" ಕೊರೊನಾ ಲಸಿಕೆಗೆ ಕೊರತೆ ಇಲ್ಲ, ಆದರೆ ಸ್ವಲ್ಪ ತಾಳ್ಮೆ ಬೇಕಾಗಿದೆ"

'ಕೊರೊನಾ ಲಸಿಕೆಗೆ ಕೊರತೆಯಿಲ್ಲ, ಆದರೆ ಸ್ವಲ್ಪ ತಾಳ್ಮೆಯ ಅಗತ್ಯವಿದೆ ಎಂದು ಐಸಿಎಂಆರ್ ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ ಹೇಳಿದ್ದಾರೆ.

Last Updated : Jun 1, 2021, 08:02 PM IST
  • 'ಕೊರೊನಾ ಲಸಿಕೆಗೆ ಕೊರತೆಯಿಲ್ಲ, ಆದರೆ ಸ್ವಲ್ಪ ತಾಳ್ಮೆಯ ಅಗತ್ಯವಿದೆ ಎಂದು ಐಸಿಎಂಆರ್ ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ ಹೇಳಿದ್ದಾರೆ.
  • 'ಭಾರತದ ಜನಸಂಖ್ಯೆ ಅಮೇರಿಕಾಗಿಂತ ನಾಲ್ಕು ಪಟ್ಟು ಹೆಚ್ಚಿದೆ, ಆದ್ದರಿಂದ ಅದರಂತೆ ನೀವು ಒಂದು ತಿಂಗಳೊಳಗೆ ಹಾಕಬೇಕೆಂದು ಬಯಸಿದರೆ ಸ್ವಲ್ಪ ಕಾಯಬೇಕಾಗುತ್ತದೆ.
 " ಕೊರೊನಾ ಲಸಿಕೆಗೆ ಕೊರತೆ ಇಲ್ಲ, ಆದರೆ ಸ್ವಲ್ಪ ತಾಳ್ಮೆ ಬೇಕಾಗಿದೆ" title=

ನವದೆಹಲಿ: 'ಕೊರೊನಾ ಲಸಿಕೆಗೆ ಕೊರತೆಯಿಲ್ಲ, ಆದರೆ ಸ್ವಲ್ಪ ತಾಳ್ಮೆಯ ಅಗತ್ಯವಿದೆ ಎಂದು ಐಸಿಎಂಆರ್ ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ ಹೇಳಿದ್ದಾರೆ.

'ಭಾರತದ ಜನಸಂಖ್ಯೆ ಅಮೇರಿಕಾಗಿಂತ ನಾಲ್ಕು ಪಟ್ಟು ಹೆಚ್ಚಿದೆ, ಆದ್ದರಿಂದ ಅದರಂತೆ ನೀವು ಒಂದು ತಿಂಗಳೊಳಗೆ ಹಾಕಬೇಕೆಂದು ಬಯಸಿದರೆ ಸ್ವಲ್ಪ ಕಾಯಬೇಕಾಗುತ್ತದೆ.ಜುಲೈ ಮಧ್ಯ ಅಥವಾ ಅಗಸ್ಟ್ ಆರಂಭದಲ್ಲಿ ನಾವು ಪ್ರತಿದಿನಕ್ಕೆ ಒಂದು ಕೋಟಿಯಷ್ಟು ಲಸಿಕೆಯನ್ನು ಹೊಂದಿರುತ್ತೇವೆ' ಎಂದು ಅವರು ಹೇಳಿದರು.

ಇದನ್ನೂ ಓದಿ: ವೈಜ್ಞಾನಿಕವಾಗಿ ಸಾಬೀತಾಗುವವರೆಗೆ ಲಸಿಕೆಯನ್ನು ಮಿಶ್ರಣ ಮಾಡುವ ಪ್ರಶ್ನೆಯೇ ಇಲ್ಲ ಎಂದ ಕೇಂದ್ರ

ಇತ್ತೀಚಿಗೆ ಇಬ್ಬರು ಕೇಂದ್ರ ಸಚಿವರು ನೀಡಿದ ಹೇಳಿಕೆ ಹಾಗೂ ಸುಪ್ರೀಂಗೆ ಸರ್ಕಾರ ನೀಡಿರುವ ಪ್ರತಿಕ್ರಿಯೆಗೆ ಅನುಸಾರವಾಗಿ ಐಸಿಎಂಆರ್ ಮುಖ್ಯಸ್ಥರ ಹೇಳಿಕೆ ಬಂದಿದೆ.ಕಳೆದ ತಿಂಗಳು ಉನ್ನತ ಕೇಂದ್ರ ಸಲಹೆಗಾರರೊಬ್ಬರು ಡಿಸೆಂಬರ್ ವೇಳೆಗೆ 200 ಕೋಟಿಗೂ ಅಧಿಕ ಪ್ರಮಾಣ ಲಭ್ಯವಿರುತ್ತದೆ ಎಂದು ಹೇಳಿದ್ದರು.

ದೇಶವು ಪ್ರಸ್ತುತ ತಿಂಗಳಿಗೆ ಸುಮಾರು 8.5 ಕೋಟಿ ಡೋಸ್ ಅಥವಾ ದಿನಕ್ಕೆ ಸುಮಾರು 28.33 ಲಕ್ಷ ಉತ್ಪಾದಿಸುತ್ತಿದೆ ಎಂದು ಕೇಂದ್ರವು ಕಳೆದ ವಾರ ಕೇರಳ ಹೈಕೋರ್ಟ್‌ಗೆ ತಿಳಿಸಿದ್ದು, ಜುಲೈ ವೇಳೆಗೆ ಉತ್ಪಾದನೆ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಕೋವಿಶೀಲ್ಡ್ (Covishield vaccine) ಮತ್ತು ಕೊವಾಕ್ಸಿನ್ ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದು, ಸ್ಪುಟ್ನಿಕ್ ವಿ ಉತ್ಪಾದನೆಯೂ ಪ್ರಾರಂಭವಾಗಿದೆ.

ಇದನ್ನೂ ಓದಿ: Sputnik V Vaccines : ಭಾರತಕ್ಕೆ ತಲುಪಿದ 3 ಮಿಲಿಯನ್ ಸ್ಪುಟ್ನಿಕ್ V ಲಸಿಕೆ!

ಫಿಜರ್ ಮತ್ತು ಜಾನ್ಸನ್ ಮತ್ತು ಜಾನ್ಸನ್ ಅವರ ಲಸಿಕೆಗಳನ್ನು ಶೀಘ್ರದಲ್ಲೇ ಅನುಮೋದಿಸುವ ನಿರೀಕ್ಷೆಯಿದೆ, ಮತ್ತು ಫಾರ್ಮಾ ಕಂಪನಿ ಸಿಪ್ಲಾ ಮಾಡರ್ನಾ ಅವರ ಸಿಂಗಲ್-ಡೋಸ್ ಬೂಸ್ಟರ್ ಲಸಿಕೆಯನ್ನು ಭಾರತಕ್ಕೆ ತರಲು ತ್ವರಿತಗತಿಯ ಅನುಮೋದನೆ ಕೋರಿದೆ.

ಇದನ್ನೂ ಓದಿ: 12th Class Board Exams: ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ

ಲಸಿಕೆ ಸರಬರಾಜು ಕೇಂದ್ರ ಮತ್ತು ರಾಜ್ಯಗಳ ನಡುವೆ ವಿವಾದದ ಕೇಂದ್ರವಾಗಿ ಮಾರ್ಪಟ್ಟಿದೆ, ಹಲವು ರಾಜ್ಯಗಳು ತಮ್ಮಲ್ಲಿ ಸಾಕಷ್ಟು ಲಸಿಕೆ ಪ್ರಮಾಣದ ಸಂಗ್ರಹ ಇಲ್ಲ  ಎಂದು ದೂರು ನೀಡಿವೆ.ದೆಹಲಿ ಮತ್ತು ತಮಿಳುನಾಡಿನಂತಹ ಕೆಲವು ರಾಜ್ಯಗಳು ಲಸಿಕೆ ನೀಡುವುದನ್ನು ನಿಲ್ಲಿಸಿದ್ದರೆ, ಬಿಜೆಪಿ ಆಳ್ವಿಕೆಯ ಉತ್ತರ ಪ್ರದೇಶದಂತಹ ಇತರ ರಾಜ್ಯಗಳು ವಿದೇಶದಿಂದ ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಜಾಗತಿಕ ಟೆಂಡರ್‌ಗಳನ್ನು ಕರೆದಿವೆ.

ಇನ್ನೊಂದೆಡೆ ರಾಜ್ಯಗಳ ಆರೋಪವನ್ನು ಕೇಂದ್ರ ಸರ್ಕಾರವು ಅಲ್ಲಗಳೆದಿದ್ದು,  ಹಿಂದಿನ ಮಂಗಳವಾರ ಇದುವರೆಗೆ 23 ಕೋಟಿ ಡೋಸ್‌ಗಳನ್ನು ಒದಗಿಸಲಾಗಿದೆ ಮತ್ತು 1.57 ಕೋಟಿ ಡೋಸ್‌ಗಳು ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ ಎಂದು ಹೇಳಿದೆ.

ಲಸಿಕೆ ಲಭ್ಯತೆ ಮತ್ತು ಬೆಲೆ ಸೇರಿದಂತೆ ಕೇಂದ್ರದ ವ್ಯಾಕ್ಸಿನೇಷನ್ ನೀತಿಯಲ್ಲಿ ವಿವಿಧ ನ್ಯೂನತೆಗಳನ್ನು ಸುಪ್ರೀಂ ಕೋರ್ಟ್ ಎತ್ತಿದ್ದು ಮತ್ತು ಅದರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಎರಡು ವಾರಗಳ ಕಾಲಾವಕಾಶ ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

 

Trending News