ನವದೆಹಲಿ:  DGCA New Air Travel Guidelines - ಮುಂಬರುವ ದಿನಗಳಲ್ಲಿ ಒಂದು ವೇಳೆ ನೀವೂ ಕೂಡ ವಿಮಾನಯಾನ ನಡೆಸಲು ಯೋಜನೆ ರೂಪಿಸುತ್ತಿದ್ದರೆ, ನೀವು ವಿಶೇಷ ರೀತಿಯ ಎಚ್ಚರಿಕೆಯನ್ನು ವಹಿಸಬೇಕು. ಏಕೆಂದರೆ ವಿಮಾನ ಪ್ರಯಾಣದ ವೇಳೆ ಒಂದು ವೇಳೆ ನೀವು ಕೊಂಚ ನಿರ್ಲಕ್ಷ ತೋರಿದರೂ ಕೂಡ DGCA ನಿಮ್ಮ ವಿರುದ್ಧ ಕಠಿಣ ಕ್ರಮ ಜರುಗಿಸುವ ಸಾಧ್ಯತೆ ಇದೆ. 


COMMERCIAL BREAK
SCROLL TO CONTINUE READING

ದೇಶಾದ್ಯಂತ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ (Coronavirus Cases In India) ಸಂಖ್ಯೆಯ ಹಿನ್ನೆಲೆ DGCA ಗಂಭೀರವಾಗಿದೆ.  ಒಂದು ವೇಳೆ ವಿಮಾನಯಾನದ ವೇಳೆ ಯಾತ್ರಿಗಳು ಮಾಸ್ಕ್ ಧರಿಸದೆ ಹೋದಲ್ಲಿ ಮತ್ತು ಕೊರೊನಾ ಮಹಾಮಾರಿಯ (Coronavirus Case)ಮಾರ್ಗಸೂಚಿಗಳನ್ನು ಅನುಸರಿಸದೆ ಹೋದಲ್ಲಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಒಂದು ವೇಳೆ ಯಾತ್ರಿಗಳು ಪದೇ ಪದೇ ತಪ್ಪನ್ನು ಪುನರಾವರ್ತಿಸಿದರೆ ಅವರ ವಿಮಾನಯಾನದ ಮೇಲೆ ಖಾಯಂ ಆಗಿ ನಿರ್ಬಂಧ ವಿಧಿಸಲಾಗುವ ಸಾಧ್ಯತೆ ಇದೆ. 


ಈ ಕುರಿತು DGCA ಜಾರಿಗೊಳಿಸಿರುವ ಸರ್ಕ್ಯೂಲರ್ ಪ್ರಕಾರ "ಏರ್ಪೋರ್ಟ್ ನಲ್ಲಿ ಯಾತ್ರಿಗಳು ಪ್ರವೇಶಿಸುವುದರಿಂದ ಹಿಡಿದು ವಿಮಾನ ನಿಲ್ದಾಣದಿಂದ ಹೊರಬೀಳುವವರೆಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಯಾತ್ರೆಯ ವೇಳೆ ಯಾತ್ರಿಗಳು ಸಾಮಾಜಿಕ ಅಂತರ ನಿಯಮ ಹಾಗೂ ಕೊರೊನಾ (Coronavirus) ಗೈಡ್ ಲೈನ್ಸ್ ಪಾಲಿಸದೆ ಹೋದಲ್ಲಿ ಅವರನ್ನು ವಿಮಾನದಿಂದ ಕೆಳಗಿಳಿಸಲಾಗುವುದು ಎಂದು ಹೇಳಲಾಗಿದೆ. ಇದರ ಜೊತೆಗೆ ಯಾರು ನಿಯಮಗಳನ್ನು ಪದೇ ಪದೇ ಉಲ್ಲಂಘಿಸುತ್ತಾರೋ ಅವರನ್ನು 'ಕಿಡಿಗೇಡಿ ಯಾತ್ರಿ'ಗಳ ಪಟ್ಟಿಗೆ ಸೇರಿಸಲಾಗುವುದು ಎಂದು ಹೇಳಲಾಗಿದೆ. 


ಇದನ್ನೂ ಓದಿ-AstraZeneca ವ್ಯಾಕ್ಸಿನ್ ನಿಂದ ರಕ್ತ ಹೆಪ್ಪುಗಟ್ಟುವಿಕೆಯ ದೂರು, ಈ ದೇಶಗಳಲ್ಲಿ ಲಸಿಕೆ ಬಳಕೆಗೆ ಬ್ಯಾನ್


DGCA ಸುತ್ತೋಲೆಯಲ್ಲಿ ಏನೇನಿದೆ? (DGCA Guidelines)
- ವಿಮಾನ ಪ್ರಯಾಣದ ಸಮಯದಲ್ಲಿ ಮುಖವಾಡ ಧರಿಸುವುದು, ಸಾಮಾಜಿಕ ದೂರವನ್ನು ಅನುಸರಿಸುವುದು ಕಡ್ಡಾಯವಾಗಿರುತ್ತದೆ.
- ಯಾವುದೇ ಅಪವಾದಾತ್ಮಕ ಪರಿಸ್ಥಿತಿ ಇಲ್ಲದೆ ಮುಖವಾಡಗಳನ್ನು ಮೂಗಿನ ಕೆಳಗೆ ಇಳಿಸಬಾರದು.
- ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರವೇಶದ ಸಮಯದಲ್ಲಿ, ಸಿಐಎಸ್ಎಫ್ ಅಥವಾ ಇತರ ಪೊಲೀಸ್ ಸಿಬ್ಬಂದಿಗಳು ಮಾಸ್ಕ್ ನೊಂದಿಗೆ ವಿಮಾನ ನಿಲ್ದಾಣದ ಒಳಗೆ ಯಾತ್ರಿಗಳ ಪ್ರವೇಶವನ್ನು ಸುನಿಶ್ಚಿತಗೊಳಿಸಲಿದ್ದಾರೆ.
- ವಿಮಾನ ನಿಲ್ದಾಣದ ಒಳಗೆ ಯಾತ್ರಿಗಳು ಸರಿಯಾಗಿ ಮಾಸ್ಕ್ ಧರಿಸಿದ್ದಾರೆಯೇ ಮತ್ತು ಅವರು ಸರಿಯಾದ ರೀತಿಯಲ್ಲಿ ಸಾಮಾಜಿಕ ಅಂತರ ನಿಯಮ ಅನುಸರುಸುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ವಿಮಾನ ನಿಲ್ದಾಣದ ನಿರ್ದೇಶಕರು/ಟರ್ಮಿನಲ್ ಮ್ಯಾನೇಜರ್ ಗಳು ಖಾತರಿಪಡಿಸಲಿದ್ದಾರೆ.


ಇದನ್ನೂ ಓದಿ-24x7 Covid-19 Vaccination:ಇನ್ಮುಂದೆ ಹಗಲು-ರಾತ್ರಿ ಯಾವಾಗ ಬೇಕಾದರೂ ಲಸಿಕೆ ಹಾಕಿಸಿಕೊಳ್ಳಬಹುದು

- ಪ್ರಯಾಣಿಕನು ವಿಮಾನ ನಿಲ್ದಾಣದ ಆವರಣದಲ್ಲಿ ಅಥವಾ ವಿಮಾನದಲ್ಲಿ ಕರೋನಾ ನಿಯಮಗಳನ್ನು ಪಾಲಿಸದಿದ್ದರೆ, ಅವನಿಗೆ ಎಚ್ಚರಿಕೆ ನೀಡಲಾಗುವದು. ಜೊತೆಗೆ ಕಾನೂನಿನ ಪ್ರಕಾರ ಅವರ ಮೇಲೆ ಕ್ರಮ ಜರುಗಿಸಲಾಗುವ ಸಾಧ್ಯತೆ ಇದೆ ಎಂದೂ ಕೂಡ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
- ಡಿಪಾರ್ಚರ್ ಗೂ ಮೊದಲು ಪ್ಲೇನ್ ನಲ್ಲಿ ಕುಳಿತ ಪ್ರಯಾಣಿಕ ಒಂದು ವೇಳೆ ಎಚ್ಚರಿಕೆಯ ಬಳಿಕವೂ ಕೂಡ ಸರಿಯಾಗಿ ಮಾಸ್ಕ್ ಧರಿಸದೆ ಹೋದಲ್ಲಿ ಆತನನ್ನು ವಿಮಾನದಿಂದ ಕೆಳಗಿಳಿಸಲಾಗುವುದು.
- ಫ್ಲೈಟ್ ವೇಳೆ ಒಂದು ವೇಳೆ  ಪ್ರಯಾಣಿಕ ಪದೇ ಪದೇ ಮಾಸ್ಕ್ ಧರಿಸಲು ನಿರಾಕರಿಸಿದರೆ ಹಾಗೂ ಕೊವಿಡ್ ಪ್ರೋಟೋಕಾಲ್ ಅನುಸರಿಸದೆ ಹೋದಲ್ಲಿ ಆತನೊಂದಿಗೆ 'ಕಿಡಿಗೇಡಿ ಯಾತ್ರಿ'ಗಳ ರೀತಿ ವ್ಯವಹರಿಸಲಾಗುವುದು. 
- ಕಿಡಿಗೇಡಿ ಯಾತ್ರಿ ಪಟ್ಟಿಯಲ್ಲಿ ಸೇರಿರುವ ಯಾತ್ರಿಗಳ ವಿಮಾನ ಪ್ರವಾಸದ ಮೇಲೆ ಖಾಯಂ ನಿರ್ಬಂಧ ವಿಧಿಸಲಾಗುವ ಸಾಧ್ಯತೆ ಇದೆ. ಹೊಸ ನಿಯಮಗಳ ಅನುಸಾರ ಈ ಬ್ಯಾನ್ 6 ತಿಂಗಳ ಅವಧಿಯಿಂದ ಹಿಡಿದು 1 ಅಥವಾ 2 ವರ್ಷಗಳ ಅವಧಿಯದ್ದಾಗಿರುವ ಸಾಧ್ಯತೆ ಇದೆ.


ಇದನ್ನೂ ಓದಿ-Covaxin IIIrd Phase Trials - ಇನ್ಯಾಕೆ ಭಯ, 3ನೇ ಹಂತದ ಟ್ರಯಲ್ ನಲ್ಲಿ ಶೇ.81 ರಷ್ಟು ಪಾಸಾದ ಸಂಪೂರ್ಣ ಸ್ವದೇಶಿ ವ್ಯಾಕ್ಸಿನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.