ದೆಹಲಿ-ಲಾಹೋರ್ ಬಸ್ ಸೇವೆ ಮೊದಲಿನಂತೆ ಮುಂದುವರೆಯಲಿದೆ: ಡಿಟಿಸಿ
ದೆಹಲಿ ಗೇಟ್ ಬಳಿಯಿರುವ ಅಂಬೇಡ್ಕರ್ ಕ್ರೀಡಾಂಗಣದ ಬಸ್ ನಿಲ್ದಾಣದಿಂದ ಲಾಹೋರ್ ಗೆ ಡಿಟಿಸಿ ಬಸ್ ಗಳು ಕಾರ್ಯನಿರ್ವಹಿಸುತ್ತವೆ.
ನವದೆಹಲಿ: ದೆಹಲಿ-ಲಾಹೋರ್ ನಡುವಿನ ಬಸ್ ಸೇವೆ ಮೊದಲಿನಂತೆ ಮುಂದುವರೆಯಲಿದೆ ಎಂಡಿ ಬಿದ್ಜವರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪುಲ್ವಾಮ ದಾಳಿಯ ನಂತರ ಬಸ್ ಸೇವೆಯ ಮೇಲೆ ಪರಿಣಾಮ ಬೀರಿದೆ. ಬಳಿಕ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ದೆಹಲಿ-ಲಾಹೋರ್ ನಡುವಿನ ಬಸ್ ಸೇವೆ ಮುಂದುವರೆಯುತ್ತಿದ್ದು, ಬುಧವಾರ ಸಹ ಹತ್ತು ಜನರು ಲಾಹೋರ್ ಗೆ ಬಸ್ ನಲ್ಲಿ ತೆರಳಿದ್ದಾರೆ ಎಂದು ದೆಹಲಿ ಸಾರಿಗೆ ಇಲಾಖೆಯ (ಡಿಟಿಸಿ) ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಹೇಳಿದರು.
ದೆಹಲಿ ಗೇಟ್ ಬಳಿಯಿರುವ ಅಂಬೇಡ್ಕರ್ ಕ್ರೀಡಾಂಗಣದ ಬಸ್ ನಿಲ್ದಾಣದಿಂದ ಲಾಹೋರ್ ಗೆ ಡಿಟಿಸಿ ಬಸ್ ಗಳು ಕಾರ್ಯನಿರ್ವಹಿಸುತ್ತವೆ. ಈ ಬಸ್ ಗಳು ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಲಾಹೋರ್ ಗೆ ತೆರಳುತ್ತವೆ. ತಿ ಮಂಗಳವಾರ, ಗುರುವಾರ ಮತ್ತು ಶನಿವಾರದಂದು ದೆಹಲಿಗೆ ಪಾಕಿಸ್ತಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಪಿಟಿಡಿಸಿ) ಬಸ್ ಸೇವೆ ಕಲ್ಪಿಸಿದೆ.
ಪೂರ್ವ ಯೋಜನೆಯ ಪ್ರಕಾರ ಸಂಜೋತಾ ಎಕ್ಸ್ಪ್ರೆಸ್ ಕಾರ್ಯಾಚರಣೆ:
ವಾಘಾದಿಂದ ಲಾಹೋರ್ಗೆ ಸಂಜೋತಾ ಎಕ್ಸ್ಪ್ರೆಸ್ ಸನ್ನು ರದ್ದುಪಡಿಸಿದ ಬಗ್ಗೆ ವರದಿಗಳಾಗಿದ್ದವು, ಆದರೆ ಈ ಬಗ್ಗೆ ಭಾರತೀಯ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದ್ದು, ಪೂರ್ವ ಯೋಜನೆಯ ಪ್ರಕಾರ ಸಂಜೋತಾ ಎಕ್ಸ್ಪ್ರೆಸ್ನ ಕಾರ್ಯಾಚರಣೆ ನಡೆಸಲಿದೆ ಎಂದಿದೆ. ಉತ್ತರ ರೈಲ್ವೇ ವಕ್ತಾರ ದೀಪಕ್ ಕುಮಾರ್ ಭಾರತದಲ್ಲಿ ಸಂಜೋತಾ ಎಕ್ಸ್ಪ್ರೆಸ್ ಕಾರ್ಯಾಚರಣೆಯ ಬಗ್ಗೆ ಮಾತನಾಡುತ್ತಾ, ಈ ರೈಲು ಅದರ ವೇಳಾಪಟ್ಟಿಯ ಅನುಸಾರವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದರು.
ಸಂಜೋತಾ ಎಕ್ಸ್ಪ್ರೆಸ್ ದೆಹಲಿಯಿಂದ ವಾರಕ್ಕೆ ಎರಡು ದಿನ ಬುಧವಾರ ಮತ್ತು ಭಾನುವಾರದಂದು ಚಲಿಸುತ್ತದೆ. ಲಾಹೋರ್ನಿಂದ ಸೋಮವಾರ ಮತ್ತು ಗುರುವಾರ ಹಿಂದಿರುಗುತ್ತದೆ. ಏತನ್ಮಧ್ಯೆ, ಬುಧವಾರ ರಾತ್ರಿ ನಿಗದಿತ ಸಮಯದ ಪ್ರಕಾರ ರಾತ್ರಿ 11:10ಕ್ಕೆ ಓಲ್ಡ್ ದೆಹಲಿಯಿಂದ ಹೊರಡಲಿದೆ. ಈ ರೈಲಿನಲ್ಲಿ ಎಸಿ ಕೋಚ್ ನಲ್ಲಿ ನಾಲ್ಕು ಪ್ರಯಾಣಿಕರು, ಸಾಮಾನ್ಯ ಕೋಚ್ ನಲ್ಲಿ 22 ಪ್ರಯಾಣಿಕರು ಪ್ರಯಾಣಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿ ಮತ್ತು ಅಟಾರಿ ನಡುವೆ ಈ ರೈಲಿಗೆ ಯಾವುದೇ ಕಮರ್ಷಿಯಲ್ ಸ್ಟಾಪ್ ಇಲ್ಲ.