ನವದೆಹಲಿ: ದೆಹಲಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರ ಮನೆಯಲ್ಲೇ ಕಳ್ಳತನ ಆಗಿರುವ ಬಗ್ಗೆ ವರದಿಯಾಗಿದೆ. ಸಚಿವ ಸತ್ಯೇಂದ್ರ ಜೈನ್ ಅವರ ಮನೆಯಲ್ಲಿ ಕಳ್ಳತನ ಆಗಿರುವ ವಿಷಯವನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ. ವಾಯುವ್ಯ ದೆಹಲಿಯ ಸರಸ್ವತಿ ವಿಹಾರ್ ಪ್ರದೇಶದ ಸತ್ಯೇಂದ್ರ ಜೈನ್ ಅವರ ಮನೆಯಲ್ಲಿ ಕಳ್ಳತನ ಆಗಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಸತ್ಯೇಂದ್ರ ಜೈನ್ ತಮ್ಮ ಮನೆಯಲ್ಲಿ ನಡೆದ ಕಳ್ಳತನದ ಬಗ್ಗೆ ಟ್ವೀಟ್ ಮಾಡಿ, 'ಸರಸ್ವತಿ ವಿಹಾರ್‌ನಲ್ಲಿರುವ ನನ್ನ ಮನೆಯಲ್ಲಿ ಕಳ್ಳತನ ಆಗಿದೆ. ಎಲ್ಲಾ ಮಹಡಿಗಳಲ್ಲೂ ಗಂಟೆಗಟ್ಟಲೆ ಈ ಘಟನೆ ನಡೆಸಿದ್ದಾರೆ. ಸಮಾಜವಿರೋಧಿ ಅಂಶಗಳು ಮತ್ತು ಕಳ್ಳರಿಗೆ ದೆಹಲಿ ಪೊಲೀಸರ ಬಗ್ಗೆ ಯಾವುದೇ ಭಯವಿಲ್ಲ' ಎಂದು ಅವರು ಟ್ವೀಟ್ ನಲ್ಲಿ ಬರೆದಿದ್ದಾರೆ.



ಈ ಮನೆಯು ಕಳೆದ 6 ತಿಂಗಳಿನಿಂದ ಮುಚ್ಚಲ್ಪಟ್ಟಿತ್ತು. ಮನೆಯ ಕೆಲವು ನಲ್ಲಿಗಳು ಮುರಿದಿವೆ ಮತ್ತು ಶೋಪೀಸ್ ವಸ್ತುಗಳು ಕಾಣೆಯಾಗಿವೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.