತಿಕಾಯಗಳಲ್ಲಿನ ಪ್ರತಿಕ್ರಿಯೆ ದರ ಮತ್ತು ಸರಾಸರಿ ದರ ಹೆಚ್ಚಾಗಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ರೋಗನಿರೋಧಕ ಪ್ರತಿಕ್ರಿಯೆ ಎರಡರಲ್ಲೂ ಉತ್ತಮವಾಗಿತ್ತು:
ಕರೋನವೈರಸ್ ಲಸಿಕೆ-ಪ್ರೇರಿತ ಆಂಟಿಬಾಡಿ ಟೈಟ್ರೆ  (Coronavirus Vaccine-induced Antibody Titre) ಎಂದು ಕರೆಯಲ್ಪಡುವ ಈ ಸಂಶೋಧನೆಯಲ್ಲಿ, ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡಿತ್ತು. ಸಂಶೋಧನೆಯ ಪ್ರಕಾರ, ಕೋವ್‌ಶೀಲ್ಡ್ ಮತ್ತು ಕೊವಾಕ್ಸಿನ್ ಎರಡೂ ಉತ್ತಮ ರೋಗನಿರೋಧಕ ಪ್ರತಿಕ್ರಿಯೆಯನ್ನು ಉತ್ತೇಜಿಸಿದವು, ಆದರೆ ಸೇರೋಪೊಸಿಟಿವಿಟಿ ದರ ಮತ್ತು ಸರಾಸರಿ ಆಂಟಿ-ಸ್ಪೈಕ್ ಪ್ರತಿಕಾಯಗಳು ಕೋವಿಶೀಲ್ಡ್ನಲ್ಲಿ ಹೆಚ್ಚಾಗಿದ್ದವು. ಅಂದರೆ, ಕೋವಿಶೀಲ್ಡ್ ಕೋವಾಕ್ಸಿನ್‌ಗಿಂತ ಹೆಚ್ಚಿನ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎನ್ನಲಾಗಿದೆ.

ಇದನ್ನೂ ಓದಿ- Cheapest Corona Vaccine: ಭಾರತದ ಅತ್ಯಂತ ಅಗ್ಗದ ವ್ಯಾಕ್ಸಿನ್ Corbevax ಶೀಘ್ರದಲ್ಲಿಯೇ ಬಿಡುಗಡೆ!

ಐಸಿಎಂಆರ್ ಕೂಡ ಹೇಳಿಕೊಂಡಿದೆ:
ಇದಕ್ಕೂ ಮೊದಲು, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ  (Dr Balram Bhargava) ಅವರು ಕೊವಾಕ್ಸಿನ್  (Covaxin) ಮತ್ತು ಕೋವಿಶೀಲ್ಡ್ (Covishield) ತಯಾರಿಸಿದ ಪ್ರತಿಕಾಯಗಳ (Antibody) ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಕೋವಿಶೀಲ್ಡ್ ಲಸಿಕೆಯ ಮೊದಲ ಪ್ರಮಾಣವನ್ನು ತೆಗೆದುಕೊಂಡ ನಂತರ, ಕೋವಾಕ್ಸಿನ್‌ನ ಮೊದಲ ಡೋಸ್ ನಂತರಉತ್ಪತ್ತಿಯಾಗುವ ಪ್ರತಿಕಾಯಗಳಿಗಿಂತ ಹೆಚ್ಚು ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ ಎಂದು ಅವರು ಹೇಳಿದ್ದಾರೆ. ಹೊಸ ಅಧ್ಯಯನದ ಪ್ರಕಾರ, ಕೋವಾಕ್ಸಿನ್‌ನ ಮೊದಲ ಡೋಸ್ ತೆಗೆದುಕೊಂಡ ನಂತರ ಹೆಚ್ಚಿನ ಪ್ರತಿಕಾಯಗಳು ಉತ್ಪತ್ತಿಯಾಗುವುದಿಲ್ಲ, ಆದರೆ ಎರಡನೇ ಡೋಸ್ ಸಾಕಷ್ಟು ಪ್ರತಿಕಾಯಗಳನ್ನು ಮಾಡುತ್ತದೆ. ಅದೇ ಸಮಯದಲ್ಲಿ, ಕೋವಿಶೀಲ್ಡ್ನ ಮೊದಲ ಡೋಸ್ ತೆಗೆದುಕೊಂಡ ನಂತರವೇ, ಅದರಿಂದ ಉತ್ತಮ ಸಂಖ್ಯೆಯ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ ಎಂದು  ಎಂದು ಡಾ. ಬಲರಾಮ್ ಭಾರ್ಗವ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News