Delhi Politics : ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಜೈಲೇ ಗತಿಯಾಗಿದೆ. ಇಂದು ಅವರ ಜಾಮೀನು ಅರ್ಜಿಯು ರೋಸ್ ಅವೆನ್ಯೂ ಕೋರ್ಟ್ ವಿಚಾರಣೆ ನಡೆಸಿತು. ಸಿಸೋಡಿಯಾ ಅವರ ಕಸ್ಟಡಿಯನ್ನು ಹೆಚ್ಚಿಸುವಂತೆ ಸಿಬಿಐ ಕೋರ್ಟ್‌ಗೆ ಒತ್ತಾಯಿಸಿತ್ತು, ಅದನ್ನು ನ್ಯಾಯಾಲಯ ಅಂಗೀಕರಿಸಿದೆ, ಇದೀಗ ಸಿಸೋಡಿಯಾ ಅವರನ್ನು 5 ದಿನಗಳ ನಂತರ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಸೂಚಿಸಲಾಗಿದೆ. ಗಮನಾರ್ಹವೆಂದರೆ, ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಬಂಧಿಸಲಾದೆ.


COMMERCIAL BREAK
SCROLL TO CONTINUE READING

ಮನೀಶ್ ಸಿಸೋಡಿಯಾ ಪರ ವಕೀಲರಿಂದ ಮಾಹಿತಿ 


ಮನೀಶ್ ಸಿಸೋಡಿಯಾ ಪರ ವಕೀಲರು ಸಿಬಿಐನ ರಿಮಾಂಡ್ ಪ್ರತಿಯಲ್ಲಿ ಯಾವುದೇ ಉಲ್ಲೇಖವಿಲ್ಲ, ಅದೇ ಹಳೆಯ ಆರೋಪಗಳು. ನ್ಯಾಯಾಲಯ ಮೊದಲ ಬಾರಿಗೆ ರಿಮಾಂಡ್ ನೀಡಿದಾಗ ಮತ್ತು ಎರಡನೇ ಬಾರಿಗೆ ರಿಮಾಂಡ್ ನೀಡಬೇಕಾದಾಗ ರಿಮಾಂಡ್ ನೀಡಲು ಕಾರಣ ಮತ್ತು ಸಂದರ್ಭಗಳಲ್ಲಿ ವ್ಯತ್ಯಾಸವಿದೆ ಎಂದು ಅವರು ಹೇಳಿದರು. ಸಿಬಿಐಗೆ ಬಲವಾದ ಕಾರಣವಿರಬೇಕು. ಸಂಪೂರ್ಣ ವಿಚಾರಣೆಯ ರೆಕಾರ್ಡಿಂಗ್ ಸಿಡಿಯಲ್ಲಿದೆ ಆದರೆ ಅದನ್ನು ನ್ಯಾಯಾಲಯದಲ್ಲಿ ತೋರಿಸಲು ಸಾಧ್ಯವಿಲ್ಲ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ಪ್ರಸ್ತುತ, ನ್ಯಾಯಾಧೀಶರು ಸಿಸೋಡಿಯಾ ಪ್ರಕರಣದ ಡೈರಿಯನ್ನು ಕೇಳಿದ್ದಾರೆ ಎಂದರು.


ಸಿಸೋಡಿಯಾ ವಿರುದ್ಧ ಆರೋಪಿಸಿದೆ ಸಿಬಿಐ 


2021-22ನೇ ಸಾಲಿನ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರನ್ನು ಭಾನುವಾರ ಸಂಜೆ ಸಿಬಿಐ ಬಂಧಿಸಿದೆ. ಸದ್ಯಕ್ಕೆ ಈ ನೀತಿಯನ್ನು ರದ್ದುಗೊಳಿಸಲಾಗಿದೆ. ಸಿಬಿಐ ಪ್ರಕಾರ, ಬಂಧಿಸುವ ಮೊದಲು ಅವರನ್ನು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು ಆದರೆ ಅವರು ನೀಡಿದ ಉತ್ತರಗಳು ತೃಪ್ತಿಕರವಾಗಿಲ್ಲ ಎಂದು ಆರೋಪಿಸಲಾಗಿದೆ. ಫೆಬ್ರವರಿ 27 ರಂದು, ನ್ಯಾಯಾಲಯವು ಸಿಸೋಡಿಯಾ ಅವರನ್ನು ಸಿಬಿಐ ಕಸ್ಟಡಿಗೆ ಕಳುಹಿಸಿತ್ತು, ಇದರಿಂದಾಗಿ ತನಿಖಾ ಸಂಸ್ಥೆಯು ಸರಿಯಾದ ಮತ್ತು ನ್ಯಾಯಯುತ ತನಿಖೆಗಾಗಿ ಕೇಳಲಾದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಪಡೆಯಬಹುದು. ಮಾಧ್ಯಮ ವರದಿಗಳ ಪ್ರಕಾರ, ಮನೀಶ್ ಸಿಸೋಡಿಯಾ ಅವರ ಪತ್ನಿಯ ಆರೋಗ್ಯವು ಹದೆಗೆಟ್ಟಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.