Delhi HC: `80 ವಯಸ್ಸಿನವರು ಸಾಕಷ್ಟು ಬದುಕಿದ್ದಾರೆ, ಯುವಕರಿಗೆ ಲಸಿಕೆ ಹಾಕಿ` ಕೇಂದ್ರಕ್ಕೆ ದೆಹಲಿ HC ಸಲಹೆ
Delhi HC: ಕೇಂದ್ರ ಸರ್ಕಾರದ ಲಸಿಕಾಕರಣ ನೀತಿಯನ್ನು ಮಂಗಳವಾರ ಪ್ರಶ್ನಿಸಿರುವ ದೆಹಲಿ HC (Delhi High Court), ಸರ್ಕಾರಕ್ಕೆ ಸಲಹೆ ನೀಡಿದ್ದು, ಯುವಕರು ಈ ದೇಶದ ಭವಿಷ್ಯರಾಗಿದ್ದು, ಅವರನ್ನು ರಕ್ಷಿಸಬೇಕಾಗಿದೆ ಎಂದಿದೆ.
Delhi HC: ಕೇಂದ್ರ ಸರ್ಕಾರದ ಲಸಿಕಾಕರಣ ನೀತಿಯನ್ನು ಮಂಗಳವಾರ ಪ್ರಶ್ನಿಸಿರುವ ದೆಹಲಿ HC (Delhi High Court), ಸರ್ಕಾರಕ್ಕೆ ಸಲಹೆ ನೀಡಿದ್ದು, ಯುವಕರು ಈ ದೇಶದ ಭವಿಷ್ಯರಾಗಿದ್ದು, ಅವರನ್ನು ರಕ್ಷಿಸಬೇಕಾಗಿದೆ ಎಂದಿದೆ. "ನಿಶ್ಚಿತವಾಗಿಯೂ ಇದೊಂದು ತೃಪ್ತಿದಾಯಕ ವ್ಯವಸ್ಥೆ ಅಲ್ಲ. ನೀವು ಆರಂಭದಲ್ಲಿ 45 ರಿಂದ 60 ವಯಸ್ಸಿನವರಿಗೆ ವ್ಯಾಕ್ಸಿನೆಶನ್ ಆರಂಭಿಸಿದಿರಿ ಮತ್ತು ಇದೀಗ ನೀವು ಅದನ್ನು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆರಂಭಿಸಿದ್ದೀರಿ. ಆದರೂ, ಅವರಿಗೆ ಲಸಿಕೆ ನೀಡುತ್ತಿಲ್ಲ ಎಂಬುದನ್ನು ನಾವು ನೋಡುತ್ತಿದ್ದೇವೆ. ಇಲ್ಲಿ ಲಸಿಕೆಯೇ ಇಲ್ಲ ಮತ್ತು ನೀವು ಅವರ ವ್ಯಾಕ್ಸಿನೆಶನ್ (Vaccination) ಕಾರ್ಯಕ್ರಮದ ಘೋಷಣೆ ಏಕೆ ಮಾಡಿರುವಿರಿ? ನಿಮಗೆ ಇಂತಹ ತಪ್ಪು ಘೋಷಣೆ ಮಾಡುವ ಕಾಲ ಯಾಕೆ ಬಂತು? ನಮಗೆ ಭವಿಷ್ಯದ ಮೇಲೆ ಹೂಡಿಕೆ ಮಾಡಬೇಕಾಗಿದೆ. ಭವಿಷ್ಯದಲ್ಲಿ ನಾವು ವಿಶ್ರಮಿಸಬೇಕಿಲ್ಲ. ನಾವು ನಮ್ಮ ದೇಶದ ಯುವಕರನ್ನು ಕಡೆಗಣಿಸುತ್ತಿದ್ದೇವೆ ಹಾಗೂ ಹಿರಿಯರಿಗೆ ಆದ್ಯತೆ ನೀಡುತ್ತಿದ್ದೇವೆ" ಎಂದು ನ್ಯಾಯಪೀಠ ಅಸಮಾಧಾನ ಹೊರಹಾಕಿದೆ.
"ಇಷ್ಟೊಂದು ಸಂಖ್ಯೆಯಲ್ಲಿ ಯುವಕರು ತಮ್ಮ ಪ್ರಾಣಕಳೆದುಕೊಂಡಿದ್ದಾರೆ. ಇದೇ ಯುವ ವರ್ಗ ದೇಶದ ಭವಿಷ್ಯವಾಗಿದೆ. ನಾವು ನಮ್ಮ ವಯಸ್ಸಿನ ಕೊನೆಯ ಹಂತದಲ್ಲಿದ್ದೇವೆ. ನಾವು ನಮ್ಮ ಭವಿಷ್ಯವನ್ನು ರಕ್ಷಿಸುವ ಅವಶ್ಯಕತೆ ಇದೆ, ನಾವು ನಮ್ಮ ಯುವಕರನ್ನು ರಕ್ಷಿಸಬೇಕಿದೆ" ಎಂದು ನ್ಯಾಯಾಲಯ ಹೇಳಿದೆ.
ಈ ಕುರಿತು ಟಿಪ್ಪಣಿಗಳನ್ನು ಮಾಡಿರುವ ಜಸ್ಟಿಸ್ ವಿಪಿನ್ ಸಾಂಘಿ ಹಾಗೂ ಜಸ್ಟಿಸ್ ಜಸ್ಮೀತ್ ಸಿಂಗ್ ಅವರನ್ನೊಳಗೊಂಡ ಪೀಠ, "ಮುಂದಿನ ದಾರಿಯನ್ನು ನಿರ್ಧರಿಸುವುದು ಸರ್ಕಾರದ ಕೆಲಸ" ಇಟಲಿ ಉದಾಹರಣೆಯನ್ನು ಉಲ್ಲೇಖಿಸಿದ ನ್ಯಾಯಪೀಠ, "ಇಟಲಿಯ ಆಸ್ಪತ್ರೆಗಳಲ್ಲಿ ಬೆಡ್ ಕೊರತೆಯಾದಾಗ ಅದು ವೃದ್ಧರನ್ನು ಆಯ್ಕೆ ಮಾಡಿದ್ದಕ್ಕಾಗಿ ಯುವಕರ ಕ್ಷಮೆಯಾಚಿಸಿದೆ" ಎಂದಿದೆ.
ಈ ಕುರಿತು ಮುಂದೆ ಟಿಪ್ಪಣಿ ಮಾಡಿರುವ ಹೈಕೋರ್ಟ್, "ನಮ್ಮ ಬಳಿ ವೃದ್ಧ ರೋಗಿಗಳಿಗೆ ಬೆಡ್ ಗಳಿಲ್ಲ, ನಿಮ್ಮ 80 ವಯಸ್ಸಿನ ವೃದ್ಧ ಈಗಾಗಲೇ ತನ್ನ ಜೀವನ ಬದುಕಿದ್ದಾನೆ. ಆದರೆ, ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ, ಆದರ್ಶವಾಗಿ ಎಲ್ಲರನ್ನು ರಕ್ಷಿಸಬೇಕು ಹಾಗೂ ಒಂದು ವೇಳೆ ನಿಮ್ಮ ಬಳಿ ಸಂಪನ್ಮೂಲದ ಕೊರತೆ ಇದ್ದರೆ, ಯುವಕರ ಬಗ್ಗೆ ಯೋಚಿಸುವ ನಿಧಾರ ಮಾಡಬೇಕು. ನಾವು ನಮ್ಮ ಸಹಾಯವನ್ನು ಮಾಡದೆ ಹೋದಲ್ಲಿ, ದೇವರು ಕೂಡ ನಮ್ಮ ಸಹಾಯ ಮಾಡುವುದಿಲ್ಲ. ಏಕೆಂದರೆ ನಮ್ಮ ಬಳಿ ಅಂಕಿ-ಸಂಖ್ಯೆಗಳಿವೆ" ಎಂದು ಪೀಠ ಹೇಳಿದೆ.
" ಕೊರೊನಾ ಲಸಿಕೆಗೆ ಕೊರತೆ ಇಲ್ಲ, ಆದರೆ ಸ್ವಲ್ಪ ತಾಳ್ಮೆ ಬೇಕಾಗಿದೆ"
ಈ ಕುರಿತು ಸೋಮವಾರ ಕೇಂದ್ರ ಸರ್ಕಾರ (Central Government) ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದ ದೆಹಲಿ ಹೈಕೋರ್ಟ್, ಆಂಫೊಟೆರಿಸಿನ್-ಬಿ ಭಾರಿ ಕೊರತೆಯ ನಡುವೆ ನ್ಯಾಯಪೀಠದ ಮುಂದೆ ನೀತಿ ಪ್ರಸ್ತುತಪಡಿಸಿ ಔಷಧಿಯ ಪ್ರಾಥಮಿಕತೆ ತಿಳಿಯಪಡಿಸಬೇಕು, ಏಕೆಂದರೆ ಮ್ಯೂಕರ್ಮೈಕೊಸಿಸ್ (Mucormycosis) ಚಿಕಿತ್ಸೆಯಲ್ಲಿ ಬಳಕೆಯಾಗುವ ಏಕಮಾತ್ರ ಮತ್ತು ಅಂತಿಮ ಔಷಧಿಯಾಗಿದೆ. ಈ ಔಷಧಿಯ ಪೂರೈಕೆ ಕಡಿಮೆ ಇರುವವರೆಗೆ ಕೆಲ ವಯೋಮಾನದವರನ್ನು ಅಥವಾ ವರ್ಗಗಳನ್ನು ಹೊರಗಿಡಲು ಅಧಿಕಾರಿಗಳು ಕೆಲ "ಕ್ರೂರ ನಿರ್ಧಾರ" ತೆಗೆದುಕೊಳ್ಳಬೇಕಾಗಿದೆ ಎಂದು ಜಸ್ಟಿಸ್ ಸಾಂಘಿ ಹಾಗೂ ಜಸ್ಟಿಸ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ-ಭಾರತಕ್ಕೆ ತಲುಪಿದ 3 ಮಿಲಿಯನ್ ಸ್ಪುಟ್ನಿಕ್ V ಲಸಿಕೆ!
" ಒಂದು ವೇಳೆ ಇಬ್ಬರು ರೋಗಿಗಳಿಗೆ ಈ ಔಷಧಿಯ ಅವಶ್ಯಕತೆ ಇದ್ದು, ಅವರಲ್ಲಿ ಓರ್ವ ರೋಗಿ 80 ವರ್ಷ ಹಾಗೂ ಮತ್ತೊಬ್ಬ ರೋಗಿ 35 ವಯಸ್ಸಿನವನಾಗಿದ್ದರೆ ಮತ್ತು ಔಷಧಿಯ ಒಂದು ಡೋಸ್ ಮಾತ್ರ ಇದ್ದರೆ, ಓರ್ವ ರೋಗಿಯನ್ನು ಬಿಡಬೇಕಾಗುತ್ತದೆ. "ಒಂದು ವೇಳೆ ನಮಗೆ ಆ ಕ್ರೂರ ನಿರ್ಧಾರದ ಆಯ್ಕೆ ಮಾಡಬೇಕಾದರೆ, ಆ ಕುರಿತು ನಾವು ನೀತಿ ಸಿದ್ಧಪಡಿಸಬೇಕು. ಇಂದು ನಾವು ಅಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಈ ಔಷಧಿಯ ಒಂದು ಡೋಸ್ ಅನ್ನು 80 ವಯಸ್ಸಿನ ವೃದ್ಧನಿಗೆ ನೀಡುವಿರೋ ಅಥವಾ ಇಬ್ಬರು ಮಕ್ಕಳಿರುವ 35 ವಯಸ್ಸಿನ ವ್ಯಕ್ತಿಗೆ?" ಎಂದು ಪ್ರಶ್ನಿಸಿದ್ದಾರೆ. ಇದಲ್ಲದೆ ಪ್ರಕರಣದಲ್ಲಿ ನಿರ್ದೇಶನಗಳ ಜೊತೆಗೆ ಮಂಗಳವಾರ ವಾಪಸ್ ಬರಲು ಹೈಕೋರ್ಟ್ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ಹೇಳಿತ್ತು.
ಇದನ್ನೂ ಓದಿ- ವೈಜ್ಞಾನಿಕವಾಗಿ ಸಾಬೀತಾಗುವವರೆಗೆ ಲಸಿಕೆಯನ್ನು ಮಿಶ್ರಣ ಮಾಡುವ ಪ್ರಶ್ನೆಯೇ ಇಲ್ಲ ಎಂದ ಕೇಂದ್ರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ