ನವದೆಹಲಿ: LPG Gas Cylinder - ಅಡುಗೆ ಅನಿಲ ಬೆಲೆ ಏರಿಕೆಯಿಂದ (LPG Price Hike) ಜನಸಾಮಾನ್ಯರು ಪರದಾಡುವ ಸ್ಥಿತಿ ಬಂದೊದಗಿದೆ. ಈ ವರ್ಷ ಇದುವರೆಗೆ ಅಡುಗೆ ಅನಿಲ (LPG) ಸಿಲಿಂಡರ್ ಬೆಲೆಯಲ್ಲಿ ರೂ.125 ಏರಿಕೆಯಾಗಿದೆ. ಒಂದು ವೇಳೆ ನೀವೂ ಕೂಡ ಸಿಲಿಂಡರ್ ಬೆಲೆ ಏರಿಕೆಯಿಂದ ಪರದಾಡುತ್ತಿದ್ದರೆ, ಈ ಸುದ್ದಿ ನಿಮಗೆ ಕೊಂಚ ನೆಮ್ಮದಿಯನ್ನು ನೀಡಲಿದೆ. ಇದಕ್ಕಾಗಿ ನೀವು ಸ್ವಲ್ಪ ಜಾಣ್ಮೆಯಿಂದ ಸಿಲಿಂಡರ್ ಬುಕ್ ಮಾಡಿ, ಹಣವನ್ನು ಪಾವತಿಸಬೇಕು. ಇದರಿಂದ ನಿಮಗೆ ಹೆಚ್ಚಾಗುತ್ತಿರುವ ಸಿಲಿಂಡರ್ ಬೆಲೆಯಿಂದ ಕೊಂಚ ನೆಮ್ಮದಿ ಸಿಗಲಿದೆ. LPG Cylinder ಬುಕಿಂಗ್ ಮೇಲೆ ರೂ.50 ರಿಯಾಯಿತಿ ನೀಡಲಾಗುತ್ತಿರುವ ಮಾಹಿತಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ತನ್ನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಪ್ರಕಟಿಸಿದೆ.
You can now book and pay for your #Indane refill through amazon pay and get flat Rs.50 cashback on your first transaction. #LPG #InstantBooking pic.twitter.com/2OoC4rcm2f
— Indian Oil Corp Ltd (@IndianOilcl) March 5, 2021
ಇದನ್ನೂ ಓದಿ-Amazon ಮೆಗಾ ಹೋಂ ಸಮ್ಮರ್ ಸೇಲ್ ಆರಂಭ : ಸಿಗಲಿದೆ ಬಂಪರ್ ಡಿಸ್ಕೌಂಟ್
ಬುಕಿಂಗ್ ಹಾಗೂ ಪೇಮೆಂಟ್ ಪ್ರಕ್ರಿಯೆ ಏನು?
ಇದಕ್ಕಾಗಿ ನೀವು ನಿಮ್ಮ ಅಮೆಜಾನ್ ಆಪ್ ನಲ್ಲಿರುವ ಪೇಮೆಂಟ್ ಆಯ್ಕೆಯನ್ನು ಆಯ್ದುಕೊಳ್ಳಬೇಕು. ಬಳಿಕ ನೀವು ನಿಮ್ಮ ಗ್ಯಾಸ್ ಸರ್ವಿಸ್ ಪ್ರೊವೈಡರ್ ಅನ್ನು ಆಯ್ಕೆ ಮಾಡಿ, ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆ ಅಥವಾ LPG ಸಂಖ್ಯೆಯನ್ನು ನಮೂದಿಸಿ. ಬಳಿಕ ನೀವು ಅಮೆಜಾನ್ ಪೆ (LPG On Amazon Pay) ಮೂಲಕ ಹಣವನ್ನು ಪಾವತಿಸಬೇಕು. ಅಮೆಜಾನ್ ನಿಂದ ಕ್ಯಾಶ್ ಬ್ಯಾಕ್ ಪಡೆಯಲು ನೀವು ಮಾರ್ಚ್ 1 ರಿಂದ ಏಪ್ರಿಲ್ 1, 2021ರ ಮಧ್ಯೆ ನಿಮ್ಮ ಸಿಲಿಂಡರ್ ಬುಕ್ ಮಾಡಬೇಕು. ಈ ಕೊಡುಗೆ ಮೊದಲ ಬಾರಿಗೆ ಸಿಲಿಂಡರ್ ಬುಕ್ ಮಾಡುವವರಿಗೆ ಮಾತ್ರ ಸೀಮಿತವಾಗಿದೆ. ಅಮೆಜಾನ್ ಪೆ ಯುಪಿಐ ಮೂಲಕ ಪೇಮೆಂಟ್ ಮಾಡಿದರೆ ಮಾತ್ರ ನಿಮಗೆ ಈ 50 ರೂ.ಕ್ಯಾಶ್ ಬ್ಯಾಕ್ ಸಿಗಲಿದೆ. ನೀವು ಹಣ ಪಾವತಿಸಿದ 3 ದಿನಗಳೊಳಗೆ ನಿಮ್ಮ ಅಮೆಜಾನ್ ವ್ಯಾಲೆಟ್ ನಲ್ಲಿ ಈ 50 ರೂ. ಬರಲಿದೆ.
ಇದನ್ನೂ ಓದಿ-ದೇಶದ ಈ ಭಾಗದಲ್ಲಿ ಅಗ್ಗವಾಗಲಿದೆ Electricity Bill, ನಿಮಗೂ ಸಿಗಲಿದೆಯೇ ಈ ಪರಿಹಾರ
ಇನ್ಮುಂದೆ ನೀವು ಈ ನಂಬರ್ ಮೂಲಕ ಗ್ಯಾಸ್ ಬುಕ್ ಮಾಡಬಹುದು
ಈ ಕುರಿತು ಮಾಹಿತಿ ನೀಡಿರುವ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಈ ಮೊದಲು ದೇಶದ ವಿವಿಧ ಸರ್ಕಲ್ ಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡಲು ವಿವಿಧ ನಂಬರ್ ಗಳಿರುತ್ತಿದ್ದವು. ಆದರೆ, ಪ್ರಸ್ತುತ ದೇಶದ ಅತಿ ದೊಡ್ಡ ಪೆಟ್ರೋಲಿಯಂ ಕಂಪನಿ ಎಲ್ಲಾ ಸರ್ಕಲ್ ಗಳಿಗೆ ಒಂದೇ ಮೊಬೈಲ್ ಸಂಖ್ಯೆಯನ್ನು ಜಾರಿಗೊಳಿಸಿದೆ. ಇದರರ್ಥ ಇದೀಗ ಇಂಡೆನ್ ಗ್ಯಾಸ್ (INDANE GAS) ನ ದೇಶಾದ್ಯಂತ ಇರುವ ಗ್ರಾಹಕರು LPG ಸಿಲಿಂಡರ್ ಬುಕ್ ಮಾಡಲು 7718955555 ಗೆ ಕರೆ ಅಥವಾ SMS ಮಾಡಬಹುದು.
ಇದನ್ನೂ ಓದಿ-Home Loan: SBI, HDFC ಬಳಿಕ ಗೃಹಸಾಲ ಬಡ್ಡಿದರದಲ್ಲಿ ಇಳಿಕೆ ಮಾಡಿದ ಖಾಸಗಿವಲಯದ ಅತಿದೊಡ್ಡ ಬ್ಯಾಂಕ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.