Devendra Fadnavis PC: Nawab Malik ಹಾಗೂ Dawood Ibrahim ನಂಟಿನ ಕುರಿತು ಸಾಕ್ಷಾಧಾರ ಬಹಿರಂಗಗೊಳಿಸಿದ Devendra Phadanvis
Devendra Fadnavis On Nawab Malik - ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು (ಮಂಗಳವಾರ) ಮುಂಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅವರು ನವಾಬ್ ಮಲಿಕ್ ಮತ್ತು ದಾವೂದ್ ಇಬ್ರಾಹಿಂ ನಡುವಿನ ಕನೆಕ್ಷನ್ ಕುರಿತು ಹಲವು ಸಂಗತಿಗಳನ್ನು ಬಹಿರಂಗಪಡಿಸಿದರು.
ಮುಂಬೈ: Devendra Fadnavis On Nawab Malik - ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಅವರು ಇಂದು (ಮಂಗಳವಾರ) ಮುಂಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅವರು ನವಾಬ್ ಮಲಿಕ್ (Nawab Malik) ಮತ್ತು ದಾವೂದ್ ಇಬ್ರಾಹಿಂ (Dawood Ibrahim) ನಡುವಿನ ಸಂಪರ್ಕವನ್ನು ಬಹಿರಂಗಪಡಿಸಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ನಾನು ಬಹಿರಂಗಪಡಿಸುತ್ತಿದ್ದೇನೆ ಎಂದು ದೇವೇಂದ್ರ ಫಡ್ನವೀಸ್ ಈ ಸಂದರ್ಭದಲ್ಲಿ ಹೇಳಿದ್ದಾರೆ. ಸಲೀಂ ಪಟೇಲ್ (Salim Patel) ದಾವೂದ್ ಇಬ್ರಾಹಿಂನ ಸಹಾಯಕನಾಗಿದ್ದಾನೆ. ಭೂಗತ ಲೋಕದಿಂದ ಭೂಮಿ ಖರೀದಿಸಲಾಗಿದೆ.
ನವಾಬ್ ಮಲಿಕ್ ಭೂಗತ ಜಗತ್ತಿನ ಜನರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ. ದಾವೂದ್ ಇಬ್ರಾಹಿಂ 1993ರ ಬಾಂಬ್ ಸ್ಫೋಟದ ಅಪರಾಧಿ. ನವಾಬ್ ಮಲಿಕ್ ಅವರು ಸರ್ದಾರ್ ಶಾ ವಾಲಿ ಖಾನ್ (Sardar Shah Wali Khan) ಮತ್ತು ಹಸೀನಾ ಪಾರ್ಕರ್ (Haseena Parkar) ಅವರ ಆಪ್ತ ಸಹಾಯಕ ಸಲೀಂ ಪಟೇಲ್ ಅವರೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದಾರೆ. ಇಬ್ಬರೂ ಕೋಟ್ಯಂತರ ಮೌಲ್ಯದ ಭೂಮಿಯನ್ನು ನವಾಬ್ ಮಲಿಕ್ ಅವರ ಸಂಬಂಧಿಯ ಕಂಪನಿಗೆ ಒಂದು ಪೈಸೆಗೆ ಮಾರಾಟ ಮಾಡಿದ್ದಾರೆ. ನವಾಬ್ ಮಲಿಕ್ ಕೂಡ ಈ ಕಂಪನಿಯೊಂದಿಗೆ ಕೆಲಕಾಲ ಸಂಬಂಧ ಹೊಂದಿದ್ದರು. ಕುರ್ಲಾದ ಎಲ್ ಬಿಎಸ್ ರಸ್ತೆಯಲ್ಲಿ 3 ಎಕರೆ ಜಮೀನು ಕೇವಲ 20-30 ಲಕ್ಷಕ್ಕೆ ಮಾರಾಟವಾಗಿದ್ದರೆ ಅದರ ಮಾರುಕಟ್ಟೆ ದರ 3.50 ಕೋಟಿಗೂ ಹೆಚ್ಚಾಗಿದೆ.
ಮುಂಬೈನ ಕ್ರಿಮಿನಲ್‌ಗಳಿಂದ ಏಕೆ ಭೂಮಿ ಖರೀದಿಸಿದ್ದೀರಿ ಎಂದು ದೇವೇಂದ್ರ ಫಡ್ನವೀಸ್ ಪ್ರಶ್ನಿಸಿದ್ದಾರೆ. ಅಂತಹ ಒಟ್ಟು 5 ಆಸ್ತಿಗಳಿದ್ದು, ಅವುಗಳಲ್ಲಿ 4ರ ಶೇಕಡಾ 100 ರಷ್ಟು ಭೂಗತ ಜಗತ್ತಿನ ಪಾತ್ರವನ್ನು ಹೊಂದಿವೆ. ಈ ಎಲ್ಲಾ ಪುರಾವೆಗಳನ್ನು ಎನ್‌ಸಿಪಿಯ ಶರದ್ ಪವಾರ್‌ಗೂ ಕೂಡ ತಲುಪಿಸಲಾಗುವುದು ಎಂದು ಫಡ್ನವಿಸ್ ಹೇಳಿದ್ದಾರೆ.
1993ರ ಸ್ಫೋಟ ಪ್ರಕರಣದಲ್ಲಿ ಸರ್ದಾರ್ ಶಾ ವಾಲಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಇದೀಗ ಆತ ಜೈಲಿನಲ್ಲಿದ್ದಾನೆ. ಮುಂಬೈ ಬಾಂಬ್ ಸ್ಫೋಟದ ಬಗ್ಗೆ ಆತನಿಗೆ ತಿಳಿದಿತ್ತು. ವಾಹನಗಳ ಒಳಗೆ ಸ್ಫೋಟಕಗಳನ್ನು ತುಂಬಿದ ವ್ಯಕ್ತಿಗಳಲ್ಲಿ ಆತ ಕೂಡ ಶಾಮೀಲಾಗಿದ್ದ.
ಸಲೀಂ ಪಟೇಲ್ ಮತ್ತು ಆರ್ ಆರ್ ಪಾಟೀಲ್ ಇಫ್ತಾರ್ ಕೂಟಕ್ಕೆ ಹೋದಾಗ ಓರ್ವ ಕ್ರಿಮಿನಲ್ ಜೊತೆಗೆ ಅವರು ಫೋಟೋ ತೆಗೆದುಕೊಂಡಿದ್ದರು ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಆ ಕ್ರಿಮಿನಲ್ ಇದೆ ಸಲೀಂ ಪಟೇಲ್ ಆಗಿದ್ದ. ಈತ ದಾವೂದ್ ಇಬ್ರಾಹಿಂನ ಸಹೋದರಿ ಹಸೀನಾ ಪಾರ್ಕರ್ ಅಂಗರಕ್ಷಕ, ಚಾಲಕ ಮತ್ತು ಸ್ನೇಹಿತ. ಹಸೀನಾ ಪಾರ್ಕರ್ ಜೊತೆ ಆತನನ್ನೂ ಬಂಧಿಸಲಾಗಿದೆ. ದಾವೂದ್ ಇಬ್ರಾಹಿಂ ನಂತರ ಹಸೀನಾ ಪಾರ್ಕರ್ ಖರೀದಿಸಿದ ಆಸ್ತಿ ಆತನ ಹೆಸರಿನಲ್ಲಿ ಪವರ್ ಆಫ್ ಅಟಾರ್ನಿ ಆಗಿತ್ತು.
ಕುರ್ಲಾದಲ್ಲಿ 2.87 ಎಕರೆ ಜಮೀನು, ಗೋವಾವಾಲಾ ಕಾಂಪೌಂಡ್, ಇದು ಎಲ್‌ಬಿಎಸ್ ರಸ್ತೆಯಲ್ಲಿದೆ. ನವಾಬ್ ಮಲಿಕ್ ಕೂಡ ಈ ಸ್ಥಳದಲ್ಲಿ ನೆಲೆಸಿದ್ದಾರೆ. ಈ ಜಮೀನಿನ ನೋಂದಣಿಯನ್ನು ಸಾಲಿಡಸ್ ಹೆಸರಿನ ಕಂಪನಿಯ ಹೆಸರಿನಲ್ಲಿ ಮಾಡಲಾಗಿದೆ. ಈ ಒಪ್ಪಂದವನ್ನು ಮರಿಯಮ್ ಪರವಾಗಿ ಮಾಡಲಾಗಿದೆ. ಪವರ್ ಆಫ್ ಅಟಾರ್ನಿ ಸಲೀಂ ಪಟೇಲ್. ಇನ್ನೊಂದು ಬದಿಯಲ್ಲಿ ಸರ್ದಾರ್ ಶಾ ವಾಲಿ ಇದ್ದರು. ಈ ಮಾರಾಟವನ್ನು ಸಾಲಿಡಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಮಾರಾಟ ಮಾಡಲಾಗಿದೆ, ಇದನ್ನು ಫರಾಜ್ ಮಲಿಕ್ ಸಹಿ ಮಾಡಿದ್ದಾರೆ. 2019 ರಲ್ಲಿ, ನವಾಬ್ ಮಲಿಕ್ ಕೂಡ ಈ ಕಂಪನಿಯಲ್ಲಿದ್ದರು, ನಂತರ ಅವರು ಅದನ್ನು ತೊರೆದಿದ್ದಾರೆ.
ಇದನ್ನೂ ಓದಿ-Electric Vehicle: ಎಲೆಕ್ಟ್ರಿಕ್ ವಾಹನ ಮಾಲೀಕರಿಗೆ ಈ ಸರ್ಕಾರದಿಂದ ಸಿಗಲಿದೆ ಭರ್ಜರಿ ಗಿಫ್ಟ್
ಭೂಮಿ ಖರೀದಿಸಿದಾಗ ಪ್ರತಿ ಚದರ ಅಡಿಗೆ 2053 ದರ ನಿಗದಿಪಡಿಸಲಾಗಿತ್ತು ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಮಾರುಕಟ್ಟೆ ದರದಲ್ಲಿ ಒಟ್ಟು 30 ಲಕ್ಷಕ್ಕೆ ಖರೀದಿಸಿದ್ದು, ಅದರಲ್ಲಿ 20 ಲಕ್ಷ ಪಾವತಿ ಮಾಡಲಾಗಿದೆ. ಇದರಲ್ಲಿ 15 ಲಕ್ಷ ರೂ. ಸಲೀಂ ಪಟೇಲ್ ಪಾಲಾಗಿದೆ. ಸರ್ದಾರ್ ಶಾ ವಾಲಿ ಅಲಿಯಾಸ್ ಸರ್ದಾರ್ ಖಾನ್ ಗೆ 5 ಲಕ್ಷ ರೂ. ಪಾವತಿಸಲಾಗಿದೆ. ಹೀಗೆ ಒಟ್ಟು 20 ಲಕ್ಷ ರೂಪಾಯಿಗೆ ಈ ಡೀಲ್ ನಡೆದಿದೆ.
3 ಎಕರೆ ಜಮೀನನ್ನು ಇಷ್ಟು ಅಗ್ಗವಾಗಿ ಖರೀದಿಸಿದ್ದು ಏಕೆ? ಪ್ರತಿ ಚದರ ಅಡಿಗೆ 25 ರೂ.ಗೆ ಡೀಲ್ ದೃಢಪಟ್ಟಿದ್ದು, ನಂತರ ಪ್ರತಿ ಚದರ ಅಡಿಗೆ 15 ರೂ.ಗೆ ಏಕೆ ನೀಡಲಾಯಿತು? ನವಾಬ್ ಮಲಿಕ್ ಗೆ ಸಲೀಂ ಪಟೇಲ್ ಗೊತ್ತಿಲ್ಲವೇ? ಮುಂಬೈನ ಕ್ರಿಮಿನಲ್‌ಗಳಿಂದ ನವಾಬ್ ಮಲಿಕ್ ಭೂಮಿ ಖರೀದಿಸಿದ್ದು ಏಕೆ? ಆರೋಪಿಗಳ ಮೇಲೆ ಟಾಡಾ ಕಾನೂನು ಹೇರಲಾಗಿದೆ. ಕಾನೂನು ಪ್ರಕಾರ ಆರೋಪಿಯ ಎಲ್ಲ ಭೂಮಿಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. ಟಾಡಾ ಕಾನೂನಿನಿಂದ ಭೂಮಿಯನ್ನು ಉಳಿಸಲು ಈ ಖರೀದಿ ಮತ್ತು ಮಾರಾಟವನ್ನು ನಡೆಸಲಾಗಿದೆಯೇ? ಎಂದು ಫಡ್ನವಿಸ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ-SpiceJet Ticket: ಪ್ರಯಾಣಿಕರು ಈಗ ಸುಲಭ ಕಂತುಗಳಲ್ಲಿ ವಿಮಾನದ ಟಿಕೆಟ್ ಹಣ ಪಾವತಿಸಬಹುದು..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.