LPG Price : 7 ವರ್ಷಗಳಲ್ಲಿ ಡಬಲ್ ಆದ ಎಲ್ ಪಿಜಿ ದರ..!
ಕಳೆದ ಮೂರು ತಿಂಗಳಲ್ಲಿ LPG ಸಿಲಿಂಡರ್ ಬಳಕೆ 7.3% ರಷ್ಟು ಹೆಚ್ಚಾಗಿದೆ ಎಂದು ರಾಜ್ಯ ತೈಲ ಕಂಪನಿಗಳು ತಿಳಿಸಿವೆ. ಪ್ರಧಾನ್ ಮಂತ್ರಿ ಉಜ್ವಾಲಾ ಯೋಜನೆಯ ಫಲಾನುಭವಿಗಳ ಬಳಕೆ ಕೂಡ ಶೇಕಡಾ 20 ರಷ್ಟು ಹೆಚ್ಚಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಾರ, PMUY ನಲ್ಲಿ LPG ಬಳಕೆ ಹೆಚ್ಚಾಗಿರುವುದು ಕಂಡು ಬಂದಿದೆ.
ನವದೆಹಲಿ : LPG Price Hike : ಮಾರ್ಚ್ 1, 2014, ಅಂದರೆ 7 ವರ್ಷಗಳ ಹಿಂದೆ 14.2 ಕೆಜಿ ಅಡುಗೆ ಅನಿಲದ ಸಿಲಿಂಡರ್ ಬೆಲೆ 410.5 ರೂ. ಇತ್ತು. ಆದರೆ ಇಂದು ಅಂದರೆ, 2021 ರ ಮಾರ್ಚ್‌ನಲ್ಲಿ ಅಡುಗೆ ಅನಿಲ ಸಿಲಿಂಡರ್ ನ ಬೆಲೆ ಸುಮಾರು 819 ರೂ.ಗೆ ಏರಿದೆ. ಆದರೆ ಬೆಲೆ ಏರಿಕೆಯ ಮಧ್ಯೆಯೂ ಅಡುಗೆ ಅನಿಲದ ಬಳಕೆ ಕೂಡ ಹೆಚ್ಚಾಗಿದೆ.
ಎಲ್ ಪಿಜಿ ಬೆಲೆ ಏರಿಕೆಯಾದರೂ ಬಳಕೆ ಕಡಿಮೆಯಾಗಿಲ್ಲ :
ಕಳೆದ ಮೂರು ತಿಂಗಳಲ್ಲಿ LPG ಸಿಲಿಂಡರ್ ಬಳಕೆ 7.3% ರಷ್ಟು ಹೆಚ್ಚಾಗಿದೆ ಎಂದು ರಾಜ್ಯ ತೈಲ ಕಂಪನಿಗಳು ತಿಳಿಸಿವೆ. ಪ್ರಧಾನ್ ಮಂತ್ರಿ ಉಜ್ವಾಲಾ ಯೋಜನೆಯ ಫಲಾನುಭವಿಗಳ ಬಳಕೆ ಕೂಡ ಶೇಕಡಾ 20 ರಷ್ಟು ಹೆಚ್ಚಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಾರ, PMUY ನಲ್ಲಿ LPG ಬಳಕೆ ಹೆಚ್ಚಾಗಿರುವುದು ಕಂಡು ಬಂದಿದೆ.
ಇದನ್ನೂ ಓದಿ : LPG Booking: ಕಡಿಮೆ ಬೆಲೆಯಲ್ಲಿ ಸಿಲಿಂಡರ್ ಖರೀದಿಸಲು ಸುವರ್ಣಾವಕಾಶ..!
3 ತಿಂಗಳಲ್ಲಿ ಎಲ್‌ಪಿಜಿ ಬೆಲೆಯಲ್ಲಿ 175 ರೂ ಹೆಚ್ಚಳ :
ಡಿಸೆಂಬರ್ 2020 ರಿಂದ ಫೆಬ್ರವರಿ 2021 ರವರೆಗೆ, ಎಲ್‌ಪಿಜಿ ಬೆಲೆಯಲ್ಲಿ 175 ರೂ.ಗಳಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ, ಪ್ರಧಾನ್ ಮಂತ್ರಿ ಉಜ್ವಾಲಾ ಯೋಜನೆಯ (Ujwal yojane) ಫಲಾನುಭವಿಗಳ ಸಂಖ್ಯೆಯಲ್ಲಿಯೂ 19.5% ಎಚ್ಚಳ ಕಂಡಿದೆ. 8 ಮಿಲಿಯನ್ ಕುಟುಂಬಗಳು ಪಿಎಂಯುವೈ ವ್ಯಾಪ್ತಿಗೆ ಒಳಪಟ್ಟಿವೆ. ಈ ಕುಟುಂಬಗಳಿಗೆ ಅದು 2016ರಿಂದ ಉಚಿತ ಗ್ಯಾಸ್ ಕನೆಕ್ಷನ್ (free gas connection) ಸಿಗುತ್ತಿದೆ.
7 ವರ್ಷಗಳಲ್ಲಿ ದ್ವಿಗುಣಗೊಂಡ ಎಲ್‌ಪಿಜಿ ದರ :
ಎಲ್ ಪಿಜಿ ಬೆಲೆ ಏರಿಕೆಯಾದ ನಂತರ ಪ್ರಧಾನ್ ಮಂತ್ರಿ ಉಜ್ವಾಲಾ ಯೋಜನೆಯ ಕೆಲವು ಫಲಾನುಭವಿಗಳು ಸಿಲಿಂಡರ್‌ಗಳ ಖರೀದಿಯನ್ನು ನಿಲ್ಲಿಸಿದ್ದಾರೆ ಎಂಬ ವರದಿಗಳು ಬಂದಿವೆ. ಬಿಜೆಪಿ (BJP) ಅಧಿಕಾರಕ್ಕೆ ಬಂದ 7 ವರ್ಷಗಳಲ್ಲಿ ಎಲ್‌ಪಿಜಿಯ ಬೆಲೆ ದ್ವಿಗುಣಗೊಂಡಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಲೋಕಸಭೆಯಲ್ಲಿ ಹೇಳಿದ್ದಾರೆ. ಮಾರ್ಚ್ 1, 2014 ರಂದು ಎಲ್‌ಪಿಜಿಯ ಬೆಲೆ ಪ್ರತಿ ಸಿಲಿಂಡರ್‌ಗೆ 410.5 ರೂ. ಆಗಿತ್ತು. ಈಗ ಅದು 819 ರೂ.ಗೆ ಏರಿಕೆಯಾಗಿದೆ.
ಇದನ್ನೂ ಓದಿ : LPG Gas Cylinder - ದುಬಾರಿ LPG Cylinder ನಿಂದ ನೆಮ್ಮದಿ, ಈ ರೀತಿ ಸಿಲಿಂಡರ್ ಬುಕ್ ಮಾಡಿ ಹಣ ಉಳಿತಾಯ ಮಾಡಿ
ಕರೋನಾ ಕಾಲದಲ್ಲಿ ಉಚಿತವಾಗಿ ಎಲ್‌ಪಿಜಿ ಸಿಲಿಂಡರ್ ವಿತರಣೆ :
"ಪ್ರಸಕ್ತ ಹಣಕಾಸು ವರ್ಷದ ಆರಂಭಿಕ ತ್ರೈಮಾಸಿಕಗಳಲ್ಲಿ ಎಲ್ ಪಿಜಿ ಬಳಕೆ 23.2% ಹೆಚ್ಚಾಗಿದೆ. ಕರೋನಾ ಸಾಂಕ್ರಾಮಿಕ (Coronavirus) ರೋಗದ ವಿರುದ್ಧ ಹೋರಾಡಲು ಉಜ್ವಾಲಾ ಯೋಜನೆಯ ಫಲಾನುಭವಿಗಳಿಗೆ ಉಚಿತ ಸಿಲಿಂಡರ್ ಗಳನ್ನು ವಿತರಿಸಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಉಜ್ವಾಲಾ ಯೋಜನೆಯಲ್ಲೂ ಹೆಚ್ಚಿದ ಎಲ್ ಪಿಜಿ ಬಳಕೆ :
ಕಳೆದ ಮೂರು ತಿಂಗಳಲ್ಲಿ ಉಜ್ವಾಲಾ ಯೋಜನೆಯ ಫಲಾನುಭವಿಗಳು 10.1 ಲಕ್ಷ ಟನ್ ಎಲ್ಪಿಜಿಯನ್ನು ಬಳಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಎಲ್‌ಪಿಜಿ ಸಿಲಿಂಡರ್ ಬಳಕೆಯು 10.3% ರಷ್ಟು ಏರಿಕೆಯನ್ನು ಕಂಡಿದೆ ಎಂದು ತೈಲ ಕಂಪನಿಗಳು ಹೇಳುತ್ತವೆ. ಲಾಕ್ ಡೌನ್ (Lockdown) ಸಮಯದಲ್ಲಿ, ಬಡವರಿಗೆ ಆಗುವ ಅನಾನುಕೂಲವನ್ನು ತಪ್ಪಿಸುವ ಸಲುವಾಗಿ, 9,670 ಕೋಟಿ ಮೌಲ್ಯದ ಎಲ್ ಪಿಜಿಯನ್ನು ಉಜ್ವಾಲಾ ಯೋಜನೆಯ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.