SpiceJet Ticket: ಪ್ರಯಾಣಿಕರು ಈಗ ಸುಲಭ ಕಂತುಗಳಲ್ಲಿ ವಿಮಾನದ ಟಿಕೆಟ್ ಹಣ ಪಾವತಿಸಬಹುದು..!

ಪ್ರಯಾಣಿಕರು ತಮ್ಮ ಬಜೆಟ್‌ಗೆ ಅನುಗುಣವಾಗಿ ಸುಲಭ ಕಂತುಗಳಲ್ಲಿ ಹಣ ಪಾವತಿಸಲು ಅನುವು ಮಾಡಿಕೊಡುತ್ತದೆ ಎಂದು ಸ್ಪೈಸ್‌ಜೆಟ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಶಿಲ್ಪಾ ಭಾಟಿಯಾ ಹೇಳಿದ್ದಾರೆ.

Written by - Puttaraj K Alur | Last Updated : Nov 9, 2021, 01:14 PM IST
  • ಪ್ರಯಾಣಿಕರಿಗೆ ಹೊಸ ಟಿಕೆಟ್ ಪಾವತಿ ಆಯ್ಕೆಯನ್ನು ಪರಿಚಯಿಸಿದ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ
  • ‘ಪೇ ಲೇಟರ್’ ಅಥವಾ ‘ಕಾರ್ಡ್‌ಲೆಸ್ ಇಎಂಐ’ ಯೋಜನೆಯನ್ನು ಪರಿಚಯಿಸಿದ ಸ್ಪೈಸ್ ಜೆಟ್
  • ಪ್ರಯಾಣಿಕರು ವಿಮಾನದ ಟಿಕೆಟ್ ಹಣವನ್ನು 3, 6, 9 ಅಥವಾ 12 ಕಂತುಗಳಲ್ಲಿ ಪಾವತಿಸಬಹುದು
SpiceJet Ticket: ಪ್ರಯಾಣಿಕರು ಈಗ ಸುಲಭ ಕಂತುಗಳಲ್ಲಿ ವಿಮಾನದ ಟಿಕೆಟ್ ಹಣ ಪಾವತಿಸಬಹುದು..!   title=
ಪ್ರಯಾಣಿಕರಿಗೆ ಹೊಸ ಟಿಕೆಟ್ ಪಾವತಿ ಆಯ್ಕೆ

ನವದೆಹಲಿ: ಬಜೆಟ್ ಪ್ಯಾಸೆಂಜರ್ ಕ್ಯಾರಿಯರ್ ಸ್ಪೈಸ್ ಜೆಟ್(SpiceJet) ಪ್ರಯಾಣಿಕರಿಗೆ ಹೊಸ ಟಿಕೆಟ್ ಪಾವತಿ ಆಯ್ಕೆ(Easy Payment Otions)ಯನ್ನು ಪರಿಚಯಿಸಿದೆ. ಇದು ಪ್ರಯಾಣಿಕರಿಗೆ ಸುಲಭ ಕಂತುಗಳಲ್ಲಿ ವಿಮಾನದ ಟಿಕೆಟ್ ಹಣ ಪಾವತಿಸಲು ಅನುವು ಮಾಡಿಕೊಡುತ್ತದೆ. ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಯು ‘ಪೇ ಲೇಟರ್’ ಅಥವಾ ‘ಕಾರ್ಡ್‌ಲೆಸ್ ಇಎಂಐ’ ಯೋಜನೆಯನ್ನು ಪರಿಚಯಿಸಿದೆ. ಇದು ಪ್ರಯಾಣಿಕರಿಗೆ ಹೆಚ್ಚಿನ Flexibility, ಕೈಗೆಟುಕುವಿಕೆ ಮತ್ತು ಅನುಕೂಲತೆಯನ್ನು ನೀಡುತ್ತದೆ. ಪ್ರತಿಯೊಬ್ಬರೂ ಈಗ ಆನ್‌ಲೈನ್‌ನಲ್ಲಿ ಏರ್‌ಲೈನ್ ಟಿಕೆಟ್ ಅನ್ನು ಬುಕ್ ಮಾಡಬಹುದು. ಇದರ ಜೊತೆಗೆ 3, 6, 9 ಅಥವಾ 12 ಕಂತುಗಳಲ್ಲಿ ತಮ್ಮ ಟಿಕೆಟ್ ಹಣವನ್ನು ಪಾವತಿಸಬಹುದು.

‘ವಾಲ್‌ನಟ್ 369’ ಎಂಬ ಪಾವತಿ ಸೇವೆ(Walnut 369)ಯು ಕ್ಯಾಪಿಟಲ್ ಫ್ಲೋಟ್‌ನಿಂದ ಚಾಲಿತವಾಗಿದ್ದು, ಸ್ಪೈಸ್‌ಜೆಟ್ ವೆಬ್‌ಸೈಟ್‌ನ ಪಾವತಿ ಪುಟದಲ್ಲಿ ಲಭ್ಯವಿರುತ್ತದೆ. ಏರ್‌ಲೈನ್‌ನ ಪ್ರಕಾರ ಈ ಹೊಸ ವೈಶಿಷ್ಟ್ಯವು ತನ್ನ ಗ್ರಾಹಕರಿಗೆ ಸಂಪೂರ್ಣ ಕಾರ್ಡ್‌ಲೆಸ್ ಅನುಭವವನ್ನು ನೀಡುತ್ತದೆ. ಏಕೆಂದರೆ ಇಲ್ಲಿ EMI ಪಡೆಯಲು ಯಾವುದೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳ ಅಗತ್ಯವಿರುವುದಿಲ್ಲ.

ಇದನ್ನೂ ಓದಿ: Arecanut Price Today: ರಾಜ್ಯದಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ತಿಳಿಯಿರಿ...

‘ನಮ್ಮ ಇತ್ತೀಚಿನ ಉಪಕ್ರಮವು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಪ್ರಯಾಣಿಕರು ತಮ್ಮ ಬಜೆಟ್‌ಗೆ ಅನುಗುಣವಾಗಿ ಸುಲಭ ಕಂತುಗಳಲ್ಲಿ ಹಣ ಪಾವತಿಸಲು(Ticket Fares in Instalments) ಅನುವು ಮಾಡಿಕೊಡುತ್ತದೆ’ ಎಂದು ಸ್ಪೈಸ್‌ಜೆಟ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಶಿಲ್ಪಾ ಭಾಟಿಯಾ ಹೇಳಿದ್ದಾರೆ. ‘ಇದಲ್ಲದೆ ಗ್ರಾಹಕರು ಆಯ್ಕೆಮಾಡಿದ EMI ಅವಧಿಯ ಮೊದಲು ಸಾಲವನ್ನು ಕೊನೆಗೊಳಿಸಲು ಬಯಸಿದರೆ, ಅವರು ಅದೇ ರೀತಿ ಮಾಡಬಹುದು. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಅಥವಾ ಬಡ್ಡಿಯನ್ನು ವಿಧಿಸುವುದಿಲ್ಲ’ವೆಂದು ಭಾಟಿಯಾ ಹೇಳಿದ್ದಾರೆ.

ಪ್ರಸ್ತುತ ಸ್ಪೈಸ್‌ಜೆಟ್ ವಿಮಾನಯಾನ(SpiceJet Airlines)ವು Boeing 737s, Q-400s ಮತ್ತು ಸರಕು ಸಾಗಣೆ ವಿಮಾನಗಳ ಸಮೂಹವನ್ನು ನಿರ್ವಹಿಸುತ್ತಿದೆ. ಇದು UDAN ಪ್ರಾದೇಶಿಕ ಸಂಪರ್ಕ ಯೋಜನೆಯಡಿ 63 ದೈನಂದಿನ ವಿಮಾನಗಳನ್ನು ನಿರ್ವಹಿಸುವ ಅತಿದೊಡ್ಡ ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾಗಿದೆ. ಪ್ರಸ್ತುತ ಭಾರತದಲ್ಲಿ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆ ಮಾತ್ರ Boeing 737 Max aircraft ಅನ್ನು ಹೊಂದಿದೆ.

ಇದನ್ನೂ ಓದಿ: Petrol-Diesel Price Today: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?

ಭಾರತದ ವಾಯುಯಾನ ನಿಯಂತ್ರಕ ಡಿಜಿಸಿಎ(DGCA) ಇತ್ತೀಚೆಗೆ ಸುಮಾರು ಎರಡೂವರೆ ವರ್ಷಗಳ ನಂತರ Boeing 737 Max aircraft ವಾಣಿಜ್ಯ ಹಾರಾಟ ಕಾರ್ಯಾಚರಣೆಗಳ ಮೇಲಿನ ನಿಷೇಧವನ್ನು ತೆಗೆದುಹಾಕಿತ್ತು. 2019ರ ಮಾರ್ಚ್ 10 ರಂದು ಇಥಿಯೋಪಿಯನ್ ಏರ್ಲೈನ್ಸ್ 737 ಮ್ಯಾಕ್ಸ್ ವಿಮಾನ ಅಡಿಸ್ ಅಬಾಬಾ ಬಳಿ ಅಪಘಾತಕ್ಕೀಡಾಗಿ ನಾಲ್ವರು ಭಾರತೀಯರು ಸೇರಿದಂತೆ 157 ಜನರು ದುರ್ಮರಣ ಹೊಂದಿದ್ದರು. ಈ ದುರ್ಘಟನೆ ನಂತರ ಅದೇ ವರ್ಷದ ಮಾರ್ಚ್ 13ರಂದು ಭಾರತದಲ್ಲಿ ಎಲ್ಲಾ Boeing 737 Max aircraftಗಳ ಸಂಚಾರವನ್ನು ಸಿವಿಲ್ ಏವಿಯೇಷನ್ ​​​​ನಿರ್ದೇಶನಾಲಯ (DGCA) ನಿಷೇಧಿಸಿತ್ತು.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News