ಚುನಾವಣೆಯಲ್ಲಿ ಕಪ್ಪುಹಣದ ಬಳಕೆ ಮೇಲೆ ನೋಟು ನಿಷೇಧ ಯಾವುದೇ ಪ್ರಭಾವ ಬೀರಿಲ್ಲ-ಒಪಿ ರಾವತ್
ಚುನಾವಣೆಯಲ್ಲಿ ಹಣದ ದುರ್ಬಳಿಕೆ ಮೇಲೆ ನೋಟು ನಿಷೇಧ ಪರಿಣಾಮ ಬಿರಿಲ್ಲ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ ರಾವತ್ ಸೋಮವಾರ ಹೇಳಿದ್ದಾರೆ.
ನವದೆಹಲಿ: ಚುನಾವಣೆಯಲ್ಲಿ ಹಣದ ದುರ್ಬಳಿಕೆ ಮೇಲೆ ನೋಟು ನಿಷೇಧ ಪರಿಣಾಮ ಬಿರಿಲ್ಲ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ ರಾವತ್ ಸೋಮವಾರ ಹೇಳಿದ್ದಾರೆ.
ನೋಟು ನಿಷೇಧದ ನಂತರ ಚುನಾವಣಾ ಸಮಯದಲ್ಲಿ ಆಗುತ್ತಿರುವ ಹಣದ ದುರ್ಬಳಕೆ ಕಡಿಮೆಯಾಗಲಿದೆ ಎಂದು ಭಾವಿಸಲಾಗಿತ್ತು ಆದರೆ ಅಂಕಿ ಅಂಶಗಳನ್ನು ನೋಡಿದಾಗ ಇದು ಸ್ಪಷ್ಟವಾಗುತ್ತದೆ.ಈ ಹಿಂದಿನ ಚುನಾವಣೆಗಿಂತಲೂ ಅಧಿಕ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಅಲ್ಲದೆ ಚುನಾವಣಾ ಅವಧಿಯಲ್ಲಿ ಬಳಸಳಾಗಿರುವ ಹಣದ ಮೇಲೆ ಯಾವುದೇ ರೀತಿಯ ನಿಯಂತ್ರಣವಿಲ್ಲ ಎಂದು ಕಾಣುತ್ತದೆ ಎಂದು ಅವರು ತಿಳಿಸಿದರು.ಕಳೆದ ವಾರ ಮುಖ್ಯ ಚುನಾವಣಾ ಹುದ್ದೆಯಿಂದ ನಿವೃತ್ತಿ ಹೊಂದಿದ್ದ ರಾವತ್ ಅವರು ಚುನಾವಣಾ ಸಮಿತಿಯ ಮುಖ್ಯಸ್ಥರಾಗಿ ಚುನಾವಣಾ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳು ಮತ್ತು ಹಣದ ಬಳಕೆ ವಿಚಾರವಾಗಿ ಕಾನೂನು ಸಚಿವಾಲಯಕ್ಕೆ ಈ ಶಿಫಾರಸ್ಸು ಮಾಡಲಿಕ್ಕೆ ಆಗಲಿಲ್ಲವೆಂದು ತಿಳಿಸಿದರು.
ಇನ್ನು ರಾಜಕೀಯ ಪಕ್ಷಗಳ ನಿಧಿ ಸಹಾಯದಲ್ಲಿ ಪಾರದರ್ಶಕತೆ ತರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು "ಇದೊಂದು ಧೀರ್ಘಕಾಲಿನ ಸುಧಾರಣೆ" ಎಂದು ಅವರು ತಿಳಿಸಿದರು.