ನವದೆಹಲಿ: ನೀವು ದೆಹಲಿ ಮೆಟ್ರೋದ ಸ್ಮಾರ್ಟ್ ಕಾರ್ಡ್ ಹೊಂದಿದ್ದರೆ ಮತ್ತು ನೀವು ಸಾಮಾನ್ಯವಾಗಿ ಡಿಟಿಸಿ ಬಸ್ ಮೂಲಕ ಪ್ರಯಾಣಿಸುವ ಪ್ರಯಾಣಿಕರಿಗೆ ಸರ್ಕಾರ ವಿಶೇಷ ಸೌಲಭ್ಯ ನೀಡಲಿದೆ. ದೆಹಲಿ ಮೆಟ್ರೊ ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಟಿಕೆಟ್ನಲ್ಲಿ ಈಗ ಡಿಟಿಸಿ ಮತ್ತು ಕ್ಲಸ್ಟರ್ ಬಸ್ಗಳು 10% ರಿಯಾಯಿತಿ ನೀಡಲಿದೆ.


COMMERCIAL BREAK
SCROLL TO CONTINUE READING

ಉದಾಹರಣೆಗೆ, ಯಾವುದೇ ಮಾರ್ಗದ ಟಿಕೆಟಿಗೆ 20 ರೂಪಾಯಿಗಳಿದ್ದರೆ, ನೀವು ಕಾರ್ಡ್ ಹೊಂದಿದ್ದರೆ 18 ರೂಪಾಯಿಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ. ಈ ರಿಯಾಯಿತಿ ಡಿಸೆಂಬರ್ 30 ರಿಂದ ಮೆಟ್ರೋ ಕಾರ್ಡ್ ಹೊಂದಿರುವ ಪ್ರಯಾಣಿಕರಿಗೆ ಡಿಟಿಸಿ ಬಸ್ಗಳಲ್ಲಿ ಅನ್ವಯವಾಗುತ್ತದೆ. ಈ ನಿಟ್ಟಿನಲ್ಲಿ ಡಿಟಿಸಿ ಆದೇಶ ನೀಡಿದೆ. ಈಗ ದೆಹಲಿಯ ಎಲ್ಲಾ ಬಸ್ಸುಗಳು ಈ ರಿಯಾಯಿತಿಗಳನ್ನು ನೀಡುತ್ತಿವೆ.


ಕಳೆದ ವಾರ ದೆಹಲಿ ಕ್ಯಾಬಿನೆಟ್ ನಿಂದ ಅನುಮೋದನೆ:
ಪ್ರಸ್ತುತ, ಡಿಟಿಸಿ ಅಲ್ಲದ ಎಸಿ ಬಸ್ಸುಗಳ ಬಾಡಿಗೆ 5, 10 ಮತ್ತು 15 ರೂಪಾಯಿಗಳಾಗಿವೆ. ಎಸಿ ಬಸ್ಸುಗಳ ದರ 10, 15, 20 ಮತ್ತು 25 ರೂ. ಎನ್ಸಿಆರ್ ಬಸ್ಗಳಲ್ಲಿ ಈ ರಿಯಾಯಿತಿ ಲಭ್ಯವಿರುವುದಿಲ್ಲ. ಈ ಯೋಜನೆಯನ್ನು ಮೆಟ್ರೊ ಮಾರ್ಗಗಳಲ್ಲಿರುವ ಡಿಟಿಸಿ ಬಸ್ಗಳಲ್ಲಿ  ಅಳವಡಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ದೆಹಲಿ ಕ್ಯಾಬಿನೆಟ್ ಈ ಸೌಲಭ್ಯವನ್ನು ಅನುಮೋದಿಸಿದೆ. ಇದರ ನಂತರ, ಆಗಸ್ಟ್ 24 ರಂದು ಅದರ ಅವಲೋಕನ ಪ್ರಾರಂಭಿಸಲಾಯಿತು. ಬಳಿಕ ನವೆಂಬರ್ 30 ರಿಂದ ಎಲ್ಲಾ ಡಿಟಿಸಿ ಬಸ್ಸುಗಳಲ್ಲಿ ಇದನ್ನು ಜಾರಿಗೊಳಿಸಲು ಅನುಮತಿ ನೀಡಲಾಗಿದೆ.


ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ ಹೊಸ ಕಾರ್ಡ್:
ಯಂತ್ರವು ಯಾವುದೇ ಕಾರಣಕ್ಕಾಗಿ ಸ್ಮಾರ್ಟ್ ಕಾರ್ಡ್ ಅನ್ನು ಅಕ್ಸೆಪ್ಟ್ ಮಾಡದಿದ್ದರೆ  ಪ್ರಯಾಣಿಕರಿಗೆ ರಿಯಾಯಿತಿ ದೊರೆಯುವುದಿಲ್ಲ ಎಂದು ಡಿಟಿಸಿ ಹೇಳಿದೆ. ಇದಲ್ಲದೆ, ಡಿಟಿಸಿ ಎಲ್ಲಾ ವಿಭಾಗಗಳಲ್ಲಿ ಮೆಟ್ರೋ ಕಾರ್ಡುಗಳನ್ನು ಒದಗಿಸುವ ಯೋಜನೆ ಇದೆ ಮತ್ತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುತ್ತದೆ. ಹೊಸ ಲೋಗೊ ಮತ್ತು ವಿನ್ಯಾಸದೊಂದಿಗೆ ದೆಹಲಿ ಸರ್ಕಾರ ಈಗಾಗಲೇ ಮೆಟ್ರೋ ಕಾರ್ಡ್ ತಯಾರಿಸಲು ಪ್ರಾರಂಭಿಸಿದೆ. ಕಾರ್ಡ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಮೆಟ್ರೊ ಕಾರ್ಡ್ ಅನ್ನು ಈಗ 'ಒನ್' ಎಂದು ಕರೆಯಲಾಗುತ್ತದೆ. ನೂತನವಾಗಿ ತಯಾರಿಸಲಾದ ಈ ಕಾರ್ಡಿಗೆ 'ಒನ್ ದೆಹಲಿ ಒನ್ ರೈಡ್' ಎಂದು ಕರೆಯಲಾಗಿದೆ.